ಗಡಿನಾಡಿನಲ್ಲಿ ಕನ್ನಡಕ್ಕಾಗಿ ಅನುಪಮ ಸೇವೆ; 12 ಸಾಧಕರಿಗೆ ‘ಶಿಕ್ಷಣರತ್ನ’ ಪ್ರಶಸ್ತಿ | 5 ‘ಬಾಲಪ್ರತಿಭೆ’ ಪ್ರಶಸ್ತಿ

0
102

ಸೋಲ್ಲಾಪುರ : ಗಡಿನಾಡಿನಲ್ಲಿ ಕನ್ನಡಕ್ಕಾಗಿ ಅನುಪಮ ಸೇವೆ ಸಲ್ಲಿಸಿರುವ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ೧೨ ಜನ ಸಾಧಕರಿಗೆ ‘ಶಿಕ್ಷಣರತ್ನ’ ಪ್ರಶಸ್ತಿ ಹಾಗೂ ಸಾಹಿತ್ಯ, ಅಭಿನಯ, ಕ್ರೀಡಾ, ಕಲಾ ಹಾಗೂ ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ೫ ಜನ ಬಾಲಪ್ರತಿಭೆಗಳಿಗೆ ‘ಬಾಲಪ್ರತಿಭೆ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಹಾಗೂ ಆದರ್ಶ ಕನ್ನಡ ಬಳಗ ಮಹಾರಾಷ್ಟç ಇವುಗಳ ಸಹಯೋಗದಲ್ಲಿ ಜತ್ತ ತಾಲ್ಲೂಕಿನ ಸಂಖ ಗ್ರಾಮದಲ್ಲಿ ಆಯೋಜಿಸಿದ ‘ಮಕ್ಕಳ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮ’ ಉತ್ಸವದಲ್ಲಿ ಸಾಧಕರಿಗೆ ಪ್ರಶಸ್ತಿ ನಿಡಿ ಗೌರವಿಸಲಾಯಿತು.

Contact Your\'s Advertisement; 9902492681

ಶಿಕ್ಷಣರತ್ನ ಪ್ರಶಸ್ತಿ ಪುರಸ್ಕೃತರು : ಬಾಬುರಾಯ ದೇವನಾಯಕ -ಮುಖ್ಯಗುರುಗಳು ಉಮರಾಣಿ, ಜಹಾಂಗೀರ ಬಾಗವಾನ್ -ಮುಖ್ಯಗುರುಗಳು ಭೀವರ್ಗಿ, ಕುಮಾರ ಇಟೆಕರ –ಉಪನ್ಯಾಸಕರು ಸಂಖ, ಸೌ.ಉಮಾದೇವಿ ಮೇತ್ರಿ –ಉಪನ್ಯಾಸಕಿ ಸಂಖ, ಮಲ್ಲಿಕಾರ್ಜುನ್ ಗುರವ -ಶಿಕ್ಷಕರು ಕರಜಗಿ, ನಿಲೂ ಕೋಲಾರಕರ -ಶಿಕ್ಷಕರು ಜಾಡರಬಬಲಾದ, ಸೌ.ಶಶಿಕಲಾ ಪಾಟೀಲ -ಶಿಕ್ಷಕಿ ಕೊ. ಬೊಬಲಾದ, ಆನಂದ ಸೋನಾರ -ಶಿಕ್ಷಕರು ಖೋಜನವಾಡಿ, ಸೌ.ಗೀತಾ ಹತ್ತಳ್ಳಿ -ಶಿಕ್ಷಕಿ ಬಾಲಗಾಂವ, ಚಂದ್ರಕಾAತ ಕಾರಕಲ್ – ಶಿಕ್ಷಕ ಸಾಹಿತಿ ಜಾಲಿಹಾಳ, ಮಲ್ಲಿನಾಥ ಪ್ಯಾಟಿ -ಶಿಕ್ಷಕರು ಸಿಂಧೂರ, ಸಂಜಯ ಅರಳಿ -ಶಿಕ್ಷಕರು ಅಂಕಲಗಿ ಇವರಿಗೆ ಕೇಂದ್ರ ಬಾಲ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಧಾರವಾಡದ ಬಸು ಬೆವಿನಗಿಡ ಇವರು ಶಿಕ್ಷಣರತ್ನ ಪ್ರಶಸ್ತಿ ಪ್ರದಾನ ಮಾಡಿದರು.

ಬಾಲಪ್ರತಿಭೆ ಪ್ರಶಸ್ತಿ ಪುರಸ್ಕೃತರು : ಸಾಹಿತ್ಯಕ್ಷೇತ್ರ : ಕು.ಚಿರಂತ ಕುಂಬಾರ (ಧಾರವಾಡ), ಅಭಿನಯ ಕ್ಷೇತ್ರ : ಕು.ಪ್ರಾರ್ಥನಾ ರಾಯಕರ (ವಿಜಯಪುರ), ಕ್ರೀಡಾ ಕ್ಷೇತ್ರ : ಕು.ಶ್ರೇಯಾ ಹಿಪ್ಪರಗಿ (ಸಂಖ), ಕಲಾ ಕ್ಷೇತ್ರ : ಕು.ಪ್ರೀಯಾ ತಟ್ಟಿತೇಲಿ (ಸಂಖ), ಸಂಗೀತ ಕ್ಷೇತ್ರ ಕು.ಪಲ್ಲವಿ ಮಾಡ್ಯಾಳ (ನಾಗಣಸೂರ) ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ೫ ಜನ ಬಾಲಪ್ರತಿಭೆಗಳಿಗೆ ಸೊಲ್ಲಾಪುರದ ಹಿರಿಯ ಸಾಹಿತಿ ಡಾ. ಮಧುಮಾಲ ಲಿಗಾಡೆಯವರ ಅಧ್ಯಕ್ಷತೆಯಲ್ಲಿ ‘ಬಾಲಪ್ರತಿಭೆ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಶೋಕ ಮುಚ್ಚುಂಡಿ ಸ್ವಾಗತಿಸಿದರು. ಶರಣಪ್ಪ ಫುಲಾರಿ ನಿರೂಪಿಸಿದರು. ರೂಪೇಶ ಕಾಟೆ ವಂಧಿಸಿದರು.

ಶಿಕ್ಷಕರು, ವಿದ್ಯಾರ್ಥಿಗಳ ಉನ್ನತಿಗಾಗಿ ತಮ್ಮ ಇಡೀ ಜೀವನವನ್ನೇ ಮುಡಿಪ್ಪಾಗಿಟ್ಟಿದ್ದಾರೆ. ಗಡಿನಾಡಿನಲ್ಲಿ ಕನ್ನಡಕ್ಕಾಗಿ ಅನುಪಮ ಸೇವೆ ಸಲ್ಲಿಸಿರುವ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಶಿಕ್ಷಕರಿಗೆ ‘ಶಿಕ್ಷಣರತ್ನ’ ಪ್ರಶಸ್ತಿ ಹಾಗೂ ಸಾಹಿತ್ಯ, ಅಭಿನಯ, ಕ್ರೀಡಾ, ಕಲಾ ಹಾಗೂ ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಕ್ಕಳಿಗೆ ‘ಬಾಲಪ್ರತಿಭೆ’ ಪ್ರಶಸ್ತಿ ನೀಡಿ ಗೌರವಿಸಿದ್ದು, ತುಂಬಾ ಸಂತಸ ತಂದಿದೆ. ಪ್ರಶಸ್ತಿಯಿಂದ ಗೌರವದ ಜೊತೆಗೆ ನಮ್ಮ ಜವಾದ್ಬಾರಿ ಕೂಡ ಹೆಚ್ಚಾಗುತ್ತದೆ. -ಬಾಪುರಾಯ ದೇವನಾಯಕ, ಶಿಕ್ಷಣರತ್ನ ಪ್ರಶಸ್ತಿ ಪುರಸ್ಕೃತರು, ಉಮರಾಣಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here