ಶಿಕ್ಷಕರಿಗೆ ಗಳಿಕೆ ರಜೆ ನೀಡಿ ನಗದು ಪುಸ್ತಕದಲ್ಲಿ ನಮೂದಿಸಲು ಮನವಿ

0
184

ಸುರಪುರ: 2023-24ನೇ ಸಾಲಿನಲ್ಲಿ ಬೇಸಿಗೆಯಲ್ಲಿ ಕರ್ತವ್ಯ ನಿರ್ವಹಿಸಿದ ಶಿಕ್ಷಕರಿಗೆ ಗಳಿಕೆ ರಜೆ ನೀಡಿ ನಗದು ಪುಸ್ತಕದಲ್ಲಿ ನಮೂದಿಲು ಆಗ್ರಹಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮೂಲಕ ಮನವಿ ಸಲ್ಲಿಸಿ ಮಾತನಾಡಿದ ಸಂಘದ ಮುಖಂಡರು,2023-24ನೇ ಸಾಲಿನಲ್ಲಿ ನಮ್ಮ ಶಿಕ್ಷಕರು,ಪ್ರಧಾನಗುರುಗಳು ಬೇಸಿಗೆ ರಜೆಯಲ್ಲಿ 41 ದಿನಗಳ ಕಾಲ ಸರ್ಕಾರಿ ಆದೇಶದಂತೆ ಬಿಸಿಯೂಟದ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸಿದ್ದು,ನಿಯಮಾನುಸಾರ ಇವರಿಗೆ ಗಳಿಕೆ ರಜೆಯನ್ನು ನೀಡಿ ಎಸ್.ಆರ್.ಬುಕ್‍ನಲ್ಲಿ ನಮೂದಿಸಬೇಕು ಹಾಗೂ 2023-24ನೇ ಸಾಲಿನಲ್ಲಿ ನಡೆದ ಲೋಕಸಭಾ ಹಾಗೂ ಸುರಪುರ ವಿಧಾನಸಭಾ ಉಪ ಚುನಾವಣೆಯ ಇ.ಡಿ.ಸಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ ಶಿಕ್ಷಕರಿಗೆ ಮತ್ತು ಬಿ.ಎಲ್.ಓ ಗಳಾಗಿ ಕರ್ತವ್ಯ ನಿರ್ವಹಿಸಿದ ಶಿಕ್ಷಕರಿಗೆ ನಿಯಮಾನುಸಾರ ತಹಸಿಲ್ದಾರರ ಆದೇಶದಂತೆ ಗಳಿಕೆ ರಜೆಯನ್ನು ನೀಡಿ ಅವುಗಳನ್ನು ಕೂಡ ಎಸ್.ಆರ್.ಬುಕ್‍ನಲ್ಲಿ ನಮೂದಿಸಬೇಕಾಗಿ ಮನವಿ ಮಾಡುತ್ತೇವೆ.ಯಾವುದೇ ಶಿಕ್ಷಕರಿಗೆ ತೊಂದರೆಯಾಗದಂತೆ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದು ತಕ್ಷಣವೇ ಗಳಿಕೆ ರಜೆಗಳನ್ನು ಎಸ್.ಆರ್.ಬುಕ್‍ನಲ್ಲಿ ನಮೂದಿಸಲು ವಿನಂತಿಸುವುದಾಗಿ ತಿಳಿಸಿದರು.

Contact Your\'s Advertisement; 9902492681

ನಂತರ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ.ಸಿ ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಬಿಸಿಯೂಟದ ಸಹಾಯಕ ನಿರ್ದೇಶಕ ಪಂಡೀತ ನಿಂಬೂರ,ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷ ಸಂಜೀವಪ್ಪ ದರಬಾರಿ,ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ಗೋವಿಂದಪ್ಪ ತನಿಕೇದಾರ,ಪ್ರಧಾನ ಕಾರ್ಯದರ್ಶಿ ಶರಣಬಸವ ಗೋನಾಲ,ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾ.ಅಧ್ಯಕ್ಷ ಖಾದರ್ ಪಟೇಲ್,ಇಸಿಓ ಹಣಮಂತ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here