ಕಲಬುರಗಿ: ನಿಮ್ಮ ಜೀವನವನ್ನು ಇತರ ಜನರೊಂದಿಗೆ ಹೋಲಿಕೆ ಮಾಡಬೇಡಿ,ಸೂರ್ಯ ಮತ್ತು ಚಂದ್ರ ಇಬ್ಬರೂ ಹೊಳೆಯುತ್ತಾರೆ ಆದರೆ ಅವರದೇ ಸಮಯದಲ್ಲಿ ನೀವು ಕೂಡ ನಿಮ್ಮ ಅದ್ಭುತ ಪ್ರತಿಭೆಯೊಂದಿಗೆ ಬದುಕಿ ಸಾಧನೆಯ ಗುರಿ ಮುಟ್ಟಿ ಪರರಿಗೆ ಆದರ್ಶ ವ್ಯಕ್ತಿ ಯಾಗಬೇಕೆ೦ದು ಶಿಕ್ಷಣ ಪ್ರೇಮಿ ಎಸ್ ಕೆ ಕುಂಬಾರ ಹೇಳಿದರು.
ನಗರದ ರಾಮತೀರ್ಥ ಹತ್ತಿರವಿರುವ ಗುರು ಶಿಷ್ಯರು ಶಿಕ್ಷಣ ಸಂಸ್ಥೆಯ ಜ್ಞಾನ ಸರಸ್ವತಿ ಕ್ಲಾಸೆಸ್ ನಲ್ಲಿ ಸ್ನೇಹ ಸಂಗಮ ವಿವಿಧೋದ್ದೇಶ ಸೇವಾ ಸಂಘವು ಹಮ್ಮಿಕೊಂಡಿರುವ ಶಿಕ್ಷಣ ಪ್ರೇಮಿ ಎಸ್ ಕೆ ಕುಂಬಾರ ಅವರ 30ನೇ ವರ್ಷದ ಶೈಕ್ಷಣಿಕ ಸೇವೆಯನ್ನು ಗುರುತಿಸಿ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ಜೀವನಕಿಂತ ದೊಡ್ಡ ವಿದ್ಯಾಲಯ, ಕಷ್ಟಕ್ಕಿಂತ ದೊಡ್ಡ ಪರೀಕ್ಷೆ, ಸಮಯಕ್ಕಿಂತ ದೊಡ್ಡ ಶಿಕ್ಷಕ ಯಾವುದು ಇಲ್ಲ.ಜೀವನದಲ್ಲಿ ಕಷ್ಟಗಳನ್ನು ಎದುರಿಸಿ ಸಮಯ ಪ್ರಜ್ಞೆಯಿಂದ ಕಾರ್ಯ ಮಾಡಿದ ವ್ಯಕ್ತಿ ಇತಿಹಾಸ ನಿರ್ಮಾಣ ಮಾಡಿದ್ದಾರೆ. ಅಂಥವರ ಸಾಲಿನಲ್ಲಿ ವಿದ್ಯಾರ್ಥಿಗಳು ಸಾಗುವುದರೊಂದಿಗೆ ತಾಯಿ -ತಂದೆಯ, ಗುರುವಿನ ಋಣ ತೀರಿಸುವ ಕಾರ್ಯ ಮಾಡಲೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಸಂಘದ ಅಧ್ಯಕ್ಷರಾದ ನ್ಯಾಯವಾದಿ ಹಣಮಂತರಾಯ ಅಟ್ಟೂರ ಮಾತನಾಡುತ್ತಾ ಕುಂಬಾರರು ಮಣ್ಣನ್ನು ತಂದು ಹದ ಮಾಡಿ ಸುಂದರವಾದ ಮೂರ್ತಿ ರೂಪಿಸುವಂತೆಯೇ, ಎಸ್ ಕೆ ಕುಂಬಾರ ಸರ್ ಅವರ ಶ್ರಮದ ಫಲದಿ೦ದ ತಮ್ಮಲ್ಲಿ ಕಲಿತ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದು ಸೇವೆ ಮಾಡುತ್ತಿರುವುದು ನಮ್ಮ ಭಾಗದ ಕೀರ್ತಿ ಅಂತರಾಷ್ಟ್ರ ಮಟ್ಟಕ್ಕೆ ಕೊಂಡೊಯ್ಯುದಿರುದು ಹೆಮ್ಮೆಯ ವಿಷಯ.ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೊಂದಿಗೆ ಸಂಸ್ಕಾರದ ಸಮಾಜ ನಿರ್ಮಿಸಲೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಘದ ಸಹ ಕಾರ್ಯದರ್ಶಿ ಮಲಕಾರಿ ಪೂಜಾರಿ, ಸಕ್ಸಸ್ ಕಂಪ್ಯೂಟರ್ ತರಬೇತಿ ಕೇಂದ್ರದ, ಮುಖ್ಯಸ್ಥರಾದ ಅಸ್ಲಾಂ ಶೇಖ, ಧಾನೇಶ್ವರ ಪಾಟೀಲ,ಕವಿತಾ ಎಸ.ಕುಂಬಾರ, ಸೇರಿದಂತೆ ಸಹ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಪಾಲ್ಗೊಂಡಿದ್ದರು.