ಭಾಷೆ ಸಾಹಿತ್ಯದ ಅಪರೂಪದ ಸಾಧನ : ಹಿರಿಯ ಲೇಖಕ ಶೇರಿ

0
34

ಸೇಡಂ; ಭಾಷೆ ಎಂಬುದು ಸಾಹಿತ್ಯದ ಅಪರೂಪದ ಸಾಧನವಾಗಿದೆ. ಗಂಭೀರ ಚಿಂತನೆಗಳು ಬೃಹತ್ ಸಮಾವೇಶದಲ್ಲಿ ಜರುಗುವುದಿಲ್ಲ. ಇಂತಹ ಚಿಕ್ಕ ಚಿಕ್ಕ ಗೋಷ್ಠಿಗಳಲ್ಲೆ ಹುಟ್ಟಿ ಅದಕ್ಕೊಂದು ಅರ್ಥ ಸಿಗುತ್ತದೆ ಎಂದು ಹಿರಿಯ ಸಾಹಿತಿ ಶ್ರೀ ಲಿಂಗಾರೆಡ್ಡಿ ಶೇರಿ ಅವರು ಹೇಳಿದರು.
ಯುಗಾದಿ ಹಬ್ಬದ ಪ್ರಯುಕ್ತ ರಾಷ್ಟ್ರಕೂಟ ಪುಸ್ತಕ ಮನೆ ಆಯೋಜನೆ ಮಾಡಿದ್ದ `ಯುಗಾದಿ ಉಷಸ್ಸು-ಕಾವ್ಯೋತ್ಸಾಹ’ ಎಂಬ ವಿಭಿನ್ನ ಕಾರ್ಯಕ್ರಮವನ್ನು ಪಟ್ಟಣದ `ಅಮ್ಮ ಮನೆ’ಯಲ್ಲಿ ಜರುಗಿತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಲಿಂಗಾರೆಡ್ಡಿ ಶೇರಿ ಅವರು, ಛಂದಸ್ಸು ಪ್ರಕಾರದಲ್ಲಿ ಪದ್ಯಗಳನ್ನು ರೂಪಿಸುವ ಕವಿತೆಗಳಲ್ಲಿ ಗಟ್ಟಿತನವನ್ನು ಪ್ರತಿಪಾದಿಸುವ ಸಾಕಷ್ಟು ಕವಿಗಳು ನಮ್ಮ ನಡುವೆ ಇದ್ದಾರೆ, ಹಾಗೇಯೆ ಯಾವುದೇ ವ್ಯಾಕರಣದ ಕಟ್ಟುಪಾಡುಗಳಿಲ್ಲದೆಯೇ ಬರೆದು ಬೆಳೆÀದವರನ್ನು ಉದಾ ಹರಣೆಯಾಗಿ ನೋಡಬಹುದು. ಆ ರೀತಿಯಯಾಗಿ ಕವಿತೆ ಕಲ್ಪನೆ ಸೃಜನಶೀಲವಾದದ್ದು, ಬೇಂದ್ರೆ ಅವರ ಪಾತರಗಿತ್ತಿ ಕವಿತೆ ಕಲ್ಪನಾಲಹರಿಯದ್ದಾಗಿದೆ ಎಂದು ಶೇರಿ ಹೇಳಿದರು.

Contact Your\'s Advertisement; 9902492681

ಮಾತು ಮಿತ, ಭಾವ ಹಿತ ಹೊಸ ಕನಸುಗಳಿಗೆ ಯುಗಾದಿ ಸಾಂಗತ್ಯ: ಯುಗಾದಿಯ ಉಷಸ್ಸು ಹೆಸರಿನಲ್ಲಿ ಬುಧವಾರ ಇಳಿಹೊತ್ತು 4.30 ರಿಂದ 7 ವರೆಗೆ ನಡೆದ ಈ ಕಾವ್ಯೋತ್ಸಾಹ ಕಾರ್ಯಕ್ರಮ ಕವಿತೆ ವಾಚನ, ಹಾಡು ಸಂಭ್ರಮಿಸಿದವು. ಹಿರಿಯ ಕವಿ ಡಾ.ಎಂ.ಜಿ. ದೇಶಪಾಂಡೆ ಅಧ್ಯಕ್ಷತೆ ವಹಿಸಿ, ಮಾತನಾಡಿ, ಬರಹಕ್ಕೆ ಮುಖ್ಯವಾದದ್ದು ಪದಸಂಪತ್ತು. ಅದನ್ನು ಹಿರಿಯ ಕವಿಗಳಾದವರು ಬಳಸಿದ್ದಾರೆ. ಬೇಂದ್ರೆಯವರು ಡಿಕ್ಷನರಿ ಆಗಿದ್ದರು. ಅದರಂತೆ ಪದಸಂಪತ್ತು ನಮ್ಮಲ್ಲಿರಬೇಕು ಎಂದು ಹೇಳಿದರು.

ಕವಿಗಳಾದ ಪ್ರಭಾಕರ ಜೋಶಿ, ಶೋಭಾದೇವಿ ಚೆಕ್ಕಿ, ಆರತಿ ಕಡಗಂಚಿ, ಬಿ.ಆರ್.ಅಣ್ಣಾಸಾಗರ, ಸಂತೋಷ ತೊಟ್ನಳ್ಳಿ, ಮುರುಗೇಂದ್ರ ಹಣ ಮನಳ್ಳಿ, ಪ್ರಕಾಶ ಗೊಣಗಿ, ಸಿದ್ದಪ್ರಸಾದರೆಡ್ಡಿ, ವಿಜಯಭಾಸ್ಕರರೆಡ್ಡಿ, ಮಹೇಶ ಅಲ್ಲೂರ ಅವರು ಕವಿತೆಗಳನ್ನು ವಾಚಿಸಲಿದ್ದಾರೆ.

ಶಿಕ್ಷಕಿ ವಿಜಯಲಕ್ಷಿ ಸುಜಿತಕುಮಾರ ಕಲಬುರಗಿ ಅವರು ಆರಂಭದಲ್ಲಿ `ಸೋಜಿಗದ ಸೂಜುಮಲ್ಲಿಗೆ’ ಹಾಡಿ ನೊಂದಿಗೆ ಕಾರ್ಯಕ್ರಮಕ್ಕೆ ಪ್ರಾರ್ಥನೆ ಗೀತೆ ಹಾಡಿದರು. ಸಿದ್ದಪ್ರಸಾದರೆಡ್ಡಿ ಸ್ವಾಗತಿಸಿದರು. ಹೈಸ್ಕೂಲ್ ಶಿಕ್ಷಕರಾದ ಡಾ.ಮಾರುತಿ ಮೋಕಾಶಿ, ಸಂತೋಷ ತೊಟ್ನಳ್ಳಿ ಮತ್ತು ಮಹೇಶ ಅಲ್ಲೂರ ಅವರು ಕನ್ನಡದ ಸಿನಿಮಾ ಹಾಡುಗಳನ್ನು ಹಾಡಿ ಮನರಂಜಿಸಿದರು. ಬೇವು ಕುಡಿದು, ಯುಗಾದಿಯನ್ನು ಸಂಭ್ರಮಿಸಿದರು.

ಫೇಸ್‍ಬುಕ್ ಲೈವ್: ಯುಗಾದಿಯ ಈ ಕವಿಗೋಷ್ಠೀಯನ್ನು ಫೇಸ್ ಬುಕ್ ಲೈವ್ ಮಾಡಿದ್ದು ಸಿದ್ದ ಪ್ರಸಾದರೆಡ್ಡಿ. ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳ ಸಾಹಿತ್ಯಾಸಕ್ತರು ಲೈವ್ ನೋಡಿದ್ದಲ್ಲದೇ, ಕಾಮೆಂಟ್ ಮಾಡದ್ದು, ಲೈಕ್ ಮಾಡಿದ್ದನ್ನು ನೋಡಿ ಕವಿಗೋಷ್ಠಿಯ ಮಧ್ಯದಲ್ಲಿಯೇ ಪ್ರಸ್ತಾಪ ಮಾಡಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here