ಜಾನಪದ ಉತ್ಸವ ಜಾನಪದ ಕಲೆ ಉಳಿಸಿ ಕಲಾವಿದರನ್ನು ಬೆಳಸಿ

0
23

ಕಲಬುರಗಿ: ನಗರದ ಕಲಾಮಂಡಲದಲ್ಲಿ ಸರಸ್ವತಿ ಸಾಂಸ್ಕøತಿಕ ಕಲಾ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ನಡೆದ ಜಾನಪದ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕನ್ನಡ ಜಾನಪದ ಪರಿಷತ್ ಅಧ್ಯಕ್ಷರಾದ ಎಂ ಬಿ ನಿಂಗಪ್ಪ ಮುರುಡಿ ಉದ್ಘಾಟಿಸಿ ಮಾತನಾಡಿ ಜಾನಪದ ಕಲೆ ಈ ನಾಡಿನ ಸಂಪತ್ತು ಅದನ್ನು ನಾವು ಉಳಿಸಿ ಬೆಳೆಸಬೇಕು ಇದಕ್ಕೆ ಸಂಘ ಸಂಸ್ಥೆಗಳ ಪಾತ್ರ ಬಹಳ ಮುಖ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಘನ ಅಧ್ಯಕ್ಷತೆ ವಹಿಸಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಾಬುರಾವ್ ಕೋಬಾಳ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಜನರು ಪಾಶ್ಚಾತ್ಯ ಸಂಗೀತಕ್ಕೆ ಹೆಚ್ಚಿನ ಮೊರೆ ಹೋಗುತ್ತಿದ್ದು ನಮ್ಮ ಸಾಂಪ್ರದಾಯಿಕ ಜಾನಪದ ಗೀತೆಗಳು ತತ್ವಪದಗಳ್ ಕಡೆಗೆ ಗಮನ ಕಡಿಮೆಯಾಗುತ್ತಿದ್ದು ಇಂತಹ ಸಾಂಪ್ರದಾಯಿಕ ಗೀತೆಗಳನ್ನ ಸಾಂಪ್ರದಾಯಿಕ ಸಂಗೀತ ಶೈಲಿಯನ್ನು ಬೆಳೆಸುವದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ ಎಂದು ಹೇಳಿದರು.

Contact Your\'s Advertisement; 9902492681

ಮುಖ್ಯ ಅತಿಥಿಗಳಾದ ಆಕಾಶವಾಣಿ ಕಲಾವಿದ ಸೂರ್ಯಕಾಂತ್ ಡುಮ್ಮ, ಸಮಾಜ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಸಂಘದ ಉಪಾಧ್ಯಕ್ಷ ಶಿವಶಂಕರ್ ನಂದರಗಿ, ಗುಲ್ಬರ್ಗ ವಿಶ್ವವಿದ್ಯಾಲಯ ಮಾಜಿ ಸಿಂಡಿಕೇಟ್ ಸದಸ್ಯ ಡಾ. ಸುನಿಲಕುಮಾರ ಒಂಟಿ, ಉದ್ದೀಮೆದಾರ ಸಂತೋಷ್ ದೇವಣಿ, ಶ್ರೀದೇವಿ ಸಂಗೀತ ಸಾಹಿತ್ಯ ಛಾಯಾಚಿತ್ರ ಸಂಸ್ಥೆಯ ಕಾರ್ಯದರ್ಶಿ ಬಸವರಾಜ ತೋಟದ, ಪರ್ತಕರ್ತ ಸಂಜುಕುಮಾರ ಕಾಂಬಳೆ ಇದ್ದರು. ಟ್ರಸ್ಟ್ ಕಾರ್ಯದರ್ಶಿಯಾದ ಮಹೇಶ್ ಸಿ ದೇವಣಿ ಪ್ರಾಸ್ತಾವಿಕ ನುಡಿ ನುಡಿದರು. ನಿರುಪಣೆ ವಿಶ್ವನಾಥ ತೋಟ್ನಳ್ಳಿ ನಡೆಸಿಕೋಟ್ಟರು,

ಗಾಯನದಲ್ಲಿ : ಸುಗಮ ಸಂಗೀತ: ದತ್ತುಕುಮಾರ ದೇವಣಿ ಮತ್ತು ತಂಡ, ಜನಪದ ಗೀತೆ: ಗಂಗುಬಾಯಿ ತೋಟದ್ ಮತ್ತು ತಂಡ, ವಚನ ಗಾಯನ: ದೀಪಾ ಕಲಬುರಗಿ ಮತ್ತು ತಂಡ, ತತ್ವಪದ: ಶ್ರೀಮತಿ ಮಹಾದೇವಿ ಮುರಡಿ ಕಲಬುರಗಿ ಮತ್ತು ತಂಡ, ಜೋಗುಳ ಪದ: ಅಶ್ವಿನಿ ಕಲಬುರಗಿ ಮತ್ತು ತಂಡ ಪ್ರಸ್ತುತಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಗಮನ ಸೆಳೆದವು.

ವಿವಿಧ ಕ್ಷೇತ್ರದಲ್ಲಿ, ಸೇವೆಗೈದ ಗಣ್ಯರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು, ಪ್ರಶಸ್ತಿ ಪುರಸ್ಕೃತರಾದ, ಮಾಧ್ಯಮ ಸೇವ ರತ್ನ ಪ್ರಶಸ್ತಿ ಮಂಜುನಾಥ್ ಜಮಾದಾರ, ಆರೋಗ್ಯ ಸೇವ ರತ್ನ ಪ್ರಶಸ್ತಿ ಮಡಿವಾಳ ದೊಡ್ಮನಿ, ಜಾನಪದ ಸೇವ ರತ್ನ ಪ್ರಶಸ್ತಿ ಮಲ್ಲಪ್ಪ ದೊಡ್ಡಿ, ಶಿಕ್ಷಣ ಸೇವ ರತ್ನ ಪ್ರಶಸ್ತಿ ಅರುಂಧತಿ ದೇವಣಿ, ಕಾಯಕ ಸೇವ ರತ್ನ ಪ್ರಶಸ್ತಿ ಲಕ್ಷ್ಮಿಕಾಂತ್ ಮಕಾಶಿ , ಛಾಯಾ ಸೇವ ರತ್ನ ಪ್ರಶಸ್ತಿ ರಮೇಶ್ ಲಾಲ್ ಬುಂದ್ರೆ, ನೃತ್ಯ ಸೇವಾ ರತ್ನ ಪ್ರಶಸ್ತಿ ಕು.ಜ್ಯೋತಿ ಯನಗುಂಟಿ, ಸಮಾಜ ಸೇವಾ ರತ್ನ ಪ್ರಶಸ್ತಿ ಶರಣಗೌಡ ಪಡಶೆಟ್ಟಿ, ಸಮಾಜ ಸೇವಾ ರತ್ನ ಪ್ರಶಸ್ತಿ ಕವಿತಾ ಪವಾರ್, ಧರ್ಮ ಪ್ರಚಾರ ಸೇವಾ ರತ್ನ ಪ್ರಶಸ್ತಿ ನಾಗೇಂದ್ರ ನಿಂಬರಗಿ ರವರನ್ನು ಸನ್ಮಾನಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here