ಸುರಪುರ;ನಗರದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದ ಆವರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಸುರಪುರ,ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಸುರಪುರ,ಅಖಿಲ ಕರ್ನಾಟಕ ಜನಜಾಗೃತಿ ಟ್ರಸ್ಟ್ ಬೆಳ್ತಂಗಡಿ,ವೀರಶೈವ ಲಿಂಗಾಯತ ಸಮಿತಿ ಸೇರಿದಂತೆ ವಿವಿಧ ಸಂಸ್ಥೆಗಳ ವತಿಯಿಂದ 1634ನೇ ಮದ್ಯವರ್ಜನ ಶಿಬಿರ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದ ಸಾನಿಧ್ಯವನ್ನು ದೇವಾಪುರದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಮಹಿಸಿ ಆಶಿರ್ವಚನ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ರಾಜುಗೌಡ ಮಾತನಾಡಿ,ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಸಂಸ್ಥೆಯು ಪೂಜ್ಯರಾದ ವಿರೇಂದ್ರ ಹೆಗ್ಗಡೆಯವರ ಕೃಪಾಶಿರ್ವಾದದೊಂದಿಗೆ ರಾಜ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.ಮಹಿಳೆಯರ ಸ್ವಾವಲಂಬನೆಗಾಗಿ ಸ್ತ್ರೀಶಕ್ತಿ ಸಂಘಗಳ ಮೂಲಕ ಆರ್ಥಿಕ ನೆರವಿನೊಂದಿಗೆ ಮಾಡುತ್ತಿರುವ ಕಾರ್ಯ ಅಮೋಘವಾಗಿದೆ ಎಂದರು.ಅಲ್ಲದೆ ಇಂದು ಅನೇಕರು ದುಶ್ಚಟಗಳಿಂದ ನೆಮ್ಮದಿ ಮತ್ತು ಕುಟುಂಬದ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುತ್ತಾರೆ.ಅಂತಹ ದುಶ್ಚಟಗಳಿಂದ ಮನುಷ್ಯನನ್ನು ಹೊರತರುವ ಕಾರಣ ದಿಂದ ಇಂತಹ ಶಿಬಿರವನ್ನು ನಡೆಸುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಜಿ.ಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ),ಕಿಶೋರಚಂದ್ ಜೈನ್,ಟಿಹೆಚ್‍ಓ ಡಾ:ಆರ್.ವಿ ನಾಯಕ,ಸಂಸ್ಥೆಯ ಜಿಲ್ಲಾ ನಿರ್ದೇಶಕ ಕಮಲಾಕ್ಷ,ಬಸವರಾಜಪ್ಪ ನಿಷ್ಠಿ ದೇಶಮುಖ,ಶಾಂತಪ್ಪ ಬೂದಿಹಾಳ,ಮಲ್ಲಣ್ಣ ಸಾಹು ಮುಧೋಳ,ಜಯಲಲಿತ ಪಾಟೀಲ್,ಪ್ರಕಾಶ ಅಂಗಡಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.