Tuesday, July 16, 2024
ಮನೆಬಿಸಿ ಬಿಸಿ ಸುದ್ದಿ‘ಜಾತ್ಯತೀತ ಶಕ್ತಿಗಳು ಶರಣಾಗಬಾರದು: ಡಾ.ತಸ್ಲೀಮ್ ರೆಹೆಮಾನಿ

‘ಜಾತ್ಯತೀತ ಶಕ್ತಿಗಳು ಶರಣಾಗಬಾರದು: ಡಾ.ತಸ್ಲೀಮ್ ರೆಹೆಮಾನಿ

ಬೆಂಗಳೂರು: ಬಿಜೆಪಿ ನಾಯಕರು ಸಂವಿಧಾನಿಕ ಸಂಸ್ಥೆಗಳನ್ನು ದುರು ಪಯೋಗಪಡಿಸಿಕೊಂಡು, ಜಾತ್ಯತೀತ ನಾಯಕರನ್ನು ಹೆದರಿಸುತ್ತಿದೆ.ಆದರೆ, ನಾವು ಎಂದೂ ಸಹ ಶರಣಾಗಬಾರದು ಎಂದು ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಡಾ.ತಸ್ಲೀಮ್ ಅಹ್ಮದ್ ರೆಹ್ಮಾನಿ ಹೇಳಿದರು.

ರವಿವಾರ ನಗರದ ಹಮೀದ್ ಶಾ ಆವರಣದ ಎಸ್‌ಡಿಪಿಐ ರಾಜ್ಯ ಪ್ರಧಾನ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಔಪಚಾರಿಕವಾಗಿ ಮಾತನಾಡಿದ ಅವರು, ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿಯೇ, ಸಣ್ಣ ಪ್ರಕರಣದೊಂದರಲ್ಲಿ ಸಿಬಿಐ ಮಾಜಿ ಗಹ ಮಂತ್ರಿ ಪಿ.ಚಿದಂಬರ್ ಅವರನ್ನು ಬಂಧಿಸಿ, ಇತರೆ ನಾಯಕರನ್ನು ಬೆದರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ಮೆಟ್ಟಿ ನಿಲ್ಲುವುದಕ್ಕೆ ನಮಗೆ ಸೈದ್ದಾಂತಿಕ ಹೋರಾಟದ ಅಗತ್ಯತೆ ಇದ್ದು, ಇದರಲ್ಲಿ ನಾವು ಯಶಸ್ವಿ ಆಗಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಮತ್ತೊಷ್ಟು ಸಂಕಷ್ಟಕ್ಕೆ ಒಳಗಾಗುವುದಾಗಿ ಆತಂಕ ವ್ಯಕ್ತಪಡಿಸಿದರು. ಬಿಜೆಪಿಯ ಮತಬ್ಯಾಂಕ್ ರಾಜಕೀಯವು ದೇಶವನ್ನು ಹಿಂದಕ್ಕೆ ಕೊಂಡೊಯ್ಯುತ್ತಿದೆ. ಜನರು ತಮ್ಮ ಹವಾನಿಯಂತ್ರಿತ ಮನೆಗಳಿಂದ ಹೊರ ಬಂದು ಧ್ವನಿ ಎತ್ತಬೇಕು. ಇಲ್ಲದಿದ್ದರೆ, ನಾವೆಲ್ಲರೂ ಈ ಕ್ರೂರ ಬಲೆಯಲ್ಲಿ ಸಿಲುಕಿಕೊಳ್ಳುತ್ತೇವೆ ಎಂದ ಅವರು, ಅಲ್ಪಸಂಖ್ಯಾತರ ವಿರುದ್ಧ ಜಾರಿಗೆ ತರುತ್ತಿರುವ ಕಾನೂನು ಕುರಿತು ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಮಾತನಾಡಿ, ಇಂದಿನ ಪರಿಸ್ಥಿತಿ ಕುರಿತು ಮಾಧ್ಯಮಗಳು ಬೆಳಕು ಚೆಲ್ಲುವ ಕೆಲಸ ಮಾಡಬೇಕಿದೆ. ಅಷ್ಟೇ ಅಲ್ಲದೆ, ಸಾರ್ವಜನಿಕರನ್ನು ಹಾಡು ಹಾಗಲೇ ವಂಚನೆ ಮಾಡುತ್ತಿರುವ ಸರಕಾರಗಳ ಕರಾಳ ಮುಖಗಳನ್ನು ಬಯಲುಗೊಳಿಸಿ, ಪ್ರಜಾಪ್ರಭುತ್ವ ಉಳಿಸಬೇಕಿದೆ ಎಂದು ನುಡಿದರು.

ಈ ಸಂದರ್ಭದಲ್ಲಿ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಅಕ್ರಂ ಹಸನ್, ಉಪಾಧ್ಯಕ್ಷ ಅಬ್ದುಲ್ ಮಜೀದ್ ಖಾನ್, ಮ.ಸಂಯೋಜಕ ಅಬ್ರಾರ್ ಅಹ್ಮದ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular