ರಾಮಬಾಯಿ ಅಂಬೇಡ್ಕರ್ ಜಯಂತ್ಯುತ್ಸವದಲ್ಲಿ ಶಾಸಕ ರಾಜೇಂದ್ರಸಿಂಗ್ ಗೌತಮ ಕಳವಳ

0
31
  • ‘ಮೂಲ ನಿವಾಸಿಗಳ ವಂಚಿಸಲು ಶಿಕ್ಷಣ ಖಾಸಗೀಕರಣ’

ಕಲಬುರಗಿ: ಮೂಲ ನಿವಾಸಿ ವರ್ಗದ ಶೇ 2 ರಷ್ಟು ಮಂದಿ ಐಐಎಸ್, ಐಪಿಎಸ್ ಹಾಗೂ ವಿಶ್ವವಿದ್ಯಾಲಯಗಳ ಕುಲಪತಿಗಳಾಗಿದ್ದಾರೆ. ಇಂತಹ ಉನ್ನತ ಸ್ಥಾನಗಳನ್ನು ಪಡೆಯುವುದನ್ನು ತಪ್ಪಿಸುವ ಸಲುವಾಗಿ ಶಾಲೆಯಿಂದ ಹಿಡಿದು ಉನ್ನತ ಶಿಕ್ಷಣ ಸಂಸ್ಥೆಗಳನ್ನು ಖಾಸಗೀಕರಣ ಮಾಡಲಾಗುತ್ತಿದೆ ಎಂದು ದೆಹಲಿಯ ಎಎಪಿ ಶಾಸಕ ರಾಜೇಂದ್ರ ಸಿಂಗ್ ಗೌತಮ್ ಹೇಳಿದರು.

ನಗರದ ಸಿದ್ದಾರ್ಥ ನಗರದ ದೀಕ್ಷಾ ಭೂಮಿಯಲ್ಲಿ ಭಾನುವಾರ ಸ್ವಾಭಿಮಾನ ಸಮುದಾಯ ವೇದಿಕೆ ಹಮ್ಮಿಕೊಂಡಿದ್ದ ಮಾತೆ ರಾಮಬಾಯಿ ಅಂಬೇಡ್ಕರ್ ಅವರ 125ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ದೇಶದ ಮೂಲ ನಿವಾಸಿಗಳನ್ನು ಶತಮಾನಗಳ ಕಾಲ ವಂಚಿಸಿದ ಸಮುದಾಯವು ಈಗ ಶೋಷಿತ ವರ್ಗಗಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲು ಶಿಕ್ಷಣ ರಂಗವನ್ನು ಖಾಸಗೀಕರಣ ಮಾಡಲಾಗುತ್ತಿದೆ. ರೈಲ್ವೆ, ಬ್ಯಾಂಕಿಂಗ್, ಎಲ್ ಐಸಿ, ಪೆಟ್ರೋಲಿಯಂ ಹಾಗೂ ಗ್ಯಾಸ್ ಕಂಪನಿ ಸೇರಿದಂತೆ ಸಾರ್ವಜನಿಕ ಉದ್ದಿಮೆಗಳನ್ನು ಮಾರುವ ಮೂಲಕ ಆ ವರ್ಗಗಳಿಗೆ ಅವಕಾಶಗಳಿಂದ ವಂಚಿತರನ್ನಾಗಿ ಮಾಡಲಾಗುತ್ತಿದೆ. ದೇಶದ ಆಸ್ತಿಗಳನ್ನು ಮಾರಾಟ ಮಾಡುವವನು ಏನಾದರೂ ದೇಶ ಉದ್ಧಾರ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಸರ್ಕಾರಿ ಶಾಲೆಗಳಲ್ಲಿ ಜಾರಿಗೆ ತರಲಾಗಿರುವ ಮಧ್ಯಾಹ್ನದ ಬಿಸಿಯೂಟವನ್ನು ದಲಿತ ವರ್ಗದ ಮಹಿಳೆ ತಯಾರಿಸಿದ ಕಾರಣಕ್ಕೆ ಊಟವನ್ನು ತ್ಯಜಿಸಲಾಗುತ್ತಿದೆ. ಆದರೆ ಮೂಲ ನಿವಾಸಿ ವರ್ಗದ ಜನರು ತಯಾರಿಸುವ ಬಟ್ಟೆ, ಚಪ್ಪಲಿ ಹಾಗೂ ದೇವರ ಗುಡಿಯ ಮೂರ್ತಿಗಳನ್ನು ತ್ಯಜಿಸುವುದಿಲ್ಲ ಎಂದು ವ್ಯಂಗವಾಡಿದರು.

ಈಗಾಗಲೇ ಬಹುಸಂಖ್ಯಾತ ವರ್ಗ ಸ್ವಾತಂತ್ರ್ಯ ಕಳೆದುಕೊಂಡಿದೆ. ಆ ಸಮುದಾಯ ಹತ್ತಿಕ್ಕುವ ಕೆಲಸ ನಡೆಯುತ್ತಿದೆ. ಈ ರೀತಿ ತಾರತಮ್ಯ ಮುಂದುವರೆದರೆ ಭಾರತ ಸ್ವಾತಂತ್ರ್ಯವಾಗಿ ಉಳಿದುಕೊಳ್ಳುವುದಿಲ್ಲ ಎಂದು ಹೇಳಿದರು.

ಮೂಲನಿವಾಸಿ ಹಾಗೂ ಆದಿವಾಸಿಗಳನ್ನು ನಿಶಸ್ತ್ರಧಾರಿಗಳನ್ನಾಗಿ ಮಾಡಿದ ಪರಿಣಾಮ ದೇಶವು ತುಘಲಕ್, ಖಿಲ್ಜಿ, ಲೋದಿ, ಮೊಘಲರ ಗುಲಾಮಗಿರಿ ಆಳ್ವಿಕೆಗೆ ಒಳಪಟ್ಟಿತು. ನಾವು ಗುಲಾಮರಲ್ಲ. ಸಾಮ್ರಾಟ ಅಶೋಕ ಚಕ್ರವರ್ತಿ, ಶಾಹು ಮಹಾರಾಜು, ಪೆರಿಯಾರ್, ನಾರಾಯಣ ಗುರು ವಂಶಸ್ಥರು ಎಂದರು.

ವಿವಿಧ ಉಪ ಜಾತಿಗಳಾಗಿ ಒಡೆದು ಹೋಗಿರುವ ನಾವು ಬ್ರಾಹ್ಮಣವಾದ , ಮನುವಾದಿಗಳ ಚಲಾಕಿತನ ಅರ್ಥ ಮಾಡಿಕೊಳ್ಳಬೇಕು. ಬೌದ್ಧ ಧಮ್ಮ, ಸಮಾಜದ ಕೆಲಸ ಮಾಡುವವರನ್ನು ಗುರುತಿಸಿ ಸನ್ಮಾನ ಮಾಡಬೇಕು ಎಂದು ಸಲಹೆ ನೀಡಿದರು.

ಚಿಂತಕ ಆನಂದ ಸಿದ್ಧಾರ್ಥ್ ಮಾಲೂರು ಮಾತನಾಡಿ, ರಮಾಬಾಯಿಯವರ ತ್ಯಾಗದ ಫಲ ನಾವು. ಅವರು ಸ್ವಾರ್ಥ ರಾಗಿದ್ದರೆ ನಮ್ಮ ಬದುಕು ಈತರ ಇರಲಿಲ್ಲ. ಸಂವಿಧಾನ ಜಾರಿಯಾಗಿ 73 ವರ್ಷ ಕಳೆದಿದೆ. ದೇಶ ಸ್ವಾತಂತ್ರ್ಯ ಪಡೆದು 75 ವರ್ಷ ಕಳೆದಿವೆ. ಈಗಲೂ ನಮ್ಮನ್ನು ಆಳಿದ ಸರ್ಕಾರಗಳು ಉಚಿತ ಅಕ್ಕಿ, ವಿದ್ಯುತ್ ಕೊಡ್ತಿವೆ ಅಂತಿದ್ದಾರೆ. ಇವರು ನಮ್ಮನ್ನು ಆಳಲು ಯೋಗ್ಯರಾ ಎಂದು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಎಲ್ಲೆ ಕಡೆ ದರೋಡೆ ಮಾಡಿ ಉಚಿತ ಘೋಷಣೆ ಮಾಡುತ್ತಿದ್ದಾರೆ. ಗುಣಮಟ್ಟದ ಶಿಕ್ಷಣ,ಕೆಲಸ ಕೊಟ್ಟಿದ್ದರೆ ಹಾಗೂ ಸೇವಾ ವಲಯ, ಭೂ ಹಾಗೂ ಖನಿಜ ಸಂಪತ್ತು ಈ ವರ್ಗಗಳಿಗೆ ಒದಗಿಸಿದ್ದರೆ ಉಚಿತ ಘೋಷಣೆ ಅಗತ್ಯವಿರಲಿಲ್ಲ ಎಂದರು.

ಸೂರ್ಯಕಾಂತ ನಿಂಬಾಳ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಮ ಸಮಾಜ ಕಟ್ಟಲು ಸಣ್ಣದೊಂದು ಪ್ರಯತ್ನ ಪ್ರಾಮಾಣಿಕ. ಸಮಾಜ ಸೇವಕ ಹಾಗೂ ಸಮಾನ ಸಿದ್ಧಾಂತದ ಬಂಧುಗಳನ್ನು ಒಂದೇ ವೇದಿಕೆಗೆ ತರುವ ಪ್ರಯತ್ನ. ಬುದ್ಧರ ಹಾಗೂ ಅಂಬೇಡ್ಕರ್ ವಿಚಾರ ಮುಟ್ಟಿಸುವ ಕೆಲಸ ಮಾಡಬೇಕು. ಶೂದ್ರ ಸಮುದಾಯ ಸ್ವಾರ್ಥ ರಾಜಕಾರಣ ಬಿಟ್ಟು ಬ್ರಾಹ್ಮಣವಾದ ವಿರುದ್ಧ ನಿಲ್ಲಬೇಕು. 6743 ಉಪ ಜಾತಿಗಳಲ್ಲಿ ಒಡೆದು ಹೋಗಿರುವ ಸಮುದಾಯಗಳನ್ನು ಒಟ್ಟು ಮಾಡಬೇಕು. ಎಲ್ಲ ಜಾತಿಯ ಸಮಾಜದ ನಡುವೆ ಕೊಡು ಕೊಳ್ಳುವಿಕೆ ಇಲ್ಲದಿರಬಹುದು ಆದರೆ ವೇದಿಕೆ ಹಂಚಿಕೊಳ್ಳಬಹುದು ಎಂದು ಹೇಳಿದರು.

ಧಮ್ಮನಾಗ ಭಂತೇಜಿ ನೇತೃತ್ವ ವಹಿಸಿ ತ್ರಿಸರಣ ಹಾಗೂ ಪಂಚಶೀಲ ಬೋಧಿಸಿದರು.ರಮೇಶ್ ಪಟ್ಟೇದಾರ್ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖಂಡ ಸೂರ್ಯಕಾಂತ ನಿಂಬಾಳ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಭಂತೆ ಧಮ್ಮ ಜ್ಯೋತಿ, ಭಂತೇ ರೇವತ್, ಭಂತೆ ಸಂಘಾನಂದ, ಭಂತೆ ಜ್ಞಾನಸಾಗರ, ಭಂತೆ ಭೋದಿ ಪ್ರಜ್ಞಾ, ಭಂತೆ ಧಮ್ಮಪಾಲ, ಭಿಕ್ಕುಣಿ ಆರ್ಯ ಸುಮನ್ ಹಾಗೂ ಧಮ್ಮಸಂಘದ ಸದಸ್ಯರು,, ಗಾಯಕ ಅನಿರುದ್ಧ ವನಕರ್, ಸೀತಲ್ ಶೀಲವಂತ ಹುಬ್ಬಳ್ಳಿ
ಡಾ.ಸಂಧ್ಯಾ ಕಾನೇಕರ್, ನೀಲಗಂಗಾ, ತಹಶೀಲ್ದಾರ್ ನಿಂಗಮ್ಮ ಎಂ.ಕಟ್ಟಿಮನಿ, ಪಾಲಿಕೆ ಸದಸ್ಯೆ ಲತಾ ರಾಠೋಡ್, ರೇಣುಕಾ ಹಾಗೂ ಅಮ್ರಪಾಲಿ ಬೌದ್ಧ ಉಪಾಸಕಿಯರ ಸಂಘದ ಸದಸ್ಯರು ಹಾಜರಿದ್ದರು.

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಗ್ರ ಸಂಪುಟದ ಬರಹಗಳನ್ನು ಆಡಿಯೊ ರೂಪದಲ್ಲಿ ಹೊರ ತಂದಿರುವ ಆನಂದ ಸಿದ್ಧಾರ್ಥ್ ಮಾಲೂರು ಅವರನ್ನು ಸನ್ಮಾನಿಸಲಾಯಿತು ಗೌತಮ ಕಾರ್ಯಕ್ರಮ ನಿರೂಪಿಸಿದರು ಸಂತೋಷ ಮೇಲಿನಮನಿ ಸ್ವಾಗತಿಸಿದರು ಅನಿಲ ಟೆಂಗಳಿ, ಸುನೀಲ ಮಾರುತಿ ಮಾನ್ಪಡೆ, ಗೂರಣ್ಣ ಐನಾಪುರ,ಜೈಭಾರತ , ಉದ್ಯಮಿ ಲಕ್ಷ್ಮಣ ಸೋನಕಾಂಬಾಳೆ, ಮಾಜಿ ಮಾಹಪೌರ ಸೋಮಶೇಖರ ಮೇಲಿನಮನಿ, ಸತೀಶ ಪರತಬಾದ, ಬಸವರಾಜ ವಾಡಿ, ಶಿವಶಂಕರ ಭೋವಿ, ಬಾಬು ಬೀಳಗಿ, ಅಂಬಾರಾಯ ಹಡಗಿಲ್ಲ, ಚಿದಾನಂದ ಕೂಡನ್ನ, ಅಲ್ಲಮಪ್ರಭು ನಿಂಬರ್ಗಾ, ಪಂಡಿತ ಮದಗುಣಕಿ,ಇತರರು ಇದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here