ಕಲಬುರಗಿ: ಜಿಲ್ಲೆಯ ಗಾಣಗಾಪುರದಲ್ಲಿ ಸೋಮವಾರ ನಡೆದಂತಹ ರಾಜ್ಯ ಮಟ್ಟದ ವಿಪ್ರ ಅರ್ಚಕರು ಹಾಗೂ ಪುರೇಹಿತರ ರಾಜ್ಯ ಸಮ್ಮಳನದಲ್ಲಿ ಪಾಲ್ಗಂಡಿದ್ದ ಕಾಂಗ್ರೆಸ್ ಮುಖಂಡ, ಮಾಜಿ ಎಂಎಲ್‍ಸಿ ಅಲ್ಲಂಪ್ರಭು ಪಾಟೀಲ್ ಈ ಸಮುದಾಯಕ್ಕ ಸಿಗಬೇಕಾದಂತಹ ಸವಲತ್ತುಗಳನ್ನು ಕೊಡುವಲ್ಲಿ ಸರ್ಕಾರ ವಗ್ದಾನದಂತೆ ಅನುಷ್ಠಾನಕ್ಕೆ ತರಬೇಉ ಎಂದು ಆಗ್ರಹಿಸಿದ್ದಾರೆ.
ಸಮ್ಮೇಳನದ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿರುವ ಅಲ್ಲಂಪ್ರಭು ಪಾಟೀಲರು ಪರಿಷತ್ತಿನ ರಾಜ್ಯಮಟ್ಟದ ಈ ಸಮಾವೇಶ ಅರ್ಚಕರ ಮತ್ತು ಪುರೋಹಿತರ ಕಲ್ಯಾಣಕ್ಕಾಗಿ ಶ್ರಮಿಸುವ ನಾಂದಿಗೀತೆಯಾಗಲಿ. ಸಮಾಜದಲ್ಲಿ ಧಾರ್ಮಿಕ ಸಂಸ್ಕಾರದ ಉಳಿಸಿ ಬೆಳೆಸುವಲ್ಲಿ ಪುರೋಹಿತರು ಮತ್ತು ಅರ್ಚಕರ ಪಾತ್ರ ದೊಡ್ಡದು ಎಂದಿದ್ದಾರೆ.
ಲೋಕ ಕಲ್ಯಾಣಕ್ಕಾಗಿ ಅರ್ಚಕರು- ಪುರೋಹಿತ ಸಮುದಾಯದವರು ಸದಾಕಾಲ ಪೂಜೆ- ಪುನಸ್ಕಾರದಲ್ಲಿ ತೊಡಗಿದವರಾಗಿದದಾರೆ. ಇವರಿಗೆ ಸರ್ಕಾರ 3 ಲಕ್ಷ ರು ಅನುಆನ ನೀಡುವುದಾಗಿ ನೀಡಿದ್ದ ಭರವಸೆ ಇಂದಿಗೂ ಅನು,್ಠನವಾಗಿಲ್ಲ. ತಕ್ಷಣ ಈ ಅನುದಾನ ಬಿಡುಗಡೆಯಾಗಬೇಕು. ಇವರಿಗೂ ಸರ್ಕಾರದ ನೆರವು ಸಮಯಕ್ಕೆ ಸರಿಯಾಗಿ ದೊರಕುವಂತಾಗಲಿ ಎಂದಿದ್ದಾರೆ.
ದೇಶದ ಏಳಿಗೆಯಲ್ಲಿಯೂ, ಹಿಂದಿನ ಹಲವಾರು ಸ್ವಾತಂತ್ರ್ಯ ಹೋರಾಟದಲ್ಲಿಯೂ ಈ ವರ್ಗ ಶ್ರಮಿಸಿದೆ. ಕೋರೊನಾ ಕಾಲದಲ್ಲಿ ಈ ಸಮೂಹ ಸಾಕಷ್ಟು ತೊಂದರೆಗೆ ಒಳಗಾಗಿತ್ತು. ಹೀಗಾಗಿ ಈ ಸಮುದಾಯವರಿಗೆ ಸರ್ಕಾರ ಬೆಬಂಲವಾಗಿ ನಿಲ್ಲಬೇಕು. ಜೊತೆಗೇ ಕೇಂದ್ರ ಜಾರಿಗೆ ತಂದಿರುವ ಆರ್ಥಿಕ ಹಿಂದುಳಿದವರಿಗೆ ಮೀಸಲು ನೀಡುವ ನಿಯಮ ಬೇಗ ರಾಜ್ಯದಲ್ಲಿಯೂ ಜಾರಿಗೆ ತರುವ ಊಲಕ ಈ ಸಮೂಹಕ್ಕೆ ಸರ್ಕಾರ ನೆರವಿನ ಹಸ್ತ ಚಾಚಬೇಕು ಎಂದು ಅಲ್ಲಂಪ್ರಭು ಪಾಟೀಲ್ ಆಗ್ರಹಿಸಿದ್ದಾರೆ.
ಗಾಣಗಾಪುರದಲ್ಲಿ ಇಂದು ನಡೆದ ರಾಜ್ಯಮಟ್ಟದ ವಿಪ್ರ ಅರ್ಚಕರ ಮತ್ತು ಪುರೋಹಿತರ ಸಮಾವೇಶ ಬಹಳ ಯಶಸ್ವಿಯಾಗಿ ನೆರವೇರಿತು. ಈ ಸಮಾವೇಶದ ಯಶಸ್ಸಿಗಾಗಿ ಶ್ರಮಿಸಿದ ಕಲಬುರಗಿ ಜಿ¯್ಲÉಯ ಸಂಘದ ಎ¯್ಲÁ ಪದಾಧಿಕಾರಿಗಳಿಗೆ ಅಭಿನಂದನೆಗಳು. ವಿಶೇಷವಾಗಿ ಪರಿಷತ್ತಿನ ಜಿ¯್ಲÁ ಅದ್ಯP್ಷÀರಾದ ಗುಂಡಾಚಾರ್ಯ ನರಿಬೋಳ ಅವರಿಗೆ ಅಭಿನಂದನೆಗಳನ್ನು ಅಲ್ಲಂಪ್ರಭು ಪಾಟೀಲರು ತಿಳಿಸಿದ್ದಾರೆ.
ಗಾಣಾಪುರದಲ್ಲಿ ಸೋಮವಾರ ಬೆಳಗ್ಗೆಯೇ ಭೇಟಿ ನೀಡಿದ್ದ ಅಲ್ಲಂಪ್ರಭು ಪಾಟೀಲ್ ಅಲ್ಲಿ ನಡೆದಂತಹ ಪೂಜಾದಿಗಳಲ್ಲಿ ಭಾಗವಹಿಸಿದ್ದರು. ನಂತರ ನಡೆದ ಗಾಯತ್ರಿ ಮೆರವಣಿಗೆ, ಸಮಾವೇಶದ ಕಲಾಪಗಳಲ್ಲಿ ಪಾಲ್ಗೊಂಡಿದ್ದರು.