ಸುರಪುರ: ಆಯ-ವ್ಯಯದ ಸಾಮಾನ್ಯ ಸಭೆಗೆ ಬಾರದ ಸದಸ್ಯರು: ಸಭೆ ಮುಂದೂಡಿಕೆ

0
16

ಸುರಪುರ: ಇಲ್ಲಿನ ನಗರಸಭೆಗೆ ಬುಧುವಾರದಂದು ಕರೆಯಲಾಗಿದ್ದ ಆಯ-ವ್ಯಯ(ಬಜೇಟ್) ಅನುಮೋದನೆ ಸ¨sಗೆÉ ಆಡಳಿತ ಪಕ್ಷದ ಸದಸ್ಯರು ಸೇರಿದಂತೆ ನಗರಸಭೆ ಸದಸ್ಯರ ಗೈರು ಹಾಜರಿಯಿಂದಾಗಿ ಮುಂದೂಡಿಕೆ ಆದ ಪ್ರಸಂಗ ನಡೆಯಿತು.

ನಗರಸಭೆ ಅಧ್ಯಕ್ಷೆ ಸುಜಾತಾ ವಿ.ಜೇವರ್ಗಿ ಅಧ್ಯಕ್ಷತೆಯಲ್ಲಿ ಬುಧುವಾರದಂದು ಬೆಳಿಗ್ಗೆ 11ಗಂಟೆಗೆ ನಗರಸಭೆ ಸಭಾಂಗಣದಲ್ಲಿ ಕರೆಯಲಾಗಿದ್ದ ಆಯ-ವ್ಯಯ ಅಂದಾಜು ಮುಂಗಡ ಪತ್ರ(ಬಜೆಟ್) ಅನುಮೋದನೆ ನೀಡುವ ವಿಶೇಷ ಸಾಮಾನ್ಯ ಸಭೆಗೆ ಆಡಳಿತ ಬಿಜೆಪಿ ಪಕ್ಷದ 16 ಸದಸ್ಯರಲ್ಲಿ ಅಧ್ಯಕ್ಷೆ ಸುಜಾತಾ ಜೇವರ್ಗಿ ಹಾಗೂ ಹಿರಿಯ ಸದಸ್ಯ ವೇಣುಮಾಧವ ನಾಯಕ ಸೇರಿದಂತೆ ಕೇವಲ ಐದು ಜನ ಆಡಳಿತರೂಢ ಸದಸ್ಯರು ಹಾಗೂ 4ಜನ ನಾಮ ನಿರ್ದೇಶಿತ ಸಭೆ ಆಗಮಿಸಿದ್ದರು, ವಿರೋಧ ಪಕ್ಷವಾಗಿರುವ ಕಾಂಗ್ರೆಸ್‍ನ ಎಲ್ಲಾ 15 ಸದಸ್ಯರು ಸಭೆಯಿಂದ ದೂರ ಉಳಿದಿರುವುದು ಕಂಡು ಬಂತು.

Contact Your\'s Advertisement; 9902492681

ಸಭೆಯನ್ನು ಪ್ರಾರಂಭಿಸಲು ಒಂದು ತಾಸು ಕಾಯುತ್ತಾ ಕುಳಿತುಕೊಂಡರೂ ಸದಸ್ಯರು ಬರಲಿಲ್ಲ ನಂತರ ವಿವಿಧ ಕಾರಣಾಂತರಗಳಿಂದ ಸದಸ್ಯರು ಇಂದಿನ ಬಜೆಟ್ ಸಭೆಗೆ ಬಂದಿಲ್ಲದ ಕಾರಣ ಗುರುವಾರಕ್ಕೆ ಸಭೆಯನ್ನು ಮುಂದೂಡಲಾಗಿದೆ ಎಂದು ನಗರಸಭೆ ಪೌರಾಯುಕ್ತ ಪ್ರೇಮ್ ಚಾಲ್ರ್ಸ ಅವರು ನಂತರ ಪತ್ರಿಕಾ ವರದಿಗಾರರಿಗೆ ತಿಳಿಸಿದರು.

ಅಲ್ಲದೆ ಇಂದಿನ ಆಡಳಿತ ರೂಢ ಸಭೆಗೆ ಕೆಲವರು ತಮ್ಮ ಸಂಬಂಧಿಕರಲ್ಲಿ ಮೃತಪಟ್ಟಿದ್ದರಿಂದ ಅಂತ್ಯ ಸಂಸ್ಕಾರಕ್ಕೆ, ಕೆಲವು ಲಗ್ನಗಳಿಗೆ ಹೋಗಿದ್ದಾರೆ ವೈಯುಕ್ತಿಕ ಕೆಲಸದಿಂದಾಗಿ ಬರಲಿಕ್ಕೆ ಆಗಿಲ್ಲ ಎಂದು ನಗರಸಭೆ ಅಧ್ಯಕ್ಷೆ ಸುಜಾತಾ ಜೇವರ್ಗಿ ಅವರು ಸಮಜಾಯಿಷಿ ನೀಡಿದರು.

ಇಂದಿನ ಸಭೆಗೆ ವಿರೋಧ ಪಕ್ಷ ಕಾಂಗ್ರೆಸ್‍ನ ಎಲ್ಲಾ ಸದಸ್ಯರು ಗೈರು ಹಾಜರಾಗಿದ್ದು ವಿಶೇಷವಾಗಿತ್ತು, ವಿರೋಧ ಪಕ್ಷದ ನಾಯಕರು ತಮ್ಮ ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮ ಪ್ರಯುಕ್ತ ಸಭೆಗೆ ಬರಲು ಆಗಿಲ್ಲ ಎಂದು ಪತ್ರಿಕೆಯೊಂದಿಗೆ ಮಾತನಾಡಿ ತಿಳಿಸಿದರು, ಆದರೆ ಉಳಿದ ಸದಸ್ಯರು ಏಕೆ ಬರಲಿಲ್ಲ ಎಂಬುದು ತಿಳಿಯಲಿಲ್ಲ, ಇಂದಿನ ಸಭೆಗೆ ಆಡಳಿತ ರೂಢ ಹಾಗೂ ವಿರೋಧ ಪಕ್ಷ ಸೇರಿದಂತೆ ಎಲ್ಲರೂ ಒಟ್ಟಾಗಿ ಸಭೆಯಿಂದ ದೂರ ಉಳಿದಿರುವುದು ಮತ್ತೊಂದು ವಿಶೇಷ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here