ಬಸವಾದಿ ಶರಣರಿಗೆ ಬದುಕಿನ ಎಲ್ಲ ಕ್ಷೇತ್ರಗಳ ಕುರಿತು ಅರಿವಿತ್ತು

0
23

ಕಲಬುರಗಿ: ಬಸವಣ್ಣನವರು ತಮ್ಮ ವಚನಗಳ ಮೂಲಕ ಇಡೀ ಜಗತ್ತಿಗೆ ಬೆಳಕನ್ನು ನೀಡಿದವರು. ಅಂದಿನ ಕಾಲದಲ್ಲೇ ಬಸವಾದಿ ಶರಣರಿಗೆ ಕಲೆ ಹಾಗೂ ಸಂಗೀತದ ಬಗ್ಗೆ ತಿಳಿದಿತ್ತು ಎಂಬದುಕ್ಕೆ ಅವರ ವಚನಗಳಲ್ಲಿ ಬರುವ ಬಿತ್ತಿ ಹಾಗೂ ಬತ್ತೀಸ ಪದಗಳನ್ನು ಗಮನಿಸಬಹುದು ಎಂದು ಕೂಡಲಸಂಗಮದ ಬಸವ ಕಲಾನಿಕೇತನ ಸಂಗ್ರಹಾಲಯದ ಅಧ್ಯಕ್ಷ ಡಾ. ಬಸವರಾಜ ಅನಗವಾಡಿ ಅಭಿಪ್ರಾಯಪಟ್ಟರು.

ಬಸವ ಸಮಿತಿ ಹಾಗೂ ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಜಯನಗರದ ಅನುಭವ ಮಂಟಪದಲ್ಲಿ ಆಯೋಜಿಸಿದ್ದ ಸುಭಾಶ್ಚಂದ್ರ ಬಿ. ಉಪ್ಪಿನ್ ಸ್ಮರಣಾರ್ಥ 737ನೇ ಅರಿವಿನ ಮನೆ ಕಾರ್ಯಕ್ರಮ ಹಾಗೂ ಲಿಂ. ಪೂಜ್ಯಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ನುಡಿನಮನ ಕಾರ್ಯಕ್ರಮದಲ್ಲಿ “ದೃಶ್ಯಕಲೆಯಲ್ಲಿ ಬಸವಣ್ಣನವರ ಚಿತ್ರಣ” ವಿಷಯ ಕುರಿತು ಅನುಭಾವ ಮಂಡಿಸಿದ ಅವರು, ಲೋಹ, ಮರ, ಫೈಬರ್ ಗ್ಲಾಸ್, ಚಿತ್ರಕಲೆ, ಪೇಂಟಿಂಗ್. ರೇಖೆಗಳ ಮಾಧ್ಯಮ ಬಳಸಿ ಸಹಸ್ರಾರು ಚಿತ್ರಗಳು ತಮ್ಮ ಬಸವ ಕಲಾ ನಿಕೇತನ ಸಂಗ್ರಹಾಲಯದಲ್ಲಿವೆ ಎಂದು ತಿಳಿಸಿದರು.

Contact Your\'s Advertisement; 9902492681

ಬಸವಣ್ಣನವರ ಹುಟ್ಟಿನಿಂದ ಅವರು ಲಿಂಗೈಕ್ಯರಾಗುವವರೆಗಿನ ಅನೇಕ ಚಿತ್ರಗಳು ಹಾಗೂ ಅನುಭವ ಮಂಟಪದ ದೃಶ್ಯಗಳು ಒಂದೇ ಕಡೆ ನೋಡಬಹುದು ಎಂದು ಹೇಳಿದ ಅವರು, 100 ದೃಶ್ಯಕಲೆಗಳನ್ನು ಪ್ರದರ್ಶಿಸಿ ಅವುಗಳ ಬಗ್ಗೆ ಸಮಗ್ರ ವಿವರಣೆ ನೀಡಿದರು.

ಇದೇ ವೇಳೆಯಲ್ಲಿ ಲಿಂ. ಪೂಜ್ಯಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಕುರಿತು ಡಾ. ವೀರಣ್ಣ ದಂಡೆ ನುಡಿನಮನ ಸಲ್ಲಿಸಿದರು. ಅಧ್ಯಕ್ಷತೆ ವಹಿಸಿದ್ದ ಸಿಯುಕೆ ಸಹ ಪ್ರಾಧ್ಯಾಪಕ ಡಾ. ಶಿವಾನಂದ ಭಂಟನೂರ ಮಾತನಾಡಿ, ದೃಶ್ಯ ಮಾಧ್ಯಮದ ಮೂಲಕ ಶರಣರು ಹಾಗೂ ಅವರ ವಿಚಾರಗಳನ್ನು ಹೇಳುವುದು ಸಾಧ್ಯವಿದೆ ಎಂಬುದನ್ನು ಅನಗವಾಡಿಯವರು ಸಾಬೀತುಪಡಿಸಿದ್ದಾರೆ ಎಂದರು.

ಕಲಬುರಗಿ ಬಸವ ಕೇಂದ್ರದ ಅಧ್ಯಕ್ಷೆ ಡಾ. ವಿಲಾಸವತಿ ಖೂಬಾ, ದತ್ತಿ ದಾಸೋಹಿ ಮಹಾದೇವಿ ಎಸ್. ಉಪ್ಪಿನ್ ವೇದಿಕೆಯಲ್ಲಿದ್ದರು. ಎಚ್.ಕೆ. ಉದ್ದಂಡಯ್ಯ ನಿರೂಪಿಸಿ ವಂದಿಸಿದರು. ಡಾ. ಕೆ.ಎಸ್. ಮಾಲಿಪಾಟೀಲ, ಎಸ್.ವಿ. ಹತ್ತಿ ಇತರರಿದ್ದರು.

ಪೂಜ್ಯಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಪ್ರವಚನ ಬಹಳ ಪರಿಣಾಮಕಾರಿಯಾಗಿತ್ತು. ಜನರನ್ನು ಹಿಡಿದಿಡುವ ಶಕ್ತಿ ಅವರ ಪ್ರವಚನಗಳಲ್ಲಿದ್ದವು. ಯಾರಿಗೂ ಭಾರವಾಗದ, ಯಾರಿಂದಲೂ ಏನನ್ನೂ ಅಪೇಕ್ಷಿಸದ ಜೀವ ಅದು. ಸಿದ್ಧೇಶ್ವರ ಸ್ವಾಮೀಜಯವರು ತಮಗೆ ಏನೂ ಬೇಡ ಎಂದರು. ಆದರೆ ಅವರ ಅನುಯಾಯಿಗಳಾದವರು ಅವರ ವಿಚರಗಳನ್ನು ಉಳಿಸಿಕೊಳ್ಳುವ ಕರ್ತವ್ಯ ಮಾಡಬೇಕು. ಸಿದ್ಧೇಶ್ವರಶ್ರೀಗಳು ರಚಿಸಿದ 30ಕ್ಕೂ ಹೆಚ್ಚು ಕೃತಿಗಳನ್ನು 7 ಸಂಪುಟಗಳಲ್ಲಿ ಪ್ರಿಂಟ್ ಮಾಡಿ ಹೊರ ತರುವ ಕೆಲಸವನ್ನು ಜೆಎಸ್‍ಎಸ್ ಮಠದಿಂದ ಆಗುತ್ತಿರುವುದು ಬಹಳ ಮಹತ್ವದ ಕೆಲಸ. -ಡಾ. ವೀರಣ್ಣ ದಂಡೆ, ನಿರ್ದೇಶಕರು, ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಕಲಬುರಗಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here