ಎಸ್ ಎಂ ಪಂಡಿತ್ ರಂಗಮಂದಿರ ಅಭಿವೃದ್ಧಿಗೆ ಮನವಿ

0
39

ಕಲಬುರಗಿ: ರಂಗಮಂದಿರ ಅಭಿವೃದ್ಧಿಯ ಜೊತೆಗೆ ಕಲಾವಿದರಿಗೆ ಸಂಗೀತ ಕಲಾವಿದರಿಗೆ ನೃತ್ಯ ಕಲಾವಿದರಿಗೆ ಸಹಕಾರಿಯಾಗುವಂತ ಈ ಕೆಳಗಿನ ಕೆಲವು ಸೌಲಭ್ಯಗಳು ಕಲ್ಪಿಸಿ ರಂಗಮಂದಿರಕ್ಕೆ ಅತ್ಯಾಧುನಿಕ ಉತ್ತಮ ಗುಣಮಟ್ಟದ ಕ್ಲೇರ್ ಕಂಪನಿ ಮತ್ತು ಡಿಟಿಪಿಎಸ್ ಕಂಪನಿ) ಲೈಟಿಂಗ್ ವ್ಯವಸ್ಥೆ ಮಾಡಬೇಕೆಂದು  ಆರ್ಟ್ ಥಿಯೇಟರ್ ಅದ್ಯಕ್ಷ ಸುನೀಲ ಮಾರುತಿ ಮಾನಪಡೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಅನಿರುದ್ಧ ಶ್ರವಣ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲೆಯ ಏಕೈಕ ರಂಗಮಂದಿರ ಎಸ್.ಎಂ ಪಂಡಿತ ರಂಗಮಂದಿರವಾಗಿದೆ. ಈ ರಂಗಮಂದಿರವು ಸ್ಥಾಪನೆ ಮಾಡಲು ಜಿಲ್ಲೆಯ ಕಲಾವಿದರು ಸಾಹಿತಿಗಳು ವಿದ್ಯಾರ್ಥಿಗಳು ಹಲವು ವರ್ಷಗಳ ಕಾಲ ಹೋರಾಟ ಮನವಿ ಪ್ರತಿಭಟನೆಗಳ ಫಲವಾಗಿ ಈ ರಂಗಮಂದಿರ ಸ್ಥಾಪನೆಯಾಗಿದೆ.

Contact Your\'s Advertisement; 9902492681

ರಂಗಮಂದಿರ ಪ್ರಾರಂಭವಾಗಿ ಇಲ್ಲಿಯವರೆಗೆ ಅದನ್ನು ಬಳಕೆ ಮಾಡಿಕೊಳ್ಳಲಾಗಿದೆ ಹೊರತು ಅದರ ಸಂರಕ್ಷಣೆಗೆ ಯಾವುದೇ ರೀತಿ ಕ್ರಮ ಕೈಗೊಳ್ಳದೆ ಇರುವುದರಿಂದ ಹಾಳಾಗಿ ಹೋಗಿರುತ್ತದೆ ತಮಗೆ ತಿಳಿದಿರುವಂತೆ ರಂಗ ಮಂದಿರದಲ್ಲಿ ಯಾವುದೇ ರೀತಿಯ ಮೂಲ ಸೌಕರ್ಯಗಳು ಇಲ್ಲವಾಗಿದೆ, ಇಟ್ಟಿರುವ ಎಲ್ಲಾ ಸೌಲಭ್ಯಗಳು ಹಾಳಾಗಿ ಹೋಗಿ ಕೇವಲ ಗೋಡೆಗಳು ಮಾತ್ರ ಉಳಿದಿವೆ ಇದರಿಂದಾಗಿ ರಂಗಮಂದಿರದಲ್ಲಿ ಕಾರ್ಯಕ್ರಮ ನಡೆಸಬೇಕಾದರೆ ಲೈಟಿಂಗ್, ದ್ವನಿವರ್ಧಕ, ಪರದೆಗಳು ಹೊರಗಿನಿಂದ ತರವುದರಿಂದ ಕಲಾವಿದರಿಗೆ, ಸಾಹಿತಿಗಳಿಗೆ ಇತರೆ ಕಾರ್ಯಕ್ರಮ ಆಯೋಜಕರಿಗೆ ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿದ್ದಾರೆ ಎಂದರು.

ಕಲಬುರ್ಗಿ ರಂಗಮಂದಿರದಲ್ಲಿ ಸಂಪೂರ್ಣ ಧ್ವನಿವರ್ಧಕ ಹಾಳಾಗಿ ಹೋಗಿದ್ದು (ಯು.ಎಸ್. ಬ್ರ್ಯಾಂಡ, ಕ್ಯೂ.ಎಸ್.ಸಿ. ಕಂಪನಿ, ಎನ್.ಡಿ.ಬಿ. ಕಂಪನಿ) ಉತ್ತಮ ಗುಣಮಟ್ಟದ ಧ್ವನಿವರ್ಧಕ ಅಳವಡಿಸಲು ಕ್ರಮ ಕೈಗೊಳ್ಳಬೇಕು. ರಂಗಮಂದಿರದ ವೇದಿಕೆ ಎರಡು ಬದಿಯ ಪಕ್ಕದಲ್ಲಿ ಶೌಚಾಲಯಗಳಿದ್ದು ಅವುಗಳ ಬದಲಾಗಿ ಕಲಾವಿದರಿಗೆ ಕಲಿಕಾ (ಅಭ್ಯಸ ಕೊಠಡಿ) ಕೇಂದ್ರಗಳಾಗಿ ಬದಲಾಯಿಸಬೇಕು. ರಂಗಮಂದಿರದ ಮೇಲ್ಭಾಗದಲ್ಲಿ ನಾಲ್ಕು ಕೋಣೆಗಳಿದ್ದು ಅವುಗಳನ್ನು ದುರಸ್ತಿ ಮಾಡಿ ಕಲಾವಿದರಿಗೆ ತಂಗಲು ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ರಂಗಮಂದಿರಕ್ಕೆ ಸಂಪೂರ್ಣವಾಗಿ ಎಸಿ ಹಾಗೂ ಸಿಲ್ಲಿಂಗ್ ಪ್ಯಾನಗಳು (ದೊಡ್ಡದಾದ) ಉತ್ತಮ ಗುಣಮಟ್ಟದ ಫ್ಯಾನುಗಳು ಅಳವಡಿಸಿದರೆ ತುಂಬಾ ಸಹಾಯವಾಗುತ್ತದೆ. ರಂಗಮಂದಿರ ಸುತ್ತಲು ವಿಶಾಲವಾದ ಸ್ಥಳವಿದ್ದು, ಪ್ರತ್ಯೇಕವಾದ ಗ್ರಂಥಾಲಯ ಹಾಗೂ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ರಂಗಮಂದಿರದ ದುರಸ್ತಿ ಕಾರ್ಯಕ್ಕಾಗಿ ಉತ್ತಮ ರಂಗ ಮಂದಿರ ವಿನ್ಯಾಸಗಾರರನ್ನು ಕರೆಸಿ ಅವರ ಮೂಲಕ ಮಾಹಿತಿ ಕಲೆಹಾಕಿ ದೊರಸ್ತಿ ಕಾರ್ಯ ನಡೆಸಬೇಕು. ರಂಗಮಂದಿರದ ಮೇಲ್ಚಾವಣಿ ಸಂಪೂರ್ಣವಾಗಿ ಹದಗೆಟ್ಟಿದ್ದು, ಮಳೆಗಾಲದಲ್ಲಿ ಬಾರಿ ಪ್ರಮಾಣದ ಸೋರಿಕೆಯಾಗಿ ಗೋಡೆಗಳು ತೇವ ಹಿಡಿದಿರುತ್ತವೆ. ಅದನ್ನು ಪೂರ್ಣವಾಗಿ ದುರಸ್ಥಿ ಮಾಡಲು ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ರಂಗಮಂದಿರದ ಬಾಡಿಗೆ ಹಣದಲ್ಲಿ ಸಿಬ್ಬಂದಿಗಳ ವೇತನ ಮತ್ತು ರಂಗಮಂದಿರದ ನಿರ್ವಹಣೆ ಆಗುತ್ತಿಲ್ಲ. ವೇತನ ಹಾಗೂ ನಿರ್ವಹಣೆಗಾಗಿ ನಾಲ್ಕು ಕೋಟಿ ರೂಪಾಯಿ ಠೇವಣಿ ಇಟ್ಟಿದ್ದಲ್ಲಿ ರಂಗಮಂದಿರದ ನಿರ್ವಹಣೆ ಮತ್ತು ಸಿಬ್ಬಂದಿಗಳ ವೇತನ ನೀಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು. ರಂಗಮಂದಿರದಲ್ಲಿ ಎಲ್ಲಾ ಪ್ರಕಾರದ ಕಲಾವಿದರಿಗೆ, ಸಾಹಿತಿಗಳ ಕಾರ್ಯಕ್ರಮಗಳಿಗೆ ಕಡಿಮೆ ಬಾಡಿಗೆ ಪಡೆಯಬೇಕು. ಹಾಗೂ ಸರ್ಕಾರಿ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಿಗೆ ಹಾಗೂ ಖಾಸಗಿ ಶಾಲಾ ಕಾಲೇಜುಗಳ ಕಾರ್ಯಕ್ರಮಗಳಿಗೆ ಹೆಚ್ಚಿನ ಶುಲ್ಕ ಪಡೆಯಲು ಕ್ರಮಕೈಗೊಳ್ಳಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.

ರಂಗಮಂದಿರದ ಸರ್ಕಾರಿ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಿಗೆ ಹಾಗೂ ಖಾಸಗಿ ಶಾಲಾ ಕಾಲೇಜುಗಳ ಕಾರ್ಯಕ್ರಮಗಳಲ್ಲಿ ರಂಗಮಂದಿರದ ಆಸ್ತಿ ಹಾನಿ ಮಾಡಿದರೆ ದಂಡಭರಿಸುವಂತೆ ಕ್ರಮಕೈಗೊಳ್ಳಬೇಕು. ರಂಗಮಂದಿರದ ಲೈಟಿಂಗ್ ಮತ್ತು ಧ್ವನಿವರ್ಧಕ ಹಾಗೂ ನಿರ್ವಹಣೆಗಾಗಿ ಪ್ರತ್ಯೇಕ ಅಧಿಕಾರಿಯನ್ನು ನೇಮಿಸಬೇಕು. ಮತ್ತು ಪ್ರತ್ಯೇಕ ಖಾತೆಯನ್ನು ತೆಗೆದು ಅದರ ಬಾಡಿಗೆ ಹಾಗೂ ಠೇವಣಿ ಹಣವನ್ನು ನಿರ್ವಹಣೆಗೆ ಬಳಸಿಕೊಳ್ಳುವಂತೆ ಕಟ್ಟುನಿಟ್ಟಿ ಕ್ರಮಕೈಗೊಳ್ಳಬೇಕು. ರಂಗಮಂದಿರ ಪಕ್ಕದಲ್ಲಿರುವ ಹಾಳು ಬಿದ್ದಿರುವ (ಭಾಲಭವನ ಹಿಂಭಾಗದಲ್ಲಿ) ಸಾರ್ವಜನಿಕ ಉದ್ಯಾನವನದಲ್ಲಿ ಬಯಲು ಮಂದಿರ ಪ್ರಾರಂಭಿಸಬೇಕೆಂದು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಜಿ ಸದಸ್ಯ ಸುರೇಶ ಬಡಗೇರಿ, ರಂಗ ನಿರ್ದೇಶಕ ಶಾಂತಲಿಂಗ ಮಠಪತಿ, ಕಲಾವಿದರಾದ ರಾಘವೇಂದ್ರ ಬನ್ನೂರಕರ್, ರಾಜಕುಮಾರ ಎಸ್ ಕೆ, ಅನಿಲ ಮಂಗಾ, ನಾಗರಾಜ ಗೋಗಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here