ಬಸವರಾಜಪ್ಪ ಅಪ್ಪಾ ವಾಣಿಜ್ಯ ಮಹಾವಿದ್ಯಾಲಯ ಸ್ವಾಮಿ ವಿವೇಕಾನಂದ ಜಯಂತಿ

0
7

ಸುರಪುರದ:-ನಗರದ ಶರಣಬಸವೇಶ್ವರ ವಿದ್ಯಾ ವರ್ಧಕ ಸಂಚಾಲಿತ ಕಲಬುರ್ಗಿಯ ಬಸವರಾಜಪ್ಪ ಅಪ್ಪಾ ಪದವಿ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ಬಿ.ಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ನಡೆಸಲಾಯಿತು.

ಜಂಟಿ ಕಾರ್ಯದರ್ಶಿಗಳಾದ ದೊಡ್ಡಪ್ಪ ಎಸ್ ನಿಷ್ಠಿ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮzಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀºರಿರಾವ್ ಅಧೋನಿ ಹಿರಿಯ ಸಂಶೋಧಕರು ಮತ್ತು ಇತಿಹಾಸ ತಜ್ಞರು ವಿದ್ಯಾರ್ಥಿಗಳನ್ನು ಉದ್ದೇಶಿಸಿ “ಸುರಪುರ ಸಂಸ್ಥಾನ ಮತ್ತು ನಿಷ್ಠಿ ಮನೆತನದ ಕುರಿತು ಸುಮಧುರ ಗಾನವನ್ನು ಹಾಡುವುದರ ಮೂಲಕ ಪ್ರಾರಂಭಿಸಿ ವಿದ್ಯಾರ್ಥಿಗಳು ವಿವೇಕಾನಂದರ ತತ್ವಗಳನ್ನು ಅಳವಡಿಸಿಕೊಳ್ಳಬೇಕು. ಯುವಕರಲ್ಲಿ ದೈರ್ಯವಿರಬೇಕು ಎಂದರು.

Contact Your\'s Advertisement; 9902492681

ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ವೇದವ್ಯಾಸ ಆಚಾರ್ಯ ಸುರಪುರ ಇಂಗ್ಲೀಷ ಭಾಷಾಂತರ ತಜ್ಞರು ಮಾತನಾಡಿ, ವಿವೇಕಾನಂದರ ಬಾಲ್ಯದ ಜೀವನ, ಶಿಕ್ಷಣ ಮತ್ತು ಸಮಾಜಕ್ಕೆ ಅವರು ನೀಡಿದ ಸಿಂಹವಾಣಿಗಳನ್ನು ವಿದ್ಯಾರ್ಥಿಗಳಿಗೆ ಹೇಳುವುದರ ಮೂಲಕ ಮಕ್ಕಳಿಗೆ ಸುದೀರ್ಘ ಉಪನ್ಯಾಸ ನೀಡಿದರು.

ವೇದಿಕೆಯ ಮೇಲೆ ಉಪಸ್ಥಿತರಿದ್ದ ಪ್ರೋ.ಆದಿನಾಥ ಮಹಾರಾಜ ವಿದ್ಯಾರ್ಥಿಗಳಿಗೆ ಶುಭ ಕೋರಿದರು ಮತ್ತು ಅಧ್ಯಕ್ಷತೆ ವಹಿಸಿದ್ದ ಮೋಹನರಡ್ಡಿ ದೇಸಾಯಿ ಕಿರದಳ್ಳಿ ಮಾತನಾಡಿ ವಿವೇಕಾನಂದರ ವ್ಯಕ್ತಿತ್ವ ಸಾಗರದಂತಿದ್ದ ಜಗತ್ತಿನ ದೃಷ್ಟಿಯಲ್ಲಿ ಗುಲಾಮಗಿರಿಯ ಅಡಿಯಲ್ಲಿ ನರಳುತ್ತಿದ್ದ ಭಾರತವನ್ನು ಜಗತ್ತು ಗುರುತಿಸಿ ತನ್ನಡೆಗೆ ಸೇಳೆಯುವಂತೆ ಮಾಡಿದ್ದು ವೀರ ಸನ್ಯಾಸಿ ವಿವೇಕನಂದರು ಎಂದು ವಿವೇಕಾನಂದರ ಸಿಂಹ ವಾಣಿಗಳಾದ ಈ ಜಗಕ್ಕೆ ಬಂದು ಗರಡಿ ಮನೆ ಅದರಲ್ಲಿ ನಾವೀಗ ಬಲಿಷ್ಠರಾಗಲು ಬಂದಿದ್ದೇವೆ, ಆರೋಗ್ಯವೇ ಭಾಗ್ಯ ಅನಾರೋಗ್ಯವೇ ನರಕ ಎಂದು ಅನೇಕ ವಿವೇಕಾನಂದರ ನುಡಿಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ದಾವೂದು ನಿರೂಪಿಸಿದರು ಮತ್ತು ಚೈತ್ರಾ ವಂದಿಸಿದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here