ಜೇವರ್ಗಿ: ತಾಲೂಕಿನ ಕಟ್ಟಿಸಂಗಾವಿಯ ಭೀಮಾನದಿಗೆ ರಾಷ್ಟ್ರೀಯ ಹೆದ್ದಾರಿಯ ಮೇಲೆ ನಿರ್ಮಿಸಿದ ಹೊಸ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು ವಾಹನ ಸವಾರರಿಗೆ ಆತಂಕ ಶುರುವಾಗಿದೆ.
ಹೊಸ ಬ್ರಿಡ್ಜ್ ಪ್ರಾರಂಭವಾಗಿ ಒಂದು ತಿಂಗಳು ಸಹ ಕಳೆದಿಲ್ಲ. ಈಗಾಲೇ ಬಿರುಕು ಕಾಣಿಸಿಕೊಂಡಿದ್ದುˌ ಕಳಪೆ ಕಾಮಗಾರಿಗೆ ಸಾಕ್ಷಿ ಅಂತಿದ್ದಾರೆ ಜನ. ಕೋಟ್ಶಂತರ ರೂ. ಖರ್ಚು ಮಾಡಿ ನಿರ್ಮಿಸಿದ ಸೇತುವೆ ಬಿರುಕು ಬಿಟ್ಟರೆ ಭಾರಿ ಗಾತ್ರದ ವಾಹನ ಓಡಾಡುವುದು ಹೇಗೆ ಅನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಕೂಡಲೇ ಸಂಬಂದಪಟ್ಟ ಅಧಿಕಾರಿಗಳು ಬಂದು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಹಾಗೂ ಕಲಬುರಗಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಆಗ್ರಹಿಸಿದರು . ಜೊತೆಗೆ ಈ ಕಳೆಪೆ ಕಾಮಗಾರಿಯನ್ನು ತನಿಖೆಗೆ ಒತ್ತಾಯಿಸಿದ್ದಾರೆ. ಇದರ ಬಗ್ಗೆ ಸ್ಥಳದಲ್ಲಿಯೇ ಫೋನ್ ಮೂಲಕ ಜಿಲ್ಲಾಧಿಕಾರಿಗಳ ಗಮನಕ್ಕೂ ತಂದರು.