ಜನಪದ ಉಳಿಸುವಲ್ಲಿ ಸಂಘ ಸಂಸ್ಥೆಗಳ ಪಾತ್ರ ಪ್ರಮುಖ

0
8

ಸುರಪುರ: ಇಂದು ನಾಡಿನಾದ್ಯಂತ ಜನಪದ ಕಲೆ ಮತ್ತು ಸಾಹಿತ್ಯವನ್ನು ಉಳಿಸುವಲ್ಲಿ ಸಂಘ ಸಂಸ್ಥೆಗಳ ಪಾತ್ರ ಪ್ರಮುಖವಾಗಿದೆ ಎಂದು ಮುಖಂಡ ಶರಣಪ್ಪ ಸಾಹು ಎತ್ತಿಮನಿ ಮಾತನಾಡಿದರು.

ತಾಲೂಕಿನ ಬಾದ್ಯಪುರ ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡ ಸಂಸ್ಕೃತಿಕ ಯುವಕ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಕ್ಷರದಲ್ಲಿ ಸಂಗೀತ ಮತ್ತು ಸಂಸ್ಕೃತಿಕ ಕಾರ್ಯಕ್ರಮದಲ್ಲಿ,ಮಾತನಾಡಿ ಹಳ್ಳಿ ಪ್ರದೇಶಗಳಲ್ಲಿ ನಮ್ಮ ದೇಶದ ಪರಂಪರೆಯಂತೆ ಡೊಳ್ಳು ಕುಣಿತ ಬಯಲಾಟ ಕಣೆಯಲೆಗೆ ಭಜನೆ ಅಂತಿ ಪದ ಹಲವು ರೀತಿಯ ಜನಪದ ಕಲೆ ಇದ್ದು ಜನಪದ ಕಲಾವಿದರು ಯಾವುದೇ ವಿಶ್ವವಿದ್ಯಾಲಯಗಳಲ್ಲಿ ಓದದೆ ಬಾಯಿಂದ ಬಾಯಿಗೆ ಕಲಿತು ನಮ್ಮ ದೇಶದ ಹಿರಿಮೆ ಗಿರಿಮೆಯನ್ನು ಹೆಚ್ಚು ಮಾಡಿದ್ದಾರೆ ಎಂದರು.

Contact Your\'s Advertisement; 9902492681

ಹಲವಾರು ಸಂಸ್ತೆ ಕಾರ್ಯಕ್ರಮಗಳು ಕಲಾವಿದರಿಂದ ಪ್ರದರ್ಶಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಜನಪದ ಪರಿಷತ್ ಜಿಲ್ಲಾಧ್ಯಕ್ಷ ಪ್ರಕಾಶ ಅಂಗಡಿ ಮಾತನಾಡಿ, ಜನಪದ ಕಲೆ ನಮ್ಮ ನಾಡನ್ನು ನಮ್ಮ ಪ್ರದೇಶವನ್ನು ಪ್ರತಿನಿಧಿಸುವ ಕಲೆಯಾಗಿದೆ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಜನಪದ ಕಲೆಗಳು ತನ್ನದೇ ಆದ ಹಿರಿಮೆ, ಗರಿಮೆಯನ್ನು ಹೊಂದಿವೆ ಇದೇ ರೀತಿ ನಮ್ಮ ಭಾಗದಲ್ಲಿ ಕೂಡ ಹಲವಾರು ಕಲೆಗಳಿವೆ ಎಂದು ನುಡಿದರು.

ಹಲವಾರು ಸಂಸ್ಥೆಗಳ ಕಲಾವಿದರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಪ್ರದರ್ಶಿಸಲಾಯಿತು ಕೃಷ್ಣಪ್ಪ ಕುಂಬಾರಪೇಟೆ ಭೀಮಣ್ಣ ಕೊಡಮ್ಮನಹಳ್ಳಿ ಶಿಕುಂಡಪ್ಪ ಜಾಲಹಳ್ಳಿ ಕೆಂಪಣ್ಣ ಚನ್ನುರ್ ಹನುಮಂತ ರಾಯ ಗೌಡ ಮತ್ತಿತರರು ಇದ್ದರು. ಭಜನೆ ಅಂತಿ ಪದ ಕೋಲಾಟ ಮುಂತಾದ ಕಲೆಗಳನ್ನು ಪ್ರದರ್ಶಿಸಿದರು ಸಂಸ್ಥೆಯ ಅಧ್ಯಕ್ಷ ಮಲ್ಲು ಬಾದ್ಯಾಪುರ ಕಾರ್ಯಕ್ರಮದ ನೇತೃತ್ವವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here