ಪ್ರಧಾನಿ ಮೋದಿ ಅವರಿಂದ 51,900 ಜನರಿಗೆ ಹಕ್ಕು ಪತ್ರ ವಿತರಣೆ: ಶಾಸಕ ತೆಲ್ಕೂರ್

0
15

ರಾಷ್ಟ್ರಕೂಟರ ರಾಜಧಾನಿಯಾಗಿದ್ದ, ಹರಳಯ್ಯನ ಪಾದುಕೆ ಇರುವ, ಟೀಕಾಚಾರ್ಯರ ವೃಂದಾವನವಿರುವ ಐತಿಹಾಸಿಕ ಮಳಖೇಡನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಮಾರಂಭ ನಡೆಯುತ್ತಿರುವುದು ಆ ಕ್ಷೆತ್ರದ ಶಾಸಕನಾಗಿರುವ ನನಗೆ ವೈಯಕ್ತಿಕವಾಗಿ ತುಂಬಾ ಸಂತೋಷ ಹಾಗೂ ಅಭಿಮಾನದ ಸಂಗತಿ. – ರಾಜಕುಮಾರ ಪಾಟೀಲ ತೆಲ್ಕೂರ್, ಶಾಸಕರು, ಸೇಡಂ.

ಕಲಬುರಗಿ: ಹತ್ತಾರು ವರ್ಷಗಳಿಮದ ನನೆಗುದಿಗೆ ಬಿದ್ದಿದ್ದ ಹಟ್ಟಿ, ತಾಂಡಾಗಳಲ್ಲಿ ವಾಸಿಸುವ ಜನರಿಗೆ ಹಕ್ಕು ಪತ್ರಗಳನ್ನು ವಿತರಿಸುವ ಮಹತ್ವದ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಜ. 19 ರಂದು ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ( ಮಾನ್ಯಖೇಟ) ದಲ್ಲಿ  ವಿತರಿಸಲಿದ್ದಾರೆ ಎಂದು ಕೆಕೆಆರ್ ಟಿಸಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ ಸೇಡಂ ಕ್ಷೇತ್ರದ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ತಿಳಿಸಿದರು.

Contact Your\'s Advertisement; 9902492681

ಒಂದೇ ವೇದಿಕೆಯಲ್ಲಿ 51, 900 ಜನರಿಗೆ ಹಕ್ಕು ಪತ್ರಗಳನ್ನು ವಿತರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದ್ದು, ಇμÉ್ಟೂಂದು ಸಂಖ್ಯೆಯಲ್ಲಿ ಹಕ್ಕು ಪತ್ರ ವಿತರಿಸುತ್ತಿರುವುದು ಗಿನ್ನಿಸ್ ದಾಖಲೆಯಲ್ಲಿ ಸೇರ್ಪಡೆಯಾಗಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಕಾರ್ಯಕ್ರಮಕ್ಕೆ 2,500 ಬಸ್‍ಗಳ ಹಾಗೂ 10 ಸಾವಿರ ನಾಲ್ಕು ವಾಹನಗಳ ವ್ಯವಸ್ಥೆ ಮಾಡಲಾಗಿದ್ದು, ಒಂದು ಕುಟುಂಬದಿಂದ 4-5 ಸದಸ್ಯರಂತೆ ಭಾಗವಹಿಸುವ ಐದು ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಎಲ್ಲ ವಾಹನಗಳಿಗೆ ಪಾಕಿರ್ಂಗ್ ವ್ಯವಸ್ಥೆ, ಟೆಂಟ್ ಕಾರ್ಯವೆಲ್ಲ ಸುಮಾರು 60 ಎಕರೆ ಪ್ರದೇಶದಲ್ಲಿ ನಡೆದಿದೆ ಎಂದು ತಿಳಿಸಿದರು.

ಪ್ರಧಾನಿಗಳ ಜತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್. ಅಶೋಕ,  ತಾಂಡಾದ ಅಭಿವೃದ್ಧಿ ನಿಗಮದ ಅಧ್ಯಕ್ಷರು ಸೇರಿ ಇತರ ಗಣ್ಯರು ಪಾಲ್ಗೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಸಂದರ್ಭದಲ್ಲಿ ಹತ್ತಾರು ಸಾವಿರ ಕೋಟಿ ರೂ. ಮೊತ್ತದ ವಿವಿಧ ಯೋಜನೆಗಳಿಗೆ ಚಾಲನೆ ನೀಡುವರು. ಪ್ರಧಾನಿ ಅವರ ಈ ಪ್ರವಾಸ ಅಭಿವೃದ್ಧಿ ಗೆ ಚಾಲನೆ ದೊರಕಲಿದೆ ಎಂದರು.

ಮಳಖೇಡ ಐತಿಹಾಸಿಕ ರಾಷ್ಟ್ರಕೂಟರ ಕೋಟೆ ಪುನರುತ್ಥಾನದ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಅದಲ್ಲದೇ ರಾಷ್ಟ್ರ ಕೂಟ ಉತ್ಸವಕ್ಕೆ ರಾಜ್ಯ ಸರ್ಕಾರದಿಂದ ಒಂದು ಕೋಟಿ ರೂ ಬಿಡುಗಡೆಯಾಗಿದೆ. ಬರುವ ಫೆಬ್ರವರಿಯಲ್ಲಿ ಉತ್ಸವ ನೆರವೇರಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಶಾಸಕ ಬಸವರಾಜ ಮತ್ತಿಮಡು, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ನಗರಾಧ್ಯಕ್ಷ ಸಿದ್ದಾಜಿ ಪಾಟೀಲ್, ಸಂಗಮೇಶ ವಾಲಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here