ಕಲಬುರಗಿ: ಜಯನಗರ ಬಡಾವಣೆಯಲ್ಲಿ ಸುಮಾರು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಕಲ್ಯಾಣ ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅವರು ಗುದ್ದಲಿ ಪೂಜೆ ನೆರವೇರಿಸಿದರು.
ಮಹಾನಗರ ಪಾಲಿಕೆ ಸದಸ್ಯ ವೀರಣ್ಣ ಹೊನ್ನಳ್ಳಿ, ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ, ಜಯನಗರ ಅಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎಸ್.ವಾಲಿ,ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಆರ್.ಎಸ್.ಪಾಟೀಲ, ಮುಖಂಡರಾದ ವೀರೇಶ ದಂಡೋತಿ, ಸೂರ್ಯಕಾಂತ ಕೆ.ಬಿ, ಶಿವಪುತ್ರಪ್ಪ ಮರಡಿ, ರೇವಣಸಿದ್ದಪ್ಪ ಭೋಗಶೆಟ್ಟಿ,ಹಣಮಂತರಾಯ ಪಾಟೀಲ, ವಿರಣ್ಣ ಇಂಡಿ,ಅಮೀತ ಚಿಟಗುಂಪಿ, ಉದಯಕಿರಣ ರೇಷ್ಮೆ, ಬಸವರಾಜ ಅನ್ವರಕರ, ಎಸ್. ಡಿ.ಸೇಡಂಕರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.