ಮಾದಿಗ ಸಮಾಜದ ಸಮರ್ಥ ಆಕಾಂಕ್ಷಿ ವಿ.ರಾಮಕೃಷ್ಣಗೆ ಟಿಕೆಟ್ ನೀಡಿ

0
32

ಶಹಾಬಾದ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಲಬುರಗಿ ಗ್ರಾಮೀಣ (ಎಸ್.ಸಿ) ಮೀಸಲು ಕ್ಷೇತ್ರದಿಂದ ಸ್ಪರ್ಧೆ ಬಯಸಿ ಅರ್ಜಿ ಸಲ್ಲಿಸಿದ ಮಾದಿಗ ಸಮಾಜದ ಸಮರ್ಥ ಆಕಾಂಕ್ಷಿ ವಿಜಯಕುಮಾರ ರಾಮಕೃಷ್ಣ ಅವರಿಗೆ ಟಿಕೆಟ್ ನೀಡಬೇಕು ಎಂದು ಮಾದಿಗ ಸಮಾಜದ ಮುಖಂಡ ಕಿರಣ ಕೋರೆ ಆಗ್ರಹಿಸಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ 2 ರಿಂದ 2.5 ಲಕ್ಷ ಜನಸಂಖ್ಯೆ ಹೊಂದಿದ್ದಾರೆ.ಸದರಿ ಸಮುದಾಯವು ಪಾರಂಪರಿಕ, ಸಂಪ್ರದಾಯಿಕವಾಗಿ ಕಾಂಗ್ರೇಸ್ ಪಕ್ಷವನ್ನೇ ಬೆಂಬಲಿಸುತ್ತಾ ಬಂದಿದ್ದು,ಪ್ರತಿ ಕ್ಷೇತ್ರದ ಅಭ್ಯರ್ಥಿಗಳನ್ನು ಜಯಶಾಲಿಯನ್ನಾಗಿಸುವ ಮತ್ತು ಪರಾಭವಗೊಳಿಸುವಂತಹ ಶಕ್ತಿ ಈ ಸಮುದಾಯಕ್ಕೆ ಇದೆ. ಸಾಮಾಜಿಕ ಸಮಾನತೆ ದೊರಕದೆ ಹೋದರೆ ರಾಜಕೀಯ ಸಮಾನತೆಯ ಅರ್ಥ ಕಳೆದುಕೊಳ್ಳುತ್ತದೆ ಮತ್ತು ಸಾಮಾಜಿಕ ನ್ಯಾಯ ಮರೆಯಾಗುತ್ತದೆ.ಶತ ಶತಮಾನಗಳಿಂದ ಶೋಷಣೆಗೊಳಪಟ್ಟ ಈ
ಸಮುದಾಯ ರಾಜಕೀಯದಿಂದ ವಂಚಿತವಾಗಬಾರದು.

Contact Your\'s Advertisement; 9902492681

ಸಂವಿಧಾನದಡಿ ಕೊಡಮಾಡಿರುವ ಮೀಸಲಾತಿ ಅವಕಾಶವನ್ನು ಇವರೇ ಪಡೆಯಬೇಕು ಇಲ್ಲವಾದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ಕೊಟ್ಟಂತಹ ಸಂವಿಧಾನ ಬದ್ದ ಹಕ್ಕನ್ನು ಕಸಿದುಕೊಂಡಂತಾಗುತ್ತದೆ. ಅಲ್ಲದೇ ಮಾದಿಗ ಸಮಾಜಕ್ಕೆ ಅನ್ಯಾಯ ಮಾಡಿದಂತಾಗುತ್ತದೆ ಹಾಗಾಗಿ ಸಾಮಾಜಿಕ ನ್ಯಾಯಕ್ಕಾಗಿ ಮುಂಬರುವ 2023 ರ ವಿಧಾನ ಸಭಾ ಚುನಾವಣೆಯಲ್ಲಿ ಕಲಬುರಗಿ ಗ್ರಾಮೀಣ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರಕ್ಕೆ ಈಗಾಗಲೇ ಸ್ಪರ್ಧೆ ಬಯಸಿ ಅರ್ಜಿ ಸಲ್ಲಿಸಿರುವ ಮಾದಿಗ ಸಮಾಜದ ಅರ್ಹತೆಯುಳ್ಳ ಮತ್ತು ಗೆಲ್ಲುವ ಸಮರ್ಥವಾಗಿರುವ ವ್ಯಕ್ತಿ ವಿಜಯಕುಮಾರ ರಾಮಕೃಷ್ಣ ಅವರನ್ನು ಪಕ್ಷದ ಮಾನದಂಡಗಳ ಆಧರಿಸಿ ಪಕ್ಷದಿಂದ ಟಿಕೆಟ್ ನೀಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಿಬೇಕೆಂದು ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here