ಆನೆಕಾಲು ಮುಕ್ತ ಸಮಾಜಕ್ಕೆ ಕೈಜೋಡಿಸಿ

0
37

ಕಲಬುರಗಿ: ಪ್ರಾಥಮಿಕ ಆರೋಗ್ಯ ಕೇಂದ್ರ ಗೊಬ್ಬುರ್ ಬಿ ವ್ಯಾಪ್ತಿಯಲ್ಲಿ ಬರುವ 20 ಗ್ರಾಮಗಳು ಹಾಗೂ ನಾಲ್ಕು ತಾಂಡಗಳಲ್ಲಿ ಆನೆಕಾಲು ರೋಗ ಬರದಂತೆ ತ್ರಿವಳಿ ಔಷಧಗಳನ್ನು ತಮ್ಮ ಮನೆಯ ಬಾಗಿಲಿಗೆ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಇಲಾಕ ಸಿಬ್ಬಂದಿಗಳು ಬಂದಾಗ ಯಾವುದೇ ನೆಪ ಹೇಳದೆ ಊಟ ಮಾಡಿ ಸೇವಿಸಿ ಆನೆಕಾಲು ರೋಗದಿಂದ ಪಾರಾಗಿ ಹಾಗೂ ಮುಂದಿನ ಪೀಳಿಗೆಗೆ ಬರದಂತೆ ಮಾಡುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಳೆ ಕರೆ ನೀಡಿದರು.

ಎರಡು ವರ್ಷದ ಒಳಗಿನ ಮಕ್ಕಳು ಹಾಗೂ ಗರ್ಭಿಣಿಯರನ್ನು ಮತ್ತು ದೀರ್ಘ ಕಾಯಿಲೆಯಿಂದ ಬಳಲುತ್ತಿರುವನು ಹೊರತುಪಡಿಸಿ ಎಲ್ಲರೂ ಊಟದ ನಂತರ ಸೇವಿಸಿ. ಆನೆಕಾಲು ಮುಕ್ತವಾಗಿಸಲು ಎಲ್ಲಾ ಜನಪ್ರತಿನಿಧಿಗಳು, ಎಲ್ಲಾ ಇಲಾಖೆಗಳು, ಎಲ್ಲಾ ವಿದ್ಯಾವಂತರು ಸಮುದಾಯದಲ್ಲಿ ತಿಳಿಯಲಾರದ ಅವರಿಗೆ ತಿಳಿಯಪಡಿಸಿ ತಮ್ಮ ಗ್ರಾಮವನ್ನು ಹಾಗೂ ತಾಲೂಕವನ್ನು ಆನೆಕಾಲ ಮುಕ್ತ ಮಾಡಿ ಎಂದು ಕಿವಿಮಾತು ಹೇಳಿದರು.

Contact Your\'s Advertisement; 9902492681

ನೆರೆಯ ಜಿಲ್ಲೆ, ರಾಯಚೂರಿನಲ್ಲಿ ಹಾಗೂ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಇದು ಸಂಪೂರ್ಣ ನಿವಾರಣೆಯಾಗಿದ್ದು ನಮ್ಮ ಕಲ್ಯಾಣ ಕರ್ನಾಟಕದಲ್ಲಿ ನಿವಾರಣೆಯಾಗಬೇಕಾದರೆ ತಮ್ಮೆಲ್ಲರ ಸಹಕಾರದೊಂದಿಗೆ ಇದನ್ನು ಮುಕ್ತ ಮಾಡಲು ಪಣತೊಡೋಣ, ಕಾರ್ಯಕ್ರಮದ ಸಾಂಕೇತಿಕ ಚಾಲನೆಯನ್ನು ಜಿಲ್ಲಾ ಕಾರ್ಯಾಲಯದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸತ್ಯನಾರಾಯಣ ಅವರು ಮಾತ್ರೆಯನ್ನು ನುಂಗಿಸುವುದರ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳಾದ ಡಾ. ದೇವಪ್ರಸಾದ್, ಡಾಕ್ಟರ್ ಸುಷ್ಮಾ, ಜಿಲ್ಲಾ ವಿ ಬಿ ಡಿ ಸಿ ಕಾರ್ಯಾಲಯದ ಶಫಿ ಪಟೇಲ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸಯ್ಯದ್ ಆಸ್ಮಿ, ಆಪ್ತ ಸಮಾಲೋಚಕ ಎನ್ ಸುಧಾಕರ್, ಫಯಾಜ್ ಅಹ್ಮದ್ ಜೈ ಭೀಮ್, ಆಶಾ ಮಲ್ಲಮ್ಮ ಹಾಗೂ ಸಾರ್ವಜನಿಕರು ಭಾಗಿಯಾಗಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here