ಚಿತ್ತಾಪುರ: ಹಬ್ಬಗಳಲ್ಲಿ ಶ್ರೇಷ್ಠವಾದ ಪ್ರಸಿದ್ದವಾದ ಯುಗಾದಿ ಹಬ್ಬ ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಂದು ಬರುತ್ತದೆ. ಯುಗಾದಿ ಹಬ್ಬವು ಹಿಂದುಗಳ ದೃಷ್ಠಿಯಲ್ಲಿ ವರ್ಷಾರಂಭದ ಪವಿತ್ರ ದಿನ ಹಾಗೂ ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ ಎಂದು ನಾಗಾವಿ ಸಾಹಿತ್ಯ ಸಾಂಸ್ಕøತಿಕ ಪರಿಷತ್ ಅಧ್ಯಕ್ಷ ಕಾಶಿನಾಥ ಗುತ್ತೇದಾರ ಹೇಳಿದರು.
ಪಟ್ಟಣದ ನಾಗಾವಿ ಗೋಶಾಲೆಯಲ್ಲಿ ವಿಶ್ವ ಹಿಂದು ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಯುಗಾದಿ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುಗಾದಿ ಎನ್ನುವ ಪದವು ಎರಡು ಪದಗಳ ಸಂಯೋಗವಾಗಿದೆ, ಯುಗಾದಿ ಎನ್ನುವ ಪದದಲ್ಲಿ ಯುಗ ಎಂದರೆ ಅವಧಿ ಮತ್ತು ಆದಿ ಎಂದರೆ ಆರಂಭ ಅಂದರೆ ಹೊಸ ಯುಗದ ಆರಂಭ ಎಂದರ್ಥವಾಗುತ್ತದೆ ಎಂದರು. ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೊಸ ವರುಷಕ್ಕೆ ಹೊಸ ಹರುಷದ ಹೊಸತು ಹೊಸರು ತರುತಿದೆ, ಎಂದು ಹೇಳುತ್ತಾ ನಾವು ಎಲ್ಲರೂ ಯುಗಾದಿಯ ನಿಜ ಅರ್ಥ ತಿಳಿದು ಆಚರಿಸೋಣ ಎಂದರು.
ವೀರಶೈವ ಸಮಾಜದ ಕೋಶಾಧ್ಯಕ್ಷ ಮಲ್ಲಣ್ಣ ಮಾಸ್ಟರ್ ಮುಡಬೂಳ ಮಾತನಾಡಿ, ಯುಗಾದಿ ಹಬ್ಬ ಭಾರರದ ನೈಜ ಸಂಸ್ಕøತಿ ಬಿಂಬಿಸುವ ಹಬ್ಬ. ಹಿಂದೆ ಎಲ್ಲರೂ ಸೇರಿ ಹಬ್ಬ ಆಚರಿಸುತ್ತಿದ್ದರು ಇಂದು ಅದೆಲ್ಲವೂ ಮಾಯವಾಗುತ್ತಿದೆ. ಪ್ರತಿಯೊಂದು ಹಬ್ಬಗಳಿಗೂ ವೈಜ್ಞಾನಿಕ ಅರ್ಥವಿದೆ. ಆದರೆ ಹಬ್ಬಗಳು ಕೇವಲ ಆಚರಣೆಗಷ್ಟೇ ಸೀಮಿತವಾಗಿವೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಹಿಂದಿನ ಸಂಸ್ಕøತಿ ಮೈಗೂಡಿಸಿಕೊಂಡು ಹಬ್ಬ ಹರಿದಿನಗಳಲ್ಲಿ ಉತ್ಸಾಹದಿಂದ ಪಾಲ್ಗೋಳ್ಳಬೇಕು ಎಂದು ಹೇಳಿದರು. ಇಂತಹ ಮಹತ್ ಕಾರ್ಯ ಮಾಡುತ್ತಿರುವ ಇಲ್ಲಿನ ಮಾತೃಶಕ್ತಿ ಯವರ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಎಚ್‍ಪಿ ತಾಲೂಕು ಅಧ್ಯಕ್ಷ ಶ್ರೀನಿವಾಸ ಹಳ್ಳಿ, ಹರಳಯ್ಯ ಸಮಾಜದ ಅಧ್ಯಕ್ಷ ಶರಣಪ್ಪ ವಗ್ಗೆ, ಮಾತೃ ಶಕ್ತಿಯ ಸುವರ್ಣ ವೀರಣ್ಣ ಶಿಲ್ಪಿ, ನಿರ್ಮಲಾ ಶಿವಶರಣಪ್ಪ ಭಂಗಿ, ಪುರಸಭೆ ವಿಪಕ್ಷ ನಾಯಕ ನಾಗರಾಜ ಭಂಕಲಗಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಆನಂದ ಪಾಟೀಲ ನರಬೋಳ, ಸತ್ಯಾನಾರಯಣ ಯಾದವ, ಅಂಬರೀಶ ಸುಲೇಗಾಂವ, ಮೇಘರಾಜ ಗುತ್ತೇದಾರ, ನಾಗರಾಜ ಹೂಗಾರ, ನಾಗುಬಾಯಿ ಜಿತುರೆ, ಶೃತಿ ಹೆಬ್ಬಾಳ, ಮಹಾದೇವ ಅಂಗಡಿ, ಮಲ್ಲಿಕಾರ್ಜುನ ಉಪ್ಪಾರ್, ಇತರರು ಇದ್ದರು.
ಗೋದಾವರಿ ನಾಗಯ್ಯಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ವಿಜಯಲಕ್ಷ್ಮೀ ಬಿರಾದಾರ ಶಾಂತಿ ಮಂತ್ರ ಪಠೀಸಿದರು, ರಕ್ಷಿತಾ ಸ್ವಾಗತಿಸಿದರು, ಅಕ್ಕಮಹಾದೇವಿ ದೇಸಾಯಿ ನಿರೂಪಿಸಿದರು, ಶೃತಿ ಥಾವರೆ ವಂದಿಸಿದರು. ಮಾತೃ ಶಕ್ತಿಯ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾದವರಿಗೆ ಬೇವು ವಿತರಿಸಿದರು.