ಕಲಬುರಗಿ: ಪೊಲೀಸ್ ತರಬೇತಿ ಕೇಂದ್ರದ ಬಸಪ್ಪ ಕುಂಬಾರಗೆ ಕೇಂದ್ರ ಗೃಹ ಸಚಿವರ ಪದಕ

0
178

ಕಲಬುರಗಿ: ಜಿಲ್ಲೆಯ ನಾಗೇನಹಳ್ಳಿಯ ಪೊಲೀಸ್ ತರಬೇತಿ ಕೇಂದ್ರದ ಸಿಬ್ಬಂದಿ ಬಸಪ್ಪ ಆಶಪ್ಪ ಕುಂಬಾರ ಅವರಿಗೆ ಪೊಲೀಸ್ ತರಬೇತಿಯಲ್ಲಿ ತೋರಿದ ಪರಿಣಾಮಕಾರಿ ಮತ್ತು ದಕ್ಷತೆಗಾಗಿ ಕೇಂದ್ರ ಗೃಹ ಸಚಿವರ ಪದಕ(ಯೂನಿಯನ್ ಹೋಂ ಮಿನಿಸ್ಟರ್ಸ್ ಮೇಡಲ್ ಫಾರ್ ಎಕ್ಸಲೆನ್ಸ್ ಇನ್ ಪೊಲೀಸ್ ಟ್ರೇನಿಂಗ್)ಕ್ಕೆ ಪಾತ್ರರಾಗಿದ್ದಾರೆ.

ಭಾರತ ಸರಕಾರದ ಗೃಹ ಸಚಿವಾಲಯದ ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ 2021-22ನೇ ಸಾಲಿಗೆ ಕೇಂದ್ರ ಗೃಹ ಸಚಿವರ ಪದಕಕ್ಕೆ ಪಾತ್ರರಾಗಿದ್ದಾರೆ. ಬಸಪ್ಪ ಆಶಪ್ಪ ಕುಂಬಾರ ಸೇರಿದಂತೆ ಕರ್ನಾಟಕದ 10ಜನರು ಈ ಪದಕಕ್ಕೆ ಆಯ್ಕೆಯಾಗಿದ್ದಾರೆ.

Contact Your\'s Advertisement; 9902492681

ಬಸಪ್ಪ ಸೇರಿದಂತೆ ಕೇಂದ್ರ ಗೃಹ ಸಚಿವರ ಪದಕಕ್ಕೆ ಭಾಜನರಾಗಿರುವ ಎಲ್ಲರಿಗೂ ಅಭಿನಂದನೆಗಳು ಸಲ್ಲಿಸಿರುವ ಭಾರತ ಸರಕಾರದ ಗೃಹ ಸಚಿವಾಲಯದ ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕ ಬಾಲಾಜಿ ಶ್ರೀವಾತ್ಸವ್ ಅವರು ಇನ್ಮುಂದೆಯೂ ಪೊಲೀಸ್ ಪಡೆಗಳಿಗೆ ಸುಧಾರಿತ ಮತ್ತು ಗುಣಮಟ್ಟದ ಪರಿಣಾಮಕಾರಿಯಾದ ತರಬೇತಿ ನೀಡುವುದರ ಮೂಲಕ ದೇಶಕ್ಕೆ ಕೊಡುಗೆ ನೀಡಬೇಕು ಎಂದು ಅವರು ಹೇಳಿದ್ದಾರೆ.

ಬಸಪ್ಪ ಆಶಪ್ಪ ಕುಂಬಾರ ಅವರಿಗೆ ಕೇಂದ್ರ ಗೃಹ ಸಚಿವರ ಪದಕ ಲಭಿಸಿರುವುದಕ್ಕೆ ನಾಗನಹಳ್ಳಿ ಪೊಲೀಸ್ ತರಬೇತಿ ಕೇಂದ್ರದ ಪೊಲೀಸ್ ಅಧೀಕ್ಷಕರು ಹಾಗೂ ಪ್ರಾಂಶುಪಾಲರಾದ ಡಾ.ಅರುಣ್ .ಕೆ. ಹಾಗೂ ಈ ಹಿಂದಿ‌ನ ಪೊಲೀಸ್ ತರಬೇತಿ ಕೇಂದ್ರದ ಪೊಲೀಸ್ ಅಧೀಕ್ಷಕರು ಹಾಗೂ ಪ್ರಾಂಶುಪಾಲರಾಗಿದ್ದ ಪೊಲೀಸ್ ನೇಮಕಾತಿ ವಿಭಾಗದ ಡಿಐಜಿ ಇಡಾ ಮಾರ್ಟಿನ್ ಮಾರ್ಬನಿಂಗ್,ಅಧಿಕಾರಿಗಳು ಮತ್ತು ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here