ಉಪನ್ಯಾಸಕರ ಮೇಲೆ ಕಾನ್‍ಸ್ಟೆಬಲ್ ಹಲ್ಲೆ: ಪ್ರತಿಭಟನೆ

0
31

ಕಲಬುರಗಿ: ಜಿಲ್ಲೆಯ ಅಳಂದ ಪಟ್ಟಣದಲ್ಲಿನ ಕೇಂದ್ರದಲ್ಲಿ ಪಿಯುಸಿ ಪರೀಕ್ಷಾ ಉಪನ್ಯಾಸಕರ ಮೇಲೆ ಪೆÇಲೀಸ್ ಕಾನ್‍ಸ್ಟೆಬಲ್ ಅಂಕುಶ ಎಂಬುವರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ರಾಜ್ಯ ಪದವಿ ಪೂರ್ವ ಕಾಲೇಜುಗಳ ಹಾಗೂ 53 ರಾಜ್ಯ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಸದಸ್ಯರು, ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಮೌನ ಪ್ರತಿಭಟನೆ ನಡೆಸಿದರು.

ಹಲ್ಲೆ ಮಾಡಿದವರ ವಿರುದ್ಧ ಕ್ರಮ ಆಗ್ರಹಿಸಿದರು. ಉಪನ್ಯಾಸಕ ಮಂಜುನಾಥ ಅವರು ಅಳಂದ ಸರ್ಕಾರಿ ಪದವಿಪೂರ್ವ ಕಾಲೇಜು (ಬಾಲಕಿಯರ), ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಧ್ಯಾಹ್ನ 1.45ರ ವೇಳೆಗೆ ಉತ್ತರ ಪತ್ರಿಕೆಗಳ ಗೋಪ್ಯ ಲಕೋಟೆ ಮಾಡುವ ಕೋಣೆಗೆ ನುಗ್ಗಿದ ಪೆÇಲೀಸ್ ಕಾನ್‍ಸ್ಟೆಬಲ್ ಅಂಕುಶ ಅವರು ಮಂಜುನಾಥ ಅವರ ಮೇಲೆ ಹಲ್ಲೆ ಮಾಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಈ ದೃಶ್ಯಗಳು ಪರೀಕ್ಷಾ ಕೇಂದ್ರದಲ್ಲಿ ಅಳವಡಿಸಿದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಎಂದು ಹೇಳಿದ್ದಾರೆ.

Contact Your\'s Advertisement; 9902492681

ಹಲ್ಲೆಗೆ ಒಳಗಾದ ಉಪನ್ಯಾಸಕರು ತೀವ್ರವಾಗಿ ಮನನೊಂದಿದ್ದಾರೆ. ಕರ್ತವ್ಯ ನಿರತ ಉಪನ್ಯಾಸಕರ ಮೇಲೆ ಹಲ್ಲೆ ಮಾಡಿದ್ದು, ಖಂಡನೀಯ. ಪರೀಕ್ಷಾ ಕೇಂದ್ರಗಳಿಗೆ ಭದ್ರತೆ ಒದಗಿಸಬೇಕಾದ ಪೋಲಿಸ್ ಇಲಾಖೆಯ ಸಿಬ್ಬಂದಿ ಈ ರಿತಿ ವರ್ತಿಸಿದ್ದು ಸರಿಯಲ್ಲ. ಇದನ್ನು ಉಭಯ ಸಂಘಟನೆಗಳು, ಸಂಘಟನೆಗಳು ಬಲವಾಗಿ ಖಂಡಿಸುತ್ತವೆ. ಇದು ಹೀಗೆ ಮುಂದುವರಿದರ ಮುಂಬರುವ ದಿನಗಳಲ್ಲಿ ಪರೀಕ್ಷೆಗೆ ನಿಯೋಜನೆಗೊಂಡ ಸಿಬ್ಬಂದಿ ಮತ್ತು ಅಧಿಕಾರಿಗಳು ಕರ್ತವ್ಯ ನಿರ್ವಹಿಸಲು ಹಿಂಜರಿಯುತ್ತಾರೆ ಎಂದಿದ್ದಾರೆ.
ಮರುಕಳಿಸದಂತೆ ಅಗತ್ಯ ತೆಗೆದುಕೊಳ್ಳಬೇಕು. ಹಲ್ಲೆ ಮಾಡಿದ ಪೆÇಲೀಸ್ ಕಾನ್‍ಸ್ಟೆಬಲ್ ಎರಡು ದಿನಗಳ ಒಳಗಾಗಿ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೇ ಹೋರಾಟ ತೀವ್ರಗೊಳಿಸಲಾಗುವುದು ಎಂದು ಸಂಘವ ಮುಖಂಡರು ಎಚ್ಚರಿಸಿದರು.

ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಶಿಷ್ಟಾಚಾರ ತಹಶೀಲ್ದಾರ್ ಸಯ್ಯದ್ ನಿಸಾರ್ ಅಹ್ಮದ್ ಅವರಿಗೆ ಸಲ್ಲಿಸಿದರು. ಉಪನ್ಯಾಸಕರ ಸಂಘದ ಪದಾಧಿಕಾರಿಗಳಾದ ನಾಮದೇವ ಕಡಕೋಳ, ಜೆ.ಮಲ್ಲಪ್ಪ, ಬಿ.ಹೆಚ್.ನಿರಗುಡಿ, ಶರಣಗೌಡ ಪಾಟೀಲ, ನರಸಪ್ಪ ಟಿ, ರಂಗೋಲಿ, ಬಸಣ್ಣ ಪೂಜಾರಿ, ಶಿವಕುಮಾರ ವಿ. ಯರಗೇರಿ, ಜಗಪ್ಪ ಹೊಸಮನಿ, ಯಶವಂತ ಪವಾರ, ಅಶೋಕ ತಳವಾರ, ಪ್ರಚಾರ್ಯ ಸಂಘದ ಪದಾಧಿಕಾರಿಗಳಾದ ಅರುಣಕುಮಾರ ಪಾಟೀಲ, ಮೊಹ್ಮದ್ ಅಲ್ಲಾಉದ್ದೀನ್, ಸಾಗರ, ಮಲ್ಲೇಶ ನಾಟೀಕಾರ, ಪಲ್ಲಾದ ಬುರ್ಲಿ, ಆಯೇಶಾ ನಸೀಮ್, ಎಂ.ಸುಜಾತಾ, ಬಿ.ಪಿ.ಚವ್ಹಾಣ, ಬಸವರಾಜ ಬಿರಾಜದಾರ, ಗೌಸುದ್ದೀನ್ ತುಮಕೂರಕರ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here