ಅರ್ಚನ-ಅರ್ಪಣ-ಅನುಭಾವ ಶರಣರ ತತ್ವಗಳು

0
40

ಮಹಾದಾಸೋಹಿ ಶರಣಬಸವೇಶ್ವರರು ಅರ್ಚನ-ಅರ್ಪಣ-ಅನುಭಾವ ಮಾಡುತ್ತಾ ಜಗದ ಜೀವರುಗಳಿಗೆ ದೇವರಾಗಿದ್ದರು ಎಂದು ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ. ಇಂದಿರಾ ಶೇಟಕಾರ ಹೇಳಿದರು.

ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿರುವ ೪೦ ದಿನಗಳ ಉಪನ್ಯಾಸ ಮಾಲಿಕೆಯಲ್ಲಿ ಸೋಮವಾರ ’ಮಹಾದಾಸೋಹಿ ಶರಣಬಸವರ ಶಿವಲೀಲೆಗಳ’ ಕುರಿತು ಉಪನ್ಯಾಸ ನೀಡಿದರು.

Contact Your\'s Advertisement; 9902492681

ಶ್ರಾವಣ ಮಾಸದಲ್ಲಿ ಮಹಾಮನೆಗೆ ಶರಣರ ಅನುಭಾವ ಕೇಳಲು ಜನ ಹಳ್ಳಿಹಳ್ಳಿಗಳಿಂದ ಲೆಕ್ಕಿಲ್ಲದೆ ಬರುತ್ತಿದ್ದರು. ಬಂದ ಭಕ್ತರಿಗೆ ಪ್ರಸಾದ ವ್ಯವಸ್ಥೆ ನಡೆಯುತ್ತಿತ್ತು. ಎಲ್ಲಾ ಕಡೆ ದೊಡ್ಡ ದೊಡ್ಡ ಕಡಾಯಿಗಳಲ್ಲಿ ಹುಗ್ಗಿ ಕುದಿಸುತ್ತಿದ್ದರು. ವಿಷದ ಮನಸ್ಸಿನವರು ಕುದಿಯುವ ಹುಗ್ಗಿಯೊಳಗೆ ವಿಷ ಬೆರೆಸಿದರು. ಲಿಂಗಪೂಜೆಯಲ್ಲಿದ್ದ ಶರಣರಿಗೆ ಇದು ತಿಳಿಯಿತು. ಭಸ್ಮವನ್ನು ಹಿಡಿದುಕೊಂಡು ಹುಗ್ಗಿಯ ಕಡಾಯಿ ಕಡೆಗೆ ಬಂದರು. ಕಡಾಯಿಯೊಳಗೆ ಭಸ್ಮವನ್ನು ಹಾಕಿ ಒಳಗಿನ ವಿಷ ಹೊರಗೆ ಉಗುಳೆಂದು ಆ ಪಾತ್ರೆಗೆ ಮತ್ತು ಪ್ರಸಾದಕ್ಕೆ ಕೈ ಮುಗಿಯುತಾ ಹೇಳಿದಾಗ ತಕ್ಷಣವೇ ಕಡಾಯಿಯೊಳಗಿರುವ ಹುಗ್ಗಿ ಉಕ್ಕೇರಿ ಬಂದು ಅದರೊಳಗಿನ ಕರಿಯಬಣ್ಣ ಹೊರಗೆ ಹರಿಯಲು ಪ್ರಾರಂಭಿಸಿತು. ವಿಷ ಹಾಕಿದವರಿಗೆ ಹೊಟ್ಟೆಬೇನೆ ಅವರ ಬಾಯೊಳಗೆ ಬುರುಗು ಬರಲು ಪ್ರಾರಂಭಿಸಿತು. ಜನ ಅವರನ್ನು ಶರಣರ ಹತ್ತಿರ ಕರೆದುಕೊಂಡು ಬರುತ್ತಾರೆ ತಾವು ಮಾಡಿದ ತಪ್ಪನ್ನು ಎಲ್ಲರ ಎದುರು ಒಪ್ಪಿಕೊಂಡರು. ಶರಣರು ಅವರ ಬಾಯಲ್ಲಿ ಭಸ್ಮವನ್ನು ಹಾಕಿ ಅವರ ನೋವನ್ನು ಕಡಿಮೆ ಮಾಡುತ್ತಾರೆ.

ಕೆಲವು ಜನರು ಮಣ್ಣಿನಾಕಳ ಮಾಡಿ ಶರಣರ ಹತ್ತಿರ ಬಂದು ’ ಇವು ನಮ್ಮಾಕಳು ಒಪ್ಪಿಸಿಕೊಳ್ಳಿರಿ ನೀವು’ ಎನ್ನಲು ಶರಣರು ಒಯ್ದು ಕೊಟ್ಟಿಗೆಯಲ್ಲಿ ಕಟ್ಟಿರಿ ಎನ್ನುತ್ತಾರೆ. ನಾವು ಶರಣರಿಗೆ ಮೂರ್ಖರಾಗಿಸಿದ್ದೇವೆ ಎಂದು ಮಡದಿಯರಿಗೆ ತಿಳಿಸುತ್ತಾರೆ. ಆದರೆ ಅವರಿಗೆ ಶರಣರ ಮಹಿಮೆ ಗೊತ್ತಿತ್ತು. ಮೇಯಲು ಹೋದ ದನಗಳು ಮನೆಗೆ ಬಂದಿಲ್ಲ. ಎಲ್ಲಿ ಹುಡುಕಿದರೂ ಸಿಗುತ್ತಿಲ್ಲ. ಅವರ ಮಡದಿಯರು ಶರಣರ ಹತ್ತಿರ ಬರುತ್ತಾರೆ. ಶರಣರ ಮಹಾಮನೆಯ ಕೊಟ್ಟಿಗೆಯಲ್ಲಿ ತಮ್ಮ ದನಗಳು ಕುಂತಿವೆ.

ಶರಣರ ಹತ್ತಿರ ಹೋಗಿ ’ ಹೊಟ್ಟೆಯೊಳಗೆ ಹಾಕಿಕೊಳ್ಳಿರೆಪ್ಪಾ’ ಎಂದು ಅಳಲು ಪ್ರಾರಂಭಿಸುತ್ತಾರೆ. ಶರಣರು ’ಕೊಟ್ಟಿಗೆಯಲ್ಲಿವೆ ತೆಗೆದುಕೊಂಡು ಹೋಗಿರಿ’ ಎಂದಾಗ ’ ಇಲ್ಲಪ್ಪಾ ಅವು ನಿಮ್ಮ ದಾಸೋಹಕ್ಕೆ ಸಲ್ಲಲಿ’ ಎಂದು ಹೇಳಿ ಅವರ ಆಶೀರ್ವಾದ ಪಡೆದುಕೊಂಡು ಹೋಗುತ್ತಾರೆ. ಮಣ್ಣಿನ ಆಕಳುಗಳು ಜೀವಂತಗೊಂಡು ಆ ಹೆಣ್ಣಮಕ್ಕಳು ಬೆನ್ನು ಹತ್ತಿ ಅವರ ಮನೆಗೆ ಹೋಗಿವೆ. ಹೆಣ್ಣುಮಕ್ಕಳ ಭಾವಕ್ಕೆ ಒಲಿದ ಶರಣರು ಆಕಳುಗಳನ್ನು ಜೀವಂತಗೊಳಿಸಿದ್ದಾರೆ. ಅವರ ಗಂಡಸರು ಶರಣರಲ್ಲಿಗೆ ಬಂದು ಕ್ಷಮೇ ಕೋರುತ್ತಾರೆ.

ಬಸವಪಟ್ಟಣ ಬಸವಮ್ಮ ಎಂಬುವಳು ಶರಣರ ಅಪ್ಪಟ ಭಕ್ತೆ. ಪ್ರತಿವರ್ಷ ತಪ್ಪದೆ ಸೀತನಿ ತಂದು ಶರಣರಿಗೆ ಒಪ್ಪಿಸುತ್ತಿದ್ದಳು. ಇಪ್ಪತ್ತು ವರ್ಷವಾದರೂ ಆ ವ್ರತವನ್ನು ತಪ್ಪದೇ ನಡೆಸಿಕೊಂಡು ಬಂದಿದ್ದಳು. ಒಂದು ವರ್ಷ ಘೋರ ಮಳೆ ಬಂದು ಜೋಳ ಸರಿಯಾಗಿ ಬೆಳೆಯದೆ ಸೀತನಿ ಬರಲಿಲ್ಲ. ಮುದುಕಿ ಊಟ ನೀರು ಬಿಟ್ಟು ಹಾಸಿಗೆಯೇ ಹಿಡಿಯುತ್ತಾಳೆ. ಶರಣರ ಅಂತರಾತ್ಮಕ್ಕೆ ಆ ಮುದುಕಿಯ ಕರುಳಿನ ಕೂಗು ಮುಟ್ಟಿತು. ಭಕ್ತನೊಬ್ಬನ ಕೈಯಲ್ಲಿ ವಿಭೂತಿಯನ್ನು ಕೊಟ್ಟು ಅಜ್ಜಿಗೆ ಕೊಟ್ಟು ಬರಲು ತಿಳಿಸುತ್ತಾರೆ ಮತ್ತು ಆ ಹೊಲದಲ್ಲಿ ಚಲ್ಲಲ್ಲು ತಿಳಿಸುತ್ತಾರೆ.

ಭಕ್ತ ತಾನು ಬಂದು ಅಜ್ಜಿಯ ಕೈಯಲ್ಲಿ ಕೊಟ್ಟು ಶರಣರು ತಿಳಿಸಿದ ಪ್ರಕಾರ ಮಾಡಲು ತಿಳಿಸಿ ವಾಪಸ್ಸು ಹೋಗುತ್ತಾನೆ. ಮುಂಜಾನೆ ಎದ್ದು ಸ್ನಾನ ಪೂಜೆ ಮುಗಿಸಿ ಶರಣರು ಹೇಳಿದ ಪ್ರಕಾರ ನೀರಿನೊಳಗೆ ಕಲಿಸಿ ಹೊಲದ ತುಂಬೆಲ್ಲಾ ಚಲ್ಲುತ್ತಾಳೆ. ಕೆಲವೇ ದಿನಗಳು ಕಳೆಯಲು ಜೋಳ ಚನ್ನಾಗಿ ಬಂದು ಸೀತನಿ ಸುಟ್ಟುಕೊಂಡು ಶರಣರಲ್ಲಿಗೆ ಬಂದು ಅರ್ಪಿಸಿ ಹೋಗುತ್ತಾಳೆ ಎಂದು ಇನ್ನು ಕೆಲವು ಲೀಲೆಗಳನ್ನು ಡಾ.ಶೇಟಕಾರ ಹೇಳಿದರು.

ಡಾ. ಇಂದಿರಾ ಶೇಟಕಾರ, ಪ್ರಾಧ್ಯಾಪಕಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here