ನೇತಾಜಿ ಸುಭಾಷ್ ಚಂದ್ರ ಬೋಸ್ ರ 126 ನೇ ಜನ್ಮ ದಿನಾಚರಣೆ

0
37

ಕಲಬುರಗಿ: ನೇತಾಜಿ ಸುಭಾμï ಚಂದ್ರ ಬೋಸ್ ಅಂದರೆ ಇಡೀ ದೇಶದ ವಿದ್ಯಾರ್ಥಿ-ಯುವಜನರ ಸ್ಪೂರ್ತಿ. ವಿದ್ಯಾರ್ಥಿಗಳು ನೇತಾಜಿ ಅವರು ನಡೆಸಿದ ಜೀವನ ಸಂಘರ್ಷ ಕುರಿತು ತಿಳಿದರೆ ಸಾಕಾಗುವುದಿಲ್ಲ, ಆ ವಿಚಾರವನ್ನು ಮೈಗೂಡಿಸಿಕೊಂಡರೆ ಆದುವೇ ನೇತಾಜಿ ಅವರಿಗೆ ನೀಡುವ ಸರಿಯಾದ ಗೌರವ ಎಂದು ಎಐಡಿವೈಓ ಜಿಲ್ಲಾ ಅಧ್ಯಕ್ಷರಾದ ಜಗನ್ನಾಥ ಎಸ್ ಹೆಚ್ ನುಡಿದರು.

ಜಿಲ್ಲಾ ಕಾರ್ಯದರ್ಶಿ ತುಳಜರಾಮ ಎನ್ ಕೆ ಅವರು ಮಾತನಾಡಿ ನೇತಾಜಿ ಸುಭಾμï ಚಂದ್ರ ಬೋಸ್ ರವರಂತಹ ವಿಚಾರ ಇಂದಿಗೂ ಪ್ರಸ್ತುತವಾಗಿವೆ. ಎಲ್ಲಾರಿಗೂ ವೈಜ್ಞಾನಿಕ – ಧರ್ಮನೀರಪೇಕ್ಷ – ಪ್ರಜಾತಾಂತ್ರಿಕ ಶಿಕ್ಷಣ ಸಿಗಬೇಕು ಎಂಬುದು ಅವರ ಕನಸು. ಆದರೆ ಅವರ ಕನಸು ಕನಸಾಗಿಯೇ ಉಳಿದಿದೆ.! ನನಸು ಮಾಡುವ ಜವಾಬ್ದಾರಿ ದೇಶದ ವಿದ್ಯಾರ್ಥಿ-ಯುವಜನರ ಮೇಲಿದೆ. ಅವರ ವಿಚಾರಗಳ ಆಧಾರದ ಮೇಲೆ ಎಐಡಿಎಸ್‍ಓ ನಿರಂತರವಾಗಿ ಹಲವಾರು ವಿದ್ಯಾರ್ಥಿ ಚಳುವಳಿಗಳನ್ನು ಸಂಘಟಿಸುತ್ತಿದೆ. ಅವರ 125ನೇ ವμರ್Áಚರಣೆಯ ಭಾಗವಾಗಿ ಹಲವು ಚಟುವಟಿಕೆಗಳು, ವಿದ್ಯಾರ್ಥಿಗಳ ಶಿಬಿರಗಳು, ವಿಚಾರ ಸಂಕಿರಣ ಮತ್ತು ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸಾಂಸ್ಕøತಿಕ ಸ್ಪರ್ಧೆಗಳು ಮತ್ತು ಇನ್ನಿತರೆ ಕಾರ್ಯಚಟುವಟಿಕೆಗಳು ಸಂಘಟಿಸುವ ಮೂಲಕ ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳಿಗೆ ನೇತಾಜಿಯ ವಿಚಾರಗಳನ್ನು ಎಐಡಿಎಸ್‍ಓ ಪರಿಚಯ ಮಾಡಿದೆ ಎಂದು ಹೇಳಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಕೆ.ಬಿ ಬಿಲ್ಲವ್ ಸರ್ ವಹಿಸಿದ್ದು ,ಸಾಂಸ್ಕøತಿಕ ಸ¯ಹೆಗಾರರಾದ ಡಾ. ವೆಂಕಟೇಶ ಪೂಜಾರಿ ಸರ್, ಡಾ. ಚಂದ್ರಶೇಖರ್ ಗಂದಿಗುಡಿ ಸರ್, ಎನ್ ಎಸ್ ಎಸ್ ನ ಅಧಿಕಾರಿಗಳಾದ ಪ್ರೋ. ಎಮ್ ಕೆ ಬೋಥ್ಗಿ ಸರ್, ಹಾಗೂ ಪಿಯು ಕಾಲೇಜಿನ ಉಪನ್ಯಾಸಕರಾದ ರಾಮಣ್ಣ ಎಸ್ ಇಬ್ರಾಹಿಂಪೂರ ಸರ್ ವೇದಿಕೆಮೆಲೆ ಉಪಾಸ್ಥಿತರಿದ್ದರು. ಸ್ವಾಗತ ಭಾಷಣವನ್ನು ಕುಮಾರಿ ಸಾಕ್ಷಿ ಮಾನೆ ಹಾಗೂ ವಂದನಾರ್ಪಣನೆಯನ್ನು ಕುಮಾರಿ ಯಶೋಧ ನಡೆಸಿಕೊಟ್ಟರು ಕಾರ್ಯಕ್ರಮವದ ನಿರುಪೂಣೆಯನ್ನು ಎಐಡಿಎಸ್‍ಓ ಅಧ್ಯಕ್ಷರಾದ ಕಿರಣ್ ಮಾನೆ ನಡೆಸಿಕೊಟ್ಟರು. ನೂರಾರು ವಿದ್ಯಾರ್ಥಿಗಳೂ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here