ಉತ್ತಮ ಬದುಕಿಗೆ ದೈಹಿಕ ಜೊತೆಗೆ ಮಾನಸಿಕ ಆರೋಗ್ಯ ಮುಖ್ಯ

0
17

ಕಲಬುರಗಿ: ಪ್ರತಿಯೋಬ್ಬರ ಮನುಷ್ಯ ದೈ‌ಹಿಕವಾಗಿ ಸದೃಢ ಇದ್ದರಷ್ಟೇ ಸಾಲದು. ಮಾನಸಿಕವಾಗಿ ಆರೋಗ್ಯ ಹೊಂದುವುದು ಮುಖ್ಯ ಎಂದು ಸಾಹಿತಿ ಚಿಂತಕ ಜಿ.ಜಿ.ವಣಿಕ್ಯಾಳ ಅಭಿಪ್ರಾಯಪಟ್ಟರು.

ಜಯನಗರ ಶಿವಮಂದಿರದಲ್ಲಿ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಆರೋಗ್ಯ ಬದುಕು ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯ ಹೊಂದಿದ ವ್ಯಕ್ತಿ ಜೀವನದಲ್ಲಿ ಎನು ಬೇಕಾದರು ಸಾಧನೆ ಮಾಡಬಹುದು.ಆರೋಗ್ಯ ಕೆಟ್ಟರೆ ಬದುಕು ಭಾರವಾಗುತ್ತದೆ.ಆದ್ದರಿಂದ ದಿನ ನಿತ್ಯ ಯೋಗಾಭ್ಯಾಸ ಹಾಗೂ ಸಮತೋಲನ ಆಹಾರದ ಕಡೆ ಗಮನಹರಿಸಬೇಕು ಎಂದ ಅವರು ಜಂಜಾಟದ ಬದುಕಿನಿಂದ ದೂರವಿದ್ದು, ಸಂತೋಷದಿಂದ ದಿನ ಕಳೆಯಬೇಕು ಎಂದರು.

Contact Your\'s Advertisement; 9902492681

ಇನ್ನೋರ್ವ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ನಿವೃತ್ತ ನರ್ಸಿಂಗ್ ಅಧೀಕ್ಷಕ ವಿನೋದ ಪಾಟೀಲ್ ಇಂದಿನ ಯುವಕರು ತಂಬಾಕು ಹಾಗೂ ಗುಟ್ಕಾ ಮತ್ತು ಸಿಗರೇಟು ಸೇದುವ ಚಟಕ್ಕೆ ಬಲಿಯಾಗಿ ಜೀವನಪೂರ್ತಿ ನರಳಲಾಡುತ್ತಾರೆ.ಮಾನಸಿಕವಾಗಿಯೂ ಕುಗ್ಗಿ ಉತ್ಸಾಹ ಕಳೆದು ಕೊಳ್ಳುತ್ತಾರೆ.ಇದನ್ನು ತಪ್ಪಿಸಲು ಪಾಲಕರು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವ ಜೊತೆಗೆ ತಿಳಿಹೇಳುವ ಕೆಲಸಕ್ಕೆ ಮುಂದಾಗಬೇಕು ಎಂದರು.

ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಅತಿಥಿಗಳಾಗಿ ವಿರೇಶ ದಂಡೋತಿ, ಭೀಮಾಶಂಕರ ಶೆಟ್ಟಿ ವೇದಿಕೆಮೇಲೆ ಇದ್ದರು.ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಕೆ.ಬಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯದರ್ಶಿ ಶಿವಪುತ್ರಪ್ಪ ಮರಡಿ, ಕೋಶಾಧ್ಯಕ್ಷ ಬಸವರಾಜ ಮಾಗಿ, ಹಿರಿಯ ಸದಸ್ಯರಾದ ಬಸವರಾಜ ಅನ್ವರಕರ, ವಾಸುದೇವ ಮಾಲಿ ಬೀರಾದರ, ಬಂಡೆಪ್ಪ ಕೇಸೂರ, ಎಸ್.ಡಿ.ಸೇಡಂಕರ, ಶಿವಕುಮಾರ ಪಾಟೀಲ್,ಬಡಶೇಷಿ, ಶ್ರೀಮತಿ ಅನುರಾಧ ಕುಮಾರಸ್ವಾಮಿ, ಪ್ರಶಾಂತ ತಂಬೂರಿ,ಜೈ ಭೀಮ್ ಸಾಲೇಗಾಂವ ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here