ಕಲಬುರಗಿ: CUKಯಲ್ಲಿ ಜೈನ ಧರ್ಮ ಅಧ್ಯಯನ ಪೀಠ ಸ್ಥಾಪನೆಗೆ ಮನವಿ

0
22

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಜೈನ ಧರ್ಮದ ಪ್ರಾಚೀನ ಯುಗದ ಶಿಲಾ ಶಾಸನಗಳು ಗತಕಾಲದ ವೈಭವ ಸಾರುವ ಕೋಟೆ ಕೊತ್ತಲೆಗಳು, ನೂರಾರು ವರ್ಷಗಳ ಪವಿತ್ರ ಬಸದಿಗಳು ಇಂದಿಗೂ ಕಾಣಬಹುದು. ಜಗತ್ತಿಗೆ ಅಹಿಂಸೆ, ಮನುಷ್ಯ ಪ್ರೇಮ ಸಾರಿದ ಜೈನ ಧರ್ಮ ಕುರಿತು ದೇಶದಲ್ಲೆಡೆ ಅದರ ವಿಚಾರಧಾರೆಗಳನ್ನು ಮುಂದಿನ ಜನಾಂಗಕ್ಕೆ ತಿಳಿಸಿಕೊಡುವ ದಿಶೆಯಲ್ಲಿ ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಜೈನಧರ್ಮ ಅಧ್ಯಯನ ಪೀಠ ಸ್ಥಾಪಿಸುವಂತೆ ಕೋರಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತದ ರಾಜ್ಯ ನಿರ್ದೇಶಕರಾದ  ಸುರೇಶ ತಂಗಾರವರು ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಗಳಾದ ಬಟ್ಟು ಸತ್ಯನಾರಾಯಣರವರಿಗೆ ಮನವಿ ಪತ್ರ ಸಲ್ಲಿಸಿದರು.

ರಾಷ್ಟ್ರಕೂಟರ ರಾಜಧಾನಿ ಮಾನ್ಯಖೇಟ(ಮಳಖೇಡ) ಕನ್ನಡದ ಮೊಟ್ಟಮೊದಲ ಉಪಲಬ್ಧ ಗ್ರಂಥ ಶ್ರೀವಿಜಯನ ಕವಿರಾಜಮಾರ್ಗ ದೊರೆತಿದ್ದು ಈ ನೆಲದಾಗಿದ್ದು ಕನ್ನಡದ ಸಾಹಿತ್ಯ, ಭಾಷೆ, ಸಂಸ್ಕøತಿ, ಶಿಲ್ಪಕಲೆ ಸೇರಿದಂತೆ ವಾಸ್ತುಶಿಲ್ಪ ಕ್ಷೇತ್ರಕ್ಕೆ ಅಮೋಘವಾದಂತಹ ಕೊಡುಗೆ ಕಾಲಕಾಲಕ್ಕೆ ಜೈನಧರ್ಮದ ಮುನಿಗಳು, ಕವಿಗಳು, ವಿದ್ವಾಂಸರು ನೀಡುತ್ತ ಬಂದಿರುವುದು ಇತಿಹಾಸದುದ್ದಕ್ಕೂ ಇಂದಿಗೂ ನಾವು ಕಾಣಬಹುದಾಗಿದೆ.  ಹೀಗಾಗಿ ಜೈನ ಧರ್ಮದ ಸಮಗ್ರ ಅಧ್ಯಯನಕ್ಕಾಗಿ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಪೀಠ ಸ್ಥಾಪಿಸುವುದು ಅತ್ಯಗತ್ಯವಾಗಿದ್ದು ಈ ದಿಶೆಯಲ್ಲಿ ರಾಜ್ಯ ಸರ್ಕಾರಕ್ಕೆ ಕೂಡಾ ಮನವಿ ಸಲ್ಲಿಸಲಾಗಿದ್ದು ಕೇಂದ್ರ ಸರ್ಕಾರ ಅಧ್ಯಯನ ಪೀಠ ಪ್ರಾರಂಭಿಸಲು ಮುಂದಾಗುವಂತೆ ಅವರು ಮನವಿ ಮಾಡಿದರು.

Contact Your\'s Advertisement; 9902492681

ಮನವಿ ಸ್ವೀಕರಿಸಿದ ಕುಲಪತಿಗಳು ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗುವುದೆಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕುಲಸಚಿವರಾದ ಪ್ರೊ. ಬಸವರಾಜ ಡೋಣೂರ ರವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here