ವಾಲ್ಮೀಕಿ ಸಮುದಾಯದ 3 ಜನರ ಮೇಲೆ‌ ಮಾರಣಾಂತಿಕ ಹಲ್ಲೆ; ಆಸ್ಪತ್ರೆಯಲ್ಲಿ ದಾಖಲು

0
113

ಕಲಬುರಗಿ: ಜೇವರ್ಗಿ ತಾಲ್ಲೂಕಿನ ಆಂದೋಲಾ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯದ  ಮತ್ತು ಕಬ್ಬಲಿಗ ಸಮುದಾಯದ ನಡುವೆ ಘರ್ಷಣೆ ಉಂಟಾಗಿ ಥಳಿತಕ್ಕೆ ಕಾರಣಕ್ಕೆ ಕಾರಣರಾಗಿರುವ ಘಟನೆ ನಡೆದಿದೆ.

ಜನರನ್ನು ಅವಾಚ್ಯ ಶಬ್ಧಗಳಿಂದ ನಿಂಧಿಸಿ ಜೀವ ಬೆದರಿಕೆ ಒಡ್ಡಿ ಅವರ ಮೇಲೆ ದಾಳಿ ಮಾಡಿ, ಗಾಯಗೊಂಡ ವಾಲ್ಮೀಕಿ ಸಮುದಾಯದವರು ಪೋಲಿಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಿಸಿದ್ದು, ಘಟನೆಯಲ್ಲಿ ಗಾಯಗೊಂಡ ಜನರನ್ನು ಕಲಬುರಗಿಯ ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

Contact Your\'s Advertisement; 9902492681

ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯ ಕಲ್ಯಾಣಾಧಿಕಾರಿಗಳಾದ  ಅಶೋಕ ನಾಯಕ ಆಸ್ಪತ್ರೆಗೆ ಭೇಟಿ ನೀಡಿ ದೌರ್ಜನಕ್ಕೊಳಗಾದ ವಾಲ್ಮೀಕಿ ಸಮುದಾಯದ ಜನರ ಆರೋಗ್ಯ ವಿಚಾರಿಸಿದ್ದಾರೆ. ದೌರ್ಜನ್ಯಕ್ಕೆ ಪರಿಹಾರವನ್ನು ಒದಗಿಸಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿ ನೊಂದವರಿಗೆ ಧೈರ್ಯ ತುಂಬಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here