ಜೇವರ್ಗಿ ಕ್ರೀಡಾಂಗಣ ಜ. 26 ಕ್ಕೆ ಲೋಕಾರ್ಪಣೆ: ಶಾಸಕ ಡಾ. ಅಜಯ್ ಸಿಂಗ್

0
11

ಕಲಬುರಗಿ: ಇದೇ ಮೊದಲ ಬಾರಿಗೆ ಜೇವರ್ಗಿಯಲ್ಲಿ ಅಂತರಾಷ್ಟ್ರೀಯ ಮಾನದಂಡಗಳನ್ವಯ ನಿರ್ಮಾಣಗೊಳ್ಳುತ್ತಿರುವ ಸುಸಜ್ಜಿತ 4 ಕೋಟಿ ರುಪಾಯಿ ವೆಚ್ಚದಲ್ಲಿ ತಲೆ ಎತ್ತಿರುವ ಕ್ರೀಡಾಂಗಣ ಜ. 26 ರ ಗಣರಾಜ್ಯೋತ್ಸವ ದಿನದ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಗುತ್ತಿದೆ ಎಂದು ವಿಧಾನ ಸಭೆ ವಿರೋಧ ಪP್ಷÀದ ಮುಖ್ಯ ಸಚೇತಕರು ಹಾಗೂ ಜೇವರ್ಗಿ ಶಾಸಕರೂ ಆಗಿರುವ ಡಾ. ಅಜಯ್ ಸಿಂಗ್ ಹೇಳಿದ್ದಾರೆ.

8 ಎಕರೆ ವಿಶಾಲ ಪ್ರದೇಶದಲ್ಲಿ ತಲೆ ಎತ್ತಿರುವ ಕ್ರೀಡಾಂಗಣ ಒಳಾಂಗಣ ಬ್ಯಾಡ್ಮಿಂಟನ್ ಕೋರ್ಟ, ಕೊಕ್ಕೊ, ವ್ಹಾಲಿಬಾಲ್, ಕಬಡ್ಡಿ ಆಟದ ಪ್ರತ್ಯೇಕ ಮೈದಾನಗಳು, ಅತ್ಯಾಧುನಿಕ ಜಿಮ್ ಕೇಂದ್ರ, ಬಾಸ್ಕೆಟ್ ಬಾಲ್ ಮೈದಾನ, ಕ್ರಿಕೆಟ್ ಮೈದಾನ, ಹುಲ್ಲುಗಾವಲು, ಅಂತಾರಾಷ್ಟ್ರೀಯ ಮಟ್ಟದ ಮಾನದಂಡಗಳನ್ವಯದ ಈಜುಕೊಳ ಹೊಂದಿರಲಿದೆ. ಈಜುಕೊಳ ಹೊರತುಪಡಿಸಿ ಈಗಾಗಲೇ ಕ್ರೀಡಾಂಗಣದ ಉಳಿದೆಲ್ಲ ಕಾಮಗಾರಿಗಳು ಕೊನೆ ಹಂತದಲ್ಲಿವೆ. ಇಡೀ ಕ್ರೀಡಾಂಗಣಕ್ಕೆ ಅತ್ಯಾಧುನಿಕ ಕ್ಯಾನೋಪಿ ಆಸರೆ ಇರಲಿದೆ, ಇದಲ್ಲದೆ ಗಣ್ಯರಿಗಾಗಿ ಪ್ರತ್ಯೇಕ ವೇದಿಕೆ ನಿರ್ಮಿಸಲಾಗಿದೆ.

Contact Your\'s Advertisement; 9902492681

ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ಯ್ರಾಕ್ ಕೂಡಾ ನಿರ್ಮಾಣ ಮಾಡಲಾಗುತ್ತಿದೆ. ಪ್ರಖರ ಬೆಳಕಿನ ವ್ಯವಸ್ಥೆಯೂ ಇರುತ್ತದೆ. ಕ್ರೀಡಾಂಗಣವೂ ಮುಖ್ಯ ಪೆವಿಲಿಯನ್ನಲ್ಲಿ 3 ಕೆನಾಪಿ ಗಳನ್ನು ಹೊಂದಲಿದೆ. ಇಡೀ ಕ್ರೀಡಾಂಗಣಕ್ಕೆ ಆವರಣ ಗೋಡೆ ನಿರ್ಮಿಸಲಾಗಿದೆ. ಕ್ರೀಡಾಂಗಣಕ್ಕೆ ಪ್ರವೇಶಕ್ಕಿರುವ 5 ದ್ವಾರಗಳು, ಆವರಣ ಗೋಡೆ, ಪ್ರಖರ ದೀಪದ ವ್ಯವಸ್ಥೆಯನ್ನೂ ಮಾಡಲಾಗಿದೆ. ಇಡೀ ಕ್ರೀಡಾಂಗಣ 4 ಕೋಟಿ ರು ವೆಚ್ಚದಲ್ಲಿ ತಲೆ ಎತ್ತಿದೆ. ನೀರಿನ ಸವಲತ್ತಿಗಾಗಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಶಾಸಕ ಡಾ. ಅಜಯ್ ಸಿಂಗ್ ಹೇಳಿz್ದÁರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here