ಕಲಬುರಗಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೊಶ ಮತ್ತು ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಗುಲಾಬಿ ಆಂದೋಲನ ಕಾರ್ಯಕ್ರಮ ಆಫಜಲಪುರ ತಾಲೂಕಿನ ಗೊಬ್ಬುರ್ (ಬಿ ) ಸರಕಾರಿ ಪ್ರೌಢಶಾಲೆ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದ ಜಾಥಾ ಉದ್ಘಾಟನೆಯನ್ನು ಶಿವಾನಂದ ಅಲ್ದಿ , ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಗೊಬ್ಬುರು (ಬಿ)ರವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸರಕಾರಿ ಶಾಲೆಯ ಮುಖ್ಯ ಗುರುಗಳಾದವನಕಿನಾಳರವರುಮತ್ತು ಸಿಬ್ಬಂದಿ ವರ್ಗದವರು ಹಾಗೂ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದರು. ಕಾರ್ಯಕ್ರಮ ವನ್ನುಶಶಿಧರ್ ವಿ ಬಳಿ, ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿಗಳು ನಡೆಸಿದರು.
ಜಿಲ್ಲಾ ತಂಬಾಕು ನಿಯಂತ್ರಣ ಕೊಶದ ಸೋಶಿಯಲ್ ವರ್ಕರ್ ಆದಆರತಿ ಧನ,ರವಿಚಂದ್ರ ಪೂಜಾರಿ, ಡಿ.ಇ.ಒ.ಎನ್. ಸುಧಾಕರ್, ಆರ್. ಕೆ. ಎಸ್. ಕೆ ಆಪ್ತಸಮಾಲೋಚಕರು, ಉದಯ ಅರೋಗ್ಯ ನೀರಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.
ಗುಲಾಬಿ ಆಂದೋಲನದಲ್ಲಿ ಶಾಲಾ ಮಕ್ಕಳು ತಂಬಾಕು ನಿಷೇಧ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಾ, ಬೀದಿ ಅಂಗಡಿಗಳ ಮಾಲೀಕರಿಗೆ ಗುಲಾಬಿ ಹೂವು ನೀಡಿ, ಆಂದೋಲನದ ಮೂಲಕ ಅರಿವು ಮೂಡಿಸಿ, ತಂಬಾಕು ತ್ಯಜಿಸಿ, ಇದು ಈ ಆಂದೋಲನದ ಉದ್ದೇಶ ಎಂದು ಅಂಗಡಿಗಳ ಮಾಲೀಕರಿಗೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ತಮ್ಮದೇ ಆದ ಭಾಷೆಯಲ್ಲಿ ತುಂಬಾ ಮಾರ್ಮಿಕವಾಗಿ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಆರಕ್ಷಕ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.