ಮುಸ್ಲಿಂ ಬಾಂಧವರಿಂದ ಕಲಬುರಗಿಯಲ್ಲಿ ಸಡಗರದ ಈದ್ ಉಲ್ ಫಿತ್ರ್ ಆಚರಣೆ

0
41
ಫೋಟೋ: ಮಂಜುನಾಥ ಜಮಾದಾರ
  • ಸಾಜಿದ್ ಅಲಿ

ಕಲಬುರಗಿ; ರಂಜಾನ್ ಹಬ್ಬದ ನಿಮಿತ್ತ ಗುರುವಾರ ಸಮಸ್ತ ಮುಸ್ಲಿಂ ಬಾಂಧವರು ಜಿಲ್ಲಾದ್ಯಂತ ವಿರುವ ಈದ್ಗಾ ಮೈದಾನ, ಜುಮ್ಮಾ ಮಸೀದಿ ಹಾಗೂ ದರ್ಗಾಗಳ ಆವರಣದಲ್ಲಿ ಈದ್ ಉಲ್ ಫಿತ್ರ್ ಸಡಗರದಿಂದ ಆಚರಿಸಿದರು.

ತಿಂಗಳ ಪೂರ್ತಿ ಉಪವಾಸ ವೃತಗಳು ಆಚರಸಿ ಸಮಾಜದವರು ಇಂದು ಅಧೀಕೃತವಾಗಿ ಅಲ್ಲಾಹನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಕರುಣಾ ಸಾಗರ ಅಲ್ಲಾಹನಿಗೆ ತಾನು ಗೊತ್ತಿದ್ದು ಗೊತ್ತಾಗದೆ ಮಾಡಿರುವ ತಪ್ಪುಗಳಿಗೆ ಇಚ್ಛಾ ತಾಪ ಮಾಡುವ ಮೂಲಕ ಸಾಮೂಹಿಕವಾಗಿ ಅಲ್ಲಾಹನಲ್ಲಿ ಕ್ಷಮೆ ಕೋರಿದ್ದರು.

ಫೋಟೋ: ಮಂಜುನಾಥ ಜಮಾದಾರ
Contact Your\'s Advertisement; 9902492681

ಈ ವೇಳೆ ಫಲಿಸ್ತಿನಿಯರ ಮೇಲೆ ನಡೆದಿರುವ ದಾಳಿಗಳು ಮತ್ತು ದೌರ್ಜನ್ಯವನ್ನು ಖಂಡಿಸಿ ಭಾರತದಲ್ಲಿ ಸೌಹಾರ್ದ, ಶಾಂತಿ ಹಾಗೂ ಬಂಧುತ್ವ ಹೆಚ್ಚಾಗಲಿ ಎಂದು ಪಾರ್ಥನೆ ಮಾಡಿ, ಬಿಸಿಲು ಮತ್ತು ರಾಜ್ಯದಲ್ಲಿ ನೀರಿನ ಕೊರತೆಯನ್ನು ಅಲ್ಲಾಹನ ಕೃಪೆಯಿಂದ ಆಗದಿರಲಿ ಎಂದು ಬೇಡಿಕೊಂಡರು.

ಈದ್ ವಿಶೇಷ ಪ್ರಾರ್ಥನೆ ನಂತರ ಹಿಂದೂ ಸಹೋದರರು ಮುಸ್ಲಿಂ ಬಾಂಧವರಿಗೆ ಪರಸ್ಪರ ಶುಭಾಶಯ ವಿನಿಮಯದ ಬಳಿಕ ಶೀರ್ ಖುರಮಾ ಸವಿಯುವ ಮೂಲಕ ಸೌಹಾರ್ದತೆಯಿಂದ ಈದ್ ಉಲ್ ಫಿತ್ರ್ ಹಬ್ಬ ಜಿಲ್ಲಾದ್ಯಂತ ಆಚರಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here