ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಪರಾಕ್ರಮ್ ದಿನ ಆಚರಣೆ

0
19

ಕಲಬುರಗಿ:“ಶುಭಾಸ್ ಚಂದ್ರ ಭೋಸ್ ಅವರ ದೇಶಭಕ್ತಿ ಸಾಟಿಯಿಲ್ಲ. ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿದರು”ಎಂದು ನಿವೃತ್ತ ಕರ್ನಲ್ ಶರಣಪ್ಪ ಸಿಕೆಂಪೆÇೀರ್ ಹೇಳಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಶುಭಾಸ್ ಚಂದ್ರ ಭೋಸ್ ಅವರ ಜನ್ಮದಿನದ ಅಂಗವಾಗಿ ಪರಾಕ್ರಮ್ ದಿವಸ್ ಆಚರಣೆಯ ಸಂದರ್ಭದಲ್ಲಿ ಮಾತನಾಡಿದ ಅವರು “ಅವರು ಸ್ವಾತಂತ್ರ್ಯ ಹೋರಾಟವನ್ನು ಮುಂಚುಣಿಯಲ್ಲಿ ನಿಂತು ಮುನ್ನಡೆಸಿದ್ದಾರೆ ಮತ್ತು ಭಾರತೀಯ ರಾಷ್ಟ್ರೀಯ ಸೇನೆಯನ್ನು ಸ್ಥಾಪಿಸಿ ಜೈ ಹಿಂದ್ ಘೋಷಣೆ ನೀಡಿದರು. ಇಂದು ಭಾರತದ ಪ್ರತಿಯೊಂದು ಸೇನಾ ಶಾಲೆಯಲ್ಲಿಯೂ ಇದನ್ನು ಮಂತ್ರದಂತೆ ಪಠಿಸಲಾಗುತ್ತದೆ. ಅವರು ತಮ್ಮ ಕಾಲಕ್ಕಿಂತ ಮುಂದಿನದನ್ನು ಯೋಚಿಸುತ್ತಿದ್ದರು. ರಾಷ್ಟ್ರೀಯ ಭದ್ರತೆಯಲ್ಲಿ ಸೇನೆಯ ಆಧುನೀಕರಣದ ಪಾತ್ರದ ಕುರಿತು ಅವರು ಮಾತನಾಡಿದರು.

Contact Your\'s Advertisement; 9902492681

ನಾವು ಆಧುನೀಕರಣಕ್ಕೆ ಹೆಚ್ಚು ಗಮನ ಕೊಡದ ಕಾರಣ 1962 ರ ಚೀನಾದ ಆಕ್ರಮಣವನ್ನು ಯಶಸ್ವಿಯಾಗಿ ಎದುರಿಸಲಾಗಲಿಲ್ಲ. ನಾವು ಇತ್ತೀಚೆಗೆ ಮಹಿಳೆಯರಿಗೆ ಸೇನೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಿದ್ದೇವೆ. ಆದರೆ ಶುಭಾಸ್ ಚಂದ್ರ ಭೋಸ್ ಅವರು ಝಾನ್ಸಿ ರಾಣಿ ರೆಜಿಮೆಂಟ್ ಎಂಬ ಐಎನ್‍ಎ ಮಹಿಳಾ ವಿಭಾಗವನ್ನು ಸ್ಥಾಪಿಸಿದರು. ಅವರು ಮಹಾತ್ಮಾ ಗಾಂಧೀಜಿಯವರೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿದ್ದರೂ ಕೂಡ ಅವರನ್ನು ರಾಷ್ಟ್ರ ಪೀತ ಎಂದು ಕರೆದರು. ಅದು ಅವರ ವ್ಯಕ್ತಿತ್ವವಾಗಿತ್ತು. ಅವರು ಪ್ರತಿಯೊಬ್ಬ ಭಾರತೀಯರಿಗೆ ಮಾತ್ರವಲ್ಲ, ಪ್ರಪಂಚದಾದ್ಯಂತದ ಅನೇಕ ಜನರಿಗೆ ಮಾದರಿಯಾಗಿದ್ದಾರೆ.

ಭಾರತೀಯ ಸೇನೆಯಲ್ಲಿನ ವೃತ್ತಿ ಅವಕಾಶಗಳ ಕುರಿತು ಮಾತನಾಡಿದ ಅವರು “ಈ ಪ್ರದೇಶದ ಜನರಿಗೆ ಭಾರತೀಯ ಸೇನೆಯಲ್ಲಿನ ಉದ್ಯೋಗಾವಕಾಶಗಳ ಬಗ್ಗೆ ಸರಿಯಾದ ತಿಳುವಳಿಕೆಯಿಲ್ಲ. ಇತ್ತೀಚೆಗೆ ನಡೆದ ನೇಮಕಾತಿ ಸಂದ್ದಲ್ಲಿ 72,000 ಅರ್ಜಿದಾರರ ಪೈಕಿ 52,000 ಅಭ್ಯರ್ಥಿಗಳು ಬೆಳಗಾವಿಯವರೇ ಆಗಿದ್ದರೆ, ಕಲ್ಯಾಣ ಕರ್ನಾಟಕ ಪ್ರದೇಶದ ಎಲ್ಲಾ 7 ಜಿಲ್ಲೆಗಳಿಂದ ಕೇವಲ 21,000 ಅಭ್ಯರ್ಥಿಗಳು ಮಾತ್ರ ಅರ್ಜಿಸಲ್ಲಿದ್ದರು. ಸೇನೆಯಲ್ಲಿ ಉದ್ಯೋಗಾವಕಾಶಗಳ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸುವುದು ಬಹಳ ಮುಖ್ಯ. ಹೀಗಾಗಿ ಈ ಭಾಗದ ಯುವಕರಿಗೆ ತರಬೇತಿ ನೀಡಲು ಬೀದರ್ ಮತ್ತು ರಾಯಚೂರಿನಲ್ಲಿ ಸೈನಿಕ ತರಬೇತಿ ಶಾಲೆಗಳನ್ನು ಆರಂಭಿಸಿದ್ದೇವೆ” ಎಂದು ಹೇಳಿದರು

ಸಿಯುಕೆ ಕುಲಸಚಿವ ಪೆÇ್ರ. ಬಸವರಾಜ ಡೋಣೂರ ಅಧ್ಯಕ್ಷತೆ ವಹಿಸಿ ಅಧ್ಯಕ್ಷೀಯ ನುಡಿಗಳನ್ನಾಡಿ ಮಾತನಾಡಿ “ಪ್ರತಿಯೊಬ್ಬ ವಿದ್ಯಾರ್ಥಿಯೂ ನೇತಾಜಿಯವರಂತೆ ಆಗುವ ಸಾಮಥ್ರ್ಯ ಹೊಂದಿದ್ದಾರೆ. ಅವರು ಕೇವಲ ರಾಷ್ಟ್ರವನ್ನು ಪ್ರೀತಿಸಿದ್ದು ಬೇರೇನೂ ಅಲ್ಲ. ಅವರು ನಮ್ಮ ಪೀಳಿಗೆಗೆ ದೊಡ್ಡ ರೋಲ್ ಮಾಡೆಲ್ ಆಗಿದ್ದಾರೆ. ಅವರು ಭಾರತದ ಸ್ವಾತಂತ್ರ್ಯ ಚಳವಳಿಯ ಹೊಳೆಯುವ ನಕ್ಷತ್ರ.

ಇದಕ್ಕೂ ಮುನ್ನ ಎನ್‍ಎಸ್‍ಎಸ್‍ನ ಸಂಯೋಜಕ ಶಿವಂ ಮಿಶ್ರಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಡಾ.ಜಯದೇವಿ ಜಂಗಮಶೆಟ್ಟಿ ರಾಷ್ಟ್ರಗೀತೆ ಹಾಡಿದರು. ಈ ಸಂದರ್ಭದಲ್ಲಿ ಎಲ್ಲಾ ಡೀನ್‍ರು, ಮುಖ್ಯಸ್ಥರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here