ವಿಧಾನಸಭೆ ಸಾರ್ವತ್ರಿಕ ಚುನಾವಣೆ:60 ಚೆಕ್‍ಪೋಸ್ಟ್ ಸ್ಥಾಪನೆ; DC ಯಶವಂತ ಗುರುಕರ್

0
99

ಕಲಬುರಗಿ: ಕರ್ನಾಟಕ ವಿಧಾನಸಭೆ ಸಾರ್ವತ್ರಿಕ-2023 ರ ಸಂಬಂಧ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ 60 ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ ಗುರುಕರ್ ಹೇಳಿದರು.

ಅವರು ಮಂಗಳವಾರದಂದು ರಾಜಕೀಯ ಪಕ್ಷದ ಮುಖಂಡರೊಂದಿಗೆ  ಮಾತನಾಡಿ,ಜಿಲ್ಲೆಯಲ್ಲಿ 60 ಚೆÀಕ್ ಪೋಸ್ಟ್‍ಗಳನ್ನು ತೆರೆಯಲಾಗಿದೆ  ಚುನಾವಣಾ ನೀತಿ ಸಂಹಿತ ನಿಯಮದಂತೆ ಅನಧಿಕೃತ ಹಣ ಮದ್ಯ, ವಸ್ತುಗಳ ಸಾಗಾಟಕ್ಕೆ ಕಡಿವಾಣ ಹಾಕಲು ಎಸ್.ಎಸ್.ಟಿ. ತಂಡಗಳನ್ನು ರಚಿಸಿದ್ದು,   ಜಿಲ್ಲೆಯ ಗಡಿ ಮತ್ತು ಮಹಾರಾಷ್ಟ್ರ, ತೇಲಂಗಾಣ ಅಂತರ ರಾಜ್ಯ ಗಡಿಯಲ್ಲಿ ಚೆಕ್ ಪೋಸ್ಟ್‍ಗಳನ್ನು ಸ್ಥಾಪಿಸಲಾಗುತ್ತಿದೆ. ಚೆಕ್ ಪೋಸ್ಟ್‍ನಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಸಿಬ್ಬಂದಿಗಳು ಇವುಗಳ ಮೇಲೆ ತೀವ್ರ ನಿಗಾವಹಿಸಬೇಕು ಮತ್ತು ಅಕ್ರಮ ಚಟುವಟಿಕೆಗಳನ್ನು ಸಂಪೂರ್ಣ ಬ್ರೇಕ್ ಹಾಕಲು ಕ್ರಮಕೈಗೊಳ್ಳಲಾಗಿದೆ ಎಂದರು.

Contact Your\'s Advertisement; 9902492681

ಕರ್ನಾಟಕ ವಿಧಾನ ಸಭೆ ಸಾರ್ವತ್ರಿಕ ಚುನಾವಣೆ ಹತ್ತಿರವಾಗುತ್ತಿದಂತೆ ತಾವುಗಳು ಯಾವುದೇ ಔತಣಕೂಟಗಳನ್ನು ಏರ್ಪಡಿಸುವುದು ಸಾಮಾನುಗಳನ್ನು ನೀಡುವುದು ನಿಷೇಧಿಸಲಾಗಿದೆ ಎಂದರು. ಈಗಾಗಲೇ    ಒಂದು ಕ್ಷೇತ್ರದಲ್ಲಿ 10 ರಿಂದ 12 ಮತಗಟ್ಟೆಗಳಿಗೆ ಸೆಕ್ಟೆರ್ ಅಧಿಕಾರಿಗಳು ನೇಮಕ ಮಾಡಲಾಗಿದೆ ಒಟ್ಟು ನಾವು ಈಗಾಗಲೇ 60 ಸೆಕ್ಟೆರ್ ಅಧಿಕಾರಿಗಳು ನೇಮಕ ಮಾಡಲಾಗಿದೆ ಎಂದರು

2023 ರ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದ ಯಾವುದೇ ಸಾರ್ವಜನಿಕ ಪ್ರದೇಶಗಳಲ್ಲಿ ಪೋಸ್ಟರ್‍ಗಳು ಬ್ಯಾನರ್‍ಗಳು ಕಟೌಟ್ಗಳನ್ನು ಹಾಕಬಾರದೆಂದರು. ಅಹಿತಕರ ಘಟನೆಗಳನ್ನು ನಡೆಯಕೂಡದು  ಎಂದರು ರಾಜಕೀಯ ಪಕ್ಷಗಳು ಸಭೆ-ಸಮಾರಂಗಗಳು ಏರ್ಪಡಿಸಿ  ಹಣ ನೀಡುವುದು ಸೀರೆಗಳು ಹಂಚುವುದು ಕುಕ್ಕರ್‍ಗಳನ್ನು ನೀಡುವುದು ಅಂಥವರ ಮೇಲೆ ಕಾನೂನು ಕ್ರಮಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ಡಿ ಬದೋಳೆ, ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಉಪಸ್ಥಿತರಿದ್ದರು ಕಾಂಗ್ರೇಸ್, ಬಿಜೆಪಿ, ಜೆಡಿಎಸ್ ಕಮೂನಿಷ್ಟ ಪಾರ್ಟಿ ಇಂಡಿಯಾ ಎಲ್ಲಾ ರಾಜಕೀಯ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here