ಜನವರಿ 27ರಿಂದ ಗುಲಬರ್ಗಾ ವಿಶ್ವವಿದ್ಯಾಲಯದ ಯುವಜನೋತ್ಸವ ಆರಂಭ

0
26

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ 2022-23ನೇ ಶೈಕ್ಷಣಿಕ ಸಾಲಿನ 3ನೇ ಅಂತರ್ ವಿಶ್ವವಿದ್ಯಾಲಯದ ದಕ್ಷಿಣ-ಪೂರ್ವ ವಲಯ ಯುವಜನೋತ್ಸವ ಇದೇ ಜನವರಿ 27ರಿಂದ 31ರವರೆಗೆ ಐದು ದಿನಗಳ ಕಾಲ ವಿಶ್ವವಿದ್ಯಾಲಯದ ಜ್ಞಾನಗಂಗಾ ಆವರಣದಲ್ಲಿ ಜರುಗಲಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ.ದಯಾನಂದ ಆಗಸರ ತಿಳಿಸಿದರು.

ವಿಶ್ವವಿದ್ಯಾಲಯದ ಕೈಲಾಸ ಭವನದ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ಜ.27ರಂದು ಸಂಜೆ 4ಕ್ಕೆ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಯುವಜನೋತ್ಸವ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕರ್ನಾಟಕ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ .ಬಿ.ಕೆ. ತುಳಸಿಮಾಲ ಉದ್ಘಾಟಿಸಲಿದ್ದಾರೆ.

Contact Your\'s Advertisement; 9902492681

ಇದಕ್ಕೂ ಮುಂಚೆ ಅಂದು ಮಧ್ಯಾಹ್ನ 2.30ಕ್ಕೆ ಜಾನಪದ ಕಲಾ ತಂಡಗಳ ನೃತ್ಯ ಮತ್ತು ವಾದ್ಯ ಮೇಳದೊಂದಿಗೆ ಯುವ ಜನೋತ್ಸವದ ಮೆರವಣಿಗೆ ಆರಂಭಗೊಳ್ಳಲಿದೆ ಎಂದರು.

ಖ್ಯಾತ ಕನ್ನಡ ಚಲನಚಿತ್ರ ನಟ ಮತ್ತು ನಿರ್ದೇಶಕ ಸುಚೇಂದ್ರ ಪ್ರಸಾದ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದು, ನವದೆಹಲಿಯ ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಮಹಾ ಕಾರ್ಯದರ್ಶಿ ಡಾ.ಪಂಕಜ್ ಮಿತ್ತಲ್, ಜಂಟಿ ಕಾರ್ಯದರ್ಶಿ ಡಾ.ಬಲ್ವಿತ್ ಸಿಂಗ್ ಸುಖೋನ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಪೆÇ್ರ.ವಿ.ಟಿ.ಕಾಂಬಳೆ, ವಿದ್ಯಾ ವಿಷಯಕ ಪರಿಷತ್ ಸದಸ್ಯ ಬಸವರಾಜ ಪವಾರ್, ಮೌಲ್ಯಮಾಪನ ಕುಲಸಚಿವ ಪೆÇ್ರ.ಜ್ಯೋತಿ ಧಮ್ಮ ಪ್ರಕಾಶ, ಕುಲ ಸಚಿವ ಡಾ.ಬಿ.ಶರಣಪ್ಪ ಹಾಗೂ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಹಾಗೂ ಸಾಂಸ್ಕøತಿಕ ಸಂಯೋಜಕ ಪೆÇ್ರ.ಕೆ.ಲಿಂಗಪ್ಪ ಉಪಸ್ಥಿತರಿರುತ್ತಾರೆ ಎಂದರು.

ಈ ಯುವಜನೋತ್ಸವದಲ್ಲಿ ಮೂರು ರಾಜ್ಯಗಳ ವೈವಿಧ್ಯಮಯ ಸಂಸ್ಕೃತಿ ಮತ್ತು ವಿಭಿನ್ನ ಕಲೆಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಲಿದ್ದಾರೆ ಎಂದರು.

ಕರ್ನಾಟಕ ಸೇರಿದಂತೆ ತೆಲಂಗಾಣ ಮತ್ತು ಛತ್ತೀಸ್‍ಗಡ ರಾಜ್ಯಗಳ 30 ವಿಶ್ವವಿದ್ಯಾಲಯಗಳ ಸುಮಾರು 1200 ಯುವ ಸ್ಪರ್ಧಿಗಳು ಪಾಲ್ಗೊಳ್ಳುತ್ತಿದ್ದು, ಐದು ಗುಂಪುಗಳಲ್ಲಿ 27 ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿವೆ. ರಾಷ್ಟ್ರ ಮತ್ತು ರಾಜ್ಯ ಮಟ್ಟದ 18 ಪರಿಣತ ತೀರ್ಪುಗಾರರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಯುವಜನೋತ್ಸವದ ಯಶಸ್ಸಿಗಾಗಿ 20 ಉಪ ಸಮಿತಿಗಳನ್ನು ರಚಿಸಲಾಗಿದೆ. ಇದಕ್ಕಾಗಿ ಅಗತ್ಯ ಪೂರ್ವಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.

ಕುಲಸಚಿವ ಡಾ.ಬಿ.ತರಣಪ್ಪ, ಮೌಲ್ಯಮಾಪನ ಕುಲಪತಿ ಪ್ರೋ ಜ್ಯೋತಿ ದಮ್ಮ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪೆÇ್ರ.ಕೆ.ಲಿಂಗಪ್ಪ ಉಪಸ್ಥಿತರಿದ್ದರು. ಯುವ ಜನೋತ್ಸವದ ಸಮಾರೋಪ ಸಮಾರಂಭವು ಜನವರಿ 31 ರಂದು ಬೆಳಗ್ಗೆ 9.30ಕ್ಕೆ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜರುಗಲಿದೆ ಎಂದು ಪೆÇ್ರ. ದಯಾನಂದ ಅಗಸರ್ ತಿಳಿಸಿದರು.

ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ.ನಾಗೇಶ್ ವಿ ಬೆಟ್ಟಕೋಟೆ ಹಾಗೂ ಕನ್ನಡದ ಖ್ಯಾತ ನಟ ಸಂಪತ್ ಮೈತ್ರೇಯ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಆ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಣೆ ನಡೆಯಲಿದೆ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here