ಬಿಜೆಪಿ ಪಕ್ಷ ಸಂವಿಧಾನದಲ್ಲಿ ಭಕ್ತಿ ಹೊಂದಿರುವ ಪಕ್ಷ -,ಗೌರವ ಪ್ರಶ್ನಾತೀತ: ಚಂದು ಪಾಟೀಲ್

0
17

ಕಲಬುರಗಿ: ಕಾಂಗ್ರೆಸ್ ಸಂವಿಧಾನದ ಬಗ್ಗೆ ಕೇವಲ ಜಪ ಮಾತ್ರ ಮಾಡಿದೆ ಅದರ ಬಗ್ಗೆ ನಿಜವಾದ ಗೌರವ ಭಕ್ತಿಯಿಂದ ನಡಕೊಂಡ ಪಕ್ಷ ಬಿಜೆಪಿ ಎಂದು ಕಲಬುರ್ಗಿ ನಗರ ಬಿಜೆಪಿ ಅಧ್ಯಕ್ಷ ಚಂದು ಪಾಟೀಲ್ ಹೇಳಿದರು.

ಕಲಬುರ್ಗಿಯಲ್ಲಿ ದಕ್ಷಿಣ ಮಂಡಕ ಖಣದಾಳ ಮಹಾ ಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ ರಾಮ ಮಂದಿರ ನಿರ್ಮಾಣ ವಿಷಯದಲ್ಲಿ ಮೋದಿಯವರು ಸಂವಿಧಾನಕ್ಕೆ ಗೌರವ ಕೊಟ್ಟು ಎರಡು ಮೂರು ವರ್ಷ ನ್ಯಾಯಕ್ಕಾಗಿ ಹೋರಾಡಿ ಸಂವಿಧಾನಬದ್ಧವಾಗಿ ರಾಮಜನ್ಮಭೂಮಿ ಎಂದು ನಿರ್ಧರಿಸಿದ ನಂತರವಷ್ಟೇ ಅಯೋಧ್ಯೆಯಲ್ಲಿ ಮಂದಿರ ನಿರ್ಮಿಸಿದರು.ಇದು ಸಂವಿಧಾನಕ್ಕೆ ಬಿಜೆಪಿ ನೀಡುವ ಗೌರವ .ಕಾಂಗ್ರೆಸ್ ಪದೇ ಪದೇ ಸವಿಧನ ಬಗ್ಗೆ ಹೇಳಿದರು ಕೃತಿಯಲ್ಲಿ ವಿರುದ್ಧ ಕೆಲಸ ಮಾಡುತ್ತಿದೆ .

Contact Your\'s Advertisement; 9902492681

ಕಾಂಗ್ರೆಸ್ ನ 60ವರ್ಷದ ಆಡಳಿತದಲ್ಲಿ ಅಭಿವೃದ್ಧಿ ಶೂನ್ಯ ಆಗಿದ್ದು ಮೋದಿ ಯವರ 10ವರ್ಷದಲ್ಲಿ ಜಗತ್ತೇ ಭಾರತವನ್ನು ನೋಡುವಂತೆ ಅಭಿವೃದ್ಧಿ ಮಾಡಲಾಗಿದೆ.ಕಾಂಗ್ರೆಸ್ ಸರಕಾರ ರೊಕ್ಕ ಇಲ್ಲದೆ ಅಭಿವೃದ್ಧಿ ಮಾಡದೆ ವಂಚಿಸಿದೆ.ಅದಕ್ಕಾಗಿ ಲೋಕಸಭೆ ಚುನಾವಣೆಯಲ್ಲಿ ಜಾಧವ್ ಅಭಿವೃದ್ಧಿ ಕೆಲಸಕ್ಕೆ ಮಠ ನೀಡಿ ಅತೀ ಹೆಚ್ಚಿನ ಅಂತರದಿಂದ ಗೆಲ್ಲಿಸಲು ಪಣತೊಡಬೇಕು ಎಂದು ಕರೆ ನೀಡಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಕೊಟ್ಟು ನರೇಂದ್ರ ಮೋದಿಯವರ ಜೊತೆ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟ ಮಹಾಜನತೆಗೆ ಕೃತಜ್ಞನಾಗಿದ್ದೇನೆ. ಈ ಬಾರಿ ಕೂಡ ಅವಕಾಶ ನೀಡಿ ದೇಶದ ರಕ್ಷಣೆಗಾಗಿ ನಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಗೆಲ್ಲಿಸಿಕೊಡಬೇಕು ಎಂದು ಲೋಕಸಭಾ ಸದಸ್ಯರಾದ ಉಮೇಶ್ ಜಾಧವ್ ಮನವಿ ಮಾಡಿದರು.

ಸಂವಿಧಾನದ 370 ವಿಧಿ ರದ್ದತಿ ಮಾಡಿ ಭಯೋತ್ಪಾದಕರ ತಾಣವಾಗಿದ್ದ ಭೂಮಿಯ ಸ್ವರ್ಗವೆಂದು ಖ್ಯಾತ ಕಾಶ್ಮೀರಕ್ಕೆ ಸುಂದರ ಭವಿಷ್ಯವನ್ನು ಕೊಡಲಾಯಿತು. ಕರೋನಾ ಸಂದರ್ಭದಲ್ಲಿ ಎರಡು ಲಸಿಕೆಗಳನ್ನು ದೇಶಿಯವಾಗಿ ಉತ್ಪಾದಿಸಿ ಜಗತ್ತಿಗೆ ನೀಡಿ ಭಾರತ ಮಾನವೀಯ ಸೇವೆ ಮಾಡುವಂತೆ ಮೋದಿ ಮಾಡಿದರು. ಮೊದಲ ಆರ್ ಟಿ ಪಿ ಸಿ ಆರ್ ಕೇಂದ್ರ ಕಲ್ಬುರ್ಗಿಯಲ್ಲಿ ತೆರೆಯಲು ಮತ್ತು ಆಮ್ಲಜನಕ, ರೆಮಿಡಿಸಿವಿಯರ್ ಚುಚ್ಚು ಮದ್ದು,ಔಷಧಿ ನೀಡಿದ ಹೆಗ್ಗಳಿಕೆ ಮೋದಿ ಅವರದು. ಕರೋನಾ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಎಲ್ಲಿದ್ದರು? . ಈ ಬಗ್ಗೆ ಮುಕ್ತ ಚರ್ಚೆಗೆ ಬನ್ನಿ ಎಂದು ಮಲ್ಲಿಕಾರ್ಜುನ ಖರ್ಗೆ ಅಥವಾ ಈಗಿನ ಕಾಂಗ್ರೆಸ್ ಅಭ್ಯರ್ಥಿಗೆ ಸವಾಲೆಸೆದರು. ಸಿದ್ದರಾಗುತ್ತಿಲ್ಲ ಎಂದು ದೂರಿದರು.

ಸನಾತನ ಧರ್ಮದ ರಕ್ಷಣೆಗೆ ಮತ್ತು ಮುಂದಿನ ಜನಾಂಗದ ಉತ್ತಮ ಭವಿಷ್ಯಕ್ಕಾಗಿ ಮೇ 7 ರಂದು ಎಲ್ಲ ಮಹಾಜನತೆ ಕಾಶಿ ಯಾತ್ರೆ ಕೈಗೊಂಡಂತೆ ಮತಗಟ್ಟೆಗೆ ಹೋಗಿ ಮೋದಿ ಅವರ ಸಂಕಲ್ಪ ಈಡೇರಿಸಲು ಮತ ಹಾಕಬೇಕೆಂದು ಕೋರಿದರು. ಚಂದು ಪಾಟೀಲ್ ಹಾಗೂ ದತ್ತಾತ್ರೇಯ ಪಾಟೀಲ್ ಅವರಂತಹ ನಾಯಕರಿಗೆ ಮುಂದಿನ ಉತ್ತಮ ಭವಿಷ್ಯಕ್ಕಾಗಿ ನಾವೆಲ್ಲರೂ ಶಕ್ತಿ ತುಂಬಬೇಕಾಗಿದೆ. ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಬಿ ಜಿ ಪಾಟೀಲ್, ದಯಾಘನ ಧಾರವಾಡಕರ್, ಸಂಜಯ್ ಮಿಸ್ಕಿನ್, ಮಹಾದೇವ ಬೆಳಮಗಿ ಪ್ರಕಾಶ್ ಪಾಟೀಲ್ ಹಿರಾಪುರ್,ಶೋಭಾ ಪಾಟೀಲ್, ಶಿವಾನಂದ ನಾಗನಹಳ್ಳಿ, ಶ್ರೀನಿವಾಸ ದೇಸಾಯಿ ಮತ್ತಿತರರಿದ್ದರು.

ಜಾತಿ ವಿಷ ಬೀಜ ಬಿತ್ತಿ ಅಧಿಕಾರ ಪಡೆಯಲು ಹೊಂಚು ಹಾಕುತ್ತಿರುವ ಕಾಂಗ್ರೆಸ್ ಬ್ರಿಟಿಷ್ ಮಾನಸಿಕತೆಯನ್ನು ಹೊಂದಿದೆ. ಇನ್ನುಳಿದ 24 ದಿನಗಳಲ್ಲಿ ಹಗಲು ರಾತ್ರಿ ಬಿಜೆಪಿಗೆ ಕೆಲಸ ಮಾಡಿ ಕಾರ್ಯಕರ್ತರು ವಿಜಯಪತಾಕೆ ಹಾರಿಸಬೇಕು. -ಶಶಿಲ್ ಜಿ ನಮೋಶಿ, ವಿಧಾನ ಪರಿಷತ್ ಸದಸ್ಯರು.

ಉಮೇಶ್ ಜಾಧವ್ ಅಭಿವೃದ್ಧಿಯ ಹರಿಕಾರರಾಗಿ ಹಲವಾರು ಯೋಜನೆಗಳನ್ನು ಕಲಬುರ್ಗಿಗೆ ನೀಡಿದ್ದು ಈ ಬಾರಿ ನಾವೆಲ್ಲರೂ ಎಂಪಿಯಾಗಿ ಮಾತ್ರ ಓಟು ಹಾಕುವುದಲ್ಲ. ಅವರೊಬ್ಬ ಕೇಂದ್ರ ಸಂಪುಟದ ಸಚಿವರಾಗುವುದು ಸತ್ಯ.ಅದರಿಂದ ಇನ್ನಷ್ಟು ಕೊಡುಗೆಗಳನ್ನು ಈ ಭಾಗಕ್ಕೆ ನೀಡಲಿದ್ದಾರೆ. ದತ್ತಾತ್ರೇಯ ಪಾಟೀಲ್ ಮಾಜಿ ಶಾಸಕರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here