ಕಲಬುರಗಿ: ಒಳಪ್ರದೇಶದ ಮದುವೆ ಮುಂಜ್ವಿ ಯಂಥ ಕಾರ್ಯಕ್ರಮಗಳಿಗೆ ದುಂದು ವೆಚ್ಚ ಮಾಡುವುದಕ್ಕಿಂತ ಮಕ್ಕಳ ವಿದ್ಯಾಭ್ಯಾಸ ಕ್ಕೆ ಹೆಚ್ಚಿನ ಹಣ ವಿನಿಯೋಗಿಸಿದರೆ ಗುಣಮಟ್ಟದ ಶಿಕ್ಷಣ ದೊಂದಿಗೆ ದೇಶ ಅಭಿವೃದ್ಧಿ ಪಥದತ್ತ ಸಾಗಲಿದೆ ಎಂದು ಬೀದರನ ಶಾಹಿನ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ. ಅಬ್ದುಲ್ ಖದಿರ ಅಭಿಪ್ರಾಯ ಪಟ್ಟರು.
ಇಲ್ಲಿನ ಡಾ. ಎಸ್ ಎಂ. ಪಂಡಿತ್ ರಂಗಮಂದಿರದಲ್ಲಿ ಪಾಳಾ ಸುಭಾμï ಚಂದ್ರ ಪಾಟೀಲ್ ಸ್ಮಾರಕ ಜನ ಕಲ್ಯಾಣ ಟ್ರಸ್ಟ್ ನಿಂದ ಶುಕ್ರವಾರ ಹಮ್ಮಿಕೊಂಡ 6ನೇ ವರ್ಷದ ಗೌಡ ಪ್ರಶಸ್ತಿ ಸಮಾರಂಭದಲ್ಲಿ ಗೌಡ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಮದುವೆ ಹೆಸರಲ್ಲಿ ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ಎಂದ ಅವರು, ಶಿಕ್ಷಣದ ಕಡೆ ಹೆಚ್ಚಿನ ಗಮನ ಹರಿಸಬೇಕು. ಇದರಿಂದ ಮಕ್ಕಳ ಭವಿಷ್ಯದ ಉಜ್ವಲವಾಗುವುದರೊಂದಿಗೆ ಭವ್ಯ ಭಾರತಕ್ಕೆ ಶ್ರಮಿಸಬೇಕು ಎಂದರು.
ಸರ್ವ ಧರ್ಮದ ಸಹಿಷ್ಣುತೆ ಮತ್ತು ಸಮಾನತೆಯಿಂದ ಬಾಳಿದರೆ ಭಾರತ ದೇಶ ಇನ್ನೂ ಉನ್ನತ ಮಟ್ಟಕ್ಕೆ ಬೆಳೆಯುವಲ್ಲಿ ಯಾವುದೇ ಸಂದೇಹ ಇಲ್ಲ ಎಂದರು.
ಸಾನಿಧ್ಯ ವಹಿಸಿ ಆಶೀರ್ವದಿಸಿದ ಶ್ರೀನಿವಾಸ್ ಸರಡಗಿಯ ಪೂಜ್ಯ ಡಾ. ರೇವಣಸಿದ್ಧ ಶಿವಾಚಾರ್ಯರು, ಗೌಡ ಎನ್ನುವ ಪದ ಹಳ್ಳಿಯಲ್ಲಿ ಸರ್ವ ಸಮಾಜದ ಜನರನ್ನು ನ್ಯಾಯ ನೀತಿ ಮುಖಾಂತರ ಸಮಸ್ಯೆಯನ್ನು ಬಗೆಹರಿಸುವ ಕೆಲಸ ಗೌಡ ಮನೆತನದ ಜವಾಬ್ದಾರಿ ಆಗಿತ್ತು. ಗೌಡ ಎನ್ನುವುದು ಯಾವುದೇ ಜಾತಿ ಸಮುದಾಯದ ಪ್ರತೀಕವಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಬಿಜೆಪಿ ಎಸ್ ಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಡಾ. ಅಂಬಾರಾಯ ಅಷ್ಟಗಿ ಅವರು, ಇಂದಿನ ಸಮಾಜದಲ್ಲಿ ಧರ್ಮ, ರಾಜಕೀಯ, ಸಾಮಾಜಿಕ ಮತ್ತು ಎಲ್ಲಾ ರಂಗಗಳಲ್ಲಿ ಭ್ರμÁ್ಟಚಾರ ತುಂಬಿತುಳುಕುತ್ತಿದೆ. ಇದನ್ನು ಕಡಿವಾಣ ಹಾಕಬೇಕು. ಹಿಂದಿನ ಕಾಲದಲ್ಲಿ ಹಳ್ಳಿಯಲ್ಲಿ ಗೌಡರು ನ್ಯಾಯ ನೀತಿ ಹೇಳಿ ಸಮಾನತೆಯಿಂದ ಕಾಣುತ್ತಿದ್ದರು ಎಂದು ಸ್ಮರಿಸಿದರು. ಬಿಜೆಪಿ ಮುಖಂಡ ಶಿವಕಾಂತ್ ಮಹಾಜನ್ ಉದ್ಘಾಟಿಸಿದರು, ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಂಪ್ರಭು ಪಾಟೀಲ್, ಎಪಿಎಂಸಿ ಮಾಜಿ ಉಪಾಧ್ಯಕ್ಷ ರಾಜಕುಮಾರ್ ಕೋಟೆ, ಜೆಡಿಎಸ್ ನಾಯಕಿ ಮಹೇಶ್ವರಿ ವಾಲಿ, ಸದಾನಂದ ಪೆರ್ಲ, ಮುಖ್ಯ ಅತಿಥಿಗಳಾಗಿದ್ದರು.
ಪ್ರಮುಖರಾದ ಸಿದ್ದಪ್ಪ ತಳ್ಳಳ್ಳಿ, ಪ್ರಭಾಕರ ಜೋಶಿ, ಶ್ರೀಶೈಲ್ ಪಾಟೀಲ್, ಬಿ. ಎಚ್ . ನಿರಗುಡಿ, ಡಾ. ಶರಣಬಸಪ್ಪ ವಡ್ಡನಕೇರಿ, ಅಂಬಾರಾಯ ಕೋಣೆ, ಬಿ.ಎಸ್. ಮಾಲಿ ಪಾಟೀಲ, ಸಾಯಬಣ್ಣಾ ನೀಲೂರ ಉಪಸ್ಥಿತರಿದ್ದರು. ಅಂಬಾರಾಯ ಮಡ್ಡೆ ನಿರೂಪಿಸಿದರು. ಟ್ರಸ್ಟ್ ಅಧ್ಯಕ್ಷ ಶರಣಗೌಡ ಪಾಟೀಲ್ ಸ್ವಾಗತಿಸಿದರು. ನಾಗರಾಜ್ ಕಲ್ಲಾ ವಂದಿಸಿದರು. ಇದೇ ವೇಳೆಗೆ ಆರ್ಥಿಕವಾಗಿ ಹಿಂದುಳಿದ ಕು. ಸಾಕ್ಷಿ ಗೆ ಶೈಕ್ಷಣಿಕ ಶುಲ್ಕ ಭರಿಸಲು 22 ಸಾವಿರ ರೂ. ಚೆಕ್ ವಿತರಿಸಲಾಯಿತು.