ಶಿಕ್ಷಕರು ವಿದ್ಯಾರ್ಥಿಗಳಿಗೆ ಸ್ವಾವಲಂಬನೆಯ ಬದುಕು ಕಲಿಸಿಕೊಡಿ

0
8

ಕಲಬುರಗಿ: ಅಂಕಗಳ ಭರಾಟೆಯಲ್ಲಿಕೇವಲ ಶಿಕ್ಷಣ ನೀಡುವುದರತ್ತಎಲ್ಲರಚಿತ್ತ ಹರಿಯುತ್ತಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ, ಮಾನವೀಯ ಮೌಲ್ಯಗಳು,ಸ್ವಾವಲಂಬನೆಯುತವಾಗಿಬದುಕುವಕಲೆಯನ್ನು ಕಲಿಸಿಕೊಡಬೇಕಾಗಿದೆ. ಪ್ರಾಥಮಿಕ ಶಿಕ್ಷಣ ಬುನಾದಿಯಾಗಿದ್ದು, ಶಿಕ್ಷಕರ ಮೇಲೆ ಹೆಚ್ಚಿನಜವಾಬ್ದಾರಿಯಿದೆ. ವಿದ್ಯಾರ್ಥಿಗಳು ಗುರು-ಹಿರಿಯರು, ಪಾಲಕ-ಪೋಷಕರಿಗೆಗೌರವ ನೀಡಬೇಕು. ಟಿ.ವಿ, ಮೋಬೈಲ್‍ಗಳಿಂದ ದೂರವಿದ್ದು, ನಿಮ್ಮ ಭವಿಷ್ಯವನ್ನುಸುಂದರವಾಗಿ ರೂಪುಗೊಳಿಸಿಕೊಳ್ಳಿಎಂದುಉಪನ್ಯಾಸಕಎಚ್.ಬಿ.ಪಾಟೀಲ ಹೇಳಿದರು.

ನಗರದ ಆಳಂದ ಚೆಕ್ ಪೋಸ್ಟ್ ಸಮೀಪವಿರುವ ವಿಜಯನಗರ ಕಾಲನಿಯಲ್ಲಿರುವ ಭಾಗ್ಯೋದಯಕನ್ನಡಕಾನ್ವೆಂಟ್ ಶಾಲೆಯಲ್ಲಿ ಶನಿವಾರಏರ್ಪಡಿಸಲಾಗಿದ್ದ14ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

Contact Your\'s Advertisement; 9902492681

ಸರಸ್ವತಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಕೆವಿಕೆ ಮುಖ್ಯಸ್ಥಡಾ.ರಾಜು ತೆಗ್ಗಳ್ಳಿ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದಜೊತೆಆರೋಗ್ಯದತ್ತ ಗಮನಹರಿಸಿ. ಸೂಕ್ತ ಕಾಲಕ್ಕೆ ಆಹಾರ, ವಿಶ್ರಾಂತಿ ಪಡೆಯಿರಿ. ಪಾಲಕರುತಮ್ಮ ಮಕ್ಕಳ ಭಾವನೆ, ಆಸಕ್ತಿ, ಗುರಿಯನ್ನು ಅರ್ಥಮಾಡಿಕೊಳ್ಳಬೇಕು. ಅವರುಏನಾಗಬೇಕೆಂದು ನೀವೆ ನಿರ್ಧರಿಸಬೇಡಿ. ಇಂಜಿನೀಯರ್, ಡಾಕ್ಟರ್ ಕೋರ್ಸಗಳ ಬಗ್ಗೆ ಅತಿ ವ್ಯಾಮೋಹ ಬೇಡ. ಇನ್ನೂ ಅನೇಕ ಉತ್ತಮ ಕೋರ್ಸುಗಳತ್ತ ಗಮನಹರಿಸುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿಕನ್ನಡಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಸುರೇಶ ಬಡಿಗೇರ, ಸಂಸ್ಥೆಯಅಧ್ಯಕ್ಷ ಲಕ್ಷ್ಮೀಕಾಂತ ಹಿರೇಗೌಡ್, ಶಿಕ್ಷಕರಾದ ನರಸಪ್ಪ ಬಿರಾದಾರದೇಗಾಂವ, ಅಣ್ಣಾರಾಯ ಮಂಗಾಣೆ, ಕಸಾಪ ಉತ್ತರ ವಲಯದಗೌರವಅಧ್ಯಕ್ಷ ಶಿವಯೋಗಪ್ಪ ಬಿರಾದಾರ, ಪ್ರಮುಖರಾದ ಶರಣಬಸಪ್ಪ ಪಾಟೀಲ, ಶ್ರೀಕಾಂತ ಪಾಟೀಲ, ಶಾಲೆಯ ಮುಖ್ಯ ಶಿಕ್ಷಕರಾದ ದಾನೇಶ್ವರಿಹಿರೇಮಠ, ಶಿವಲೀಲಾ ಸಾಲೋಕಿ, ಶಿಕ್ಷಕರಾದ ಮೀನಾಕ್ಷೀಧರಿ, ಪ್ರವೀಣ ಬಬಲಾದ, ಪಾರ್ವತಿ ಹಿರೇಮಠ, ಪ್ರತಿಭಾ ಲಕ್ಕಶೆಟ್ಟಿ, ರೋಹಿಣಿಆರ್., ಜಯಲಕ್ಷ್ಮೀಕಂತಿಮಠ, ಸಂಗೀತಾ ಮಾಲಿಪಾಟೀಲ, ಶಿವಲೀಲಾ ಜಾವಣಗೇರಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here