ಮಹಾನಂದಮ್ಮ ಸಜ್ಜನ್ ಜಾಲಿಬೆಂಚಿಗೆ ಮಮತಾಮಯಿ ಪ್ರಶಸ್ತಿ ಪ್ರದಾನ

0
41

ಸುರಪುರ: ಪಂಚಪೀಠಗಳಲ್ಲಿ ಒಂದಾದ ಶ್ರೀಶೈಲ ಪೀಠ ದಿಂದ ನೀಡಲಾಗುವ ಮಮತಾಮಯಿ ಪ್ರಶಸ್ತಿಗೆ ರಂಗಂಪೇಟೆಯ ಮಹಾನಂದಮ್ಮ ರಾಜಶೇಖರಪ್ಪ ಸಜ್ಜನ್ ಜಾಲಿಬೆಂಚಿಯವರನ್ನು ನೇಮಕಗೊಳಿಸಿ ಪ್ರದಾನ ಮಾಡಲಾಗಿದೆ.

ಆಂಧ್ರಪ್ರದೇಶದ ಶ್ರೀಶೈಲದಲ್ಲಿ ನಡೆದ ಜಗದ್ಗುರುಗಳ ದ್ವಾದಶ ಪೀಠಾರೋಹಣ ಹಾಗೂ ಜನ್ಮ ಸುವರ್ಣ ಮಹೋತ್ಸವ ಕಾರ್ಯಕ್ರಮ ಸಂದರ್ಭದಲ್ಲಿ ಮಹಾ ಪೀಠ ದಿಂದ ಮೂಲತಃ ತಾಲೂಕಿನ ಜಾಲಿಬೆಂಚಿ ಗ್ರಾಮದವರಾದ ಮಹಾನಂದಮ್ಮ ರಾಜಶೇಖರಪ್ಪ ಸಜ್ಜನ್ ಅವರ ಸಮಾಜ ಸೇವೆ ಹಾಗೂ ಜನಪರ ಹಿತ ಚಿಂತನೆಯನ್ನು ಮನಗಂಡು ಮಹಾಪೀಠ ದಿಂದ ಮಮತಾಮಯಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

Contact Your\'s Advertisement; 9902492681

ಈ ಸಂದರ್ಭದಲ್ಲಿ ಉಜ್ಜಯಿನಿಯ ಜಗದ್ಗುರು ಡಾ:ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಜಿ,ಶ್ರೀಶೈಲ ಜಗದ್ಗುರು ಡಾ:ಚನ್ನಪಂಡೀತ ಸಿದ್ದರಾಮ ಶಿವಾಚಾರ್ಯ ಮಹಾಸ್ವಾಮೀಜಿ,ಕಾಶಿ ಹಿರಿಯ ಜಗದ್ಗುರು ಡಾ:ಚಂದ್ರಶೇಖರ ಶಿವಾಚಾರ್ಯರು ಮತ್ತು ಕಿರಿಯ ಜಗದ್ಗುರು ಡಾ:ಚನ್ನಮಲ್ಲಿಕಾರ್ಜುನ ಪಂಡೀತಾರಾಧ್ಯ ಶಿವಾಚಾರ್ಯರು ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವದಿಸಿದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರ ಶಿವಶಂಖರಪ್ಪ,ಸಿಂಧನೂರ ಶಾಸಕ ವೆಂಕಟರಾವ್ ನಾಡಗೌಡ,ಕಲಬುರ್ಗಿ ಯಾದಗಿರಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರು ಹಾಗೂ ಮಹಾನಂದಮ್ಮ ಅವರ ಸುಪುತ್ರ ಡಾ:ಸುರೇಶ ಸಜ್ಜನ್ ,ಶಿವಲೀಲಾ ಸಜ್ಜನ್ ಸೇರಿದಂತೆ ಕರ್ನಾಟಕ,ಆಂಧ್ರ,ಮಹರಾಷ್ಟ್ರ ಸೇರಿದಂತೆ ವಿವಿಧ ಕಡೆಗಳಿಂದ ಆಗಮಿಸಿದ್ದ ಮುಖಂಡರು ಹಾಗೂ ಭಕ್ತರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here