ಮಾದಕ ವಸ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆ

0
59

ಸುರುಪುರು :ನಗರದ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪೊಲೀಸ ಇಲಾಖೆ ಸುರುಪುರು ಇವರ ಸಂಯೋಗದಲ್ಲಿ “ಮಾದಕ ವಸ್ತುಗಳ ದುರುಪಯೋಗ ಮತ್ತು ಅಕ್ರಮ ಸಾಗಣಿಕೆ ವಿರುದ್ಧ ಅಂತರಾಷ್ಟ್ರೀಯ ದಿನವನ್ನು ಆಚರಿಸಲಾಯಿತು”.

ಆನಂದ ವಾಘಮೋಡೇ, ಪೊಲೀಸ್ ಇನ್ಸ್ಪೆಕ್ಟರ್, ಸುರುಪುರ ಇವರು ಕಾರ್ಯಕ್ರಮದ ಮುಖ್ಯಅಥಿತಿಗಳಾಗಿ ಆಗಮಿಸಿ, ಡ್ರಗ್ಸ್ ಸೇವನೆ ಇಂದ ಆಗುವ ದುಷ್ಪರಿಣಾಮಗಳು ಮತ್ತು ಅಕ್ರಮ ಸಾಗಣಿಕೆ ವಿರುದ್ದ ಬಹಳ ದೀರ್ಘವಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ಅಂಚಿಕೊಂಡರು ಹಾಗೆ ಮಾದಕ ವಸ್ತುಗಳ ಸೇವನೆ ಅಥವಾ ಅಕ್ರಮ ಸಾಗಣಿಕೆ ಕಂಡುಬಂದಲ್ಲಿ ಪೊಲೀಸ್ ಇಲಾಖೆಗೆ ಕರೆಮಾಡಿ ತಿಳಿಸಬೇಕು ಮತ್ತು ಅಂತವರ ವಿರುದ್ಧ ನಾವು ಹೋರಾಡಬೇಕು ಎಂದು ತಿಳಿಹೇಳಿದರು.

Contact Your\'s Advertisement; 9902492681

ಹಾಗೆ ಮಾದಕ ವಸ್ತುಗಳ ಸೇವನೆ ಮತ್ತು ಅಕ್ರಮ ಸಾಗಣಿಕೆಯಂತ ಚಟುವಟಿಕೆಗಳಲ್ಲಿ ಯುವಕರು ಭಾಗಿಯಾಗದೆ ಉತ್ತಮ ಅರೋಗ್ಯ ಮತ್ತು ಅಭ್ಯಾಸದ ಕಡೆ ಗಮನ ಹರಿಸಬೇಕು ಎಂದು ತಿಳಿಹೇಳಿದರು. ಮೆಟ್ರೋ ನಗರದಲ್ಲಿ ನಡೆದಂತ ಡ್ರಗ್ಸ್ ಕ್ರೈಂ ಕೇಸುಗಳು ಯುವಕರ ಬಾಳನ್ನು ಹೇಗೆ ಹಾಳು ಮಾಡುತ್ತವೆ ಮತ್ತು ಇದರಿಂದ ದೇಶಕ್ಕೆ ಆಗುವ ಅನಾನುಕೂಲಗಳ ಬಗ್ಗೆ ತಿಳಿಸಿದರು.

ಪ್ರಾಚಾರ್ಯರಾದ ಡಾ. ಶರಣಬಸಪ್ಪ ಸಾಲಿ ಯವರು ಅತಿಥಿಗಳನ್ನು ಸ್ವಾಗತಿಸಿ ಸನ್ಮಾನಿಸಿದರು, ಡಾ. ಅಶೋಕ ಪಾಟೀಲ್, ಎಕ್ಸಾಮ್ ಡೀನ್, ಪ್ರೊ. ಶರಣಗೌಡ ಪಾಟೀಲ್, ಅಕಾಡೆಮಿಕ್ ಡೀನ್ ಹಾಗೂ ಎಲ್ಲಾ ವಿಭಾಗದ ಮುಖ್ಯಸ್ಥರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮವನ್ನು ಪ್ರೊ. ಗಂಗಾಧರ ಹೂಗಾರ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here