ಆಳಂದ: ಕೋಟ್ಯಾಂತರ ರೂ. ಭ್ರಷ್ಟಾಚಾರ ಆರೋಪ

0
333

ಆಳಂದ; ತಾಲೂಕಿನ ಹಲವು ಗ್ರಾಮ ಪಂಚಾಯತಿಗಳಲ್ಲಿ ಶಾಸಕ ಬಿ.ಆರ್ ಪಾಟೀಲ, ಆರ್ ಕೆ ಪಾಟೀಲ ಕುಮ್ಮಕ್ಕಿನಿಂದ ಸಂತೋಷ ಭೀಮಾಶಂಕರ ಪಾಟೀಲ ಎಂಬ ಒಬ್ಬನೇ ವ್ಯಕ್ತಿಯ ಹೆಸರಿನಲ್ಲಿ ವೆಂಡರ್ ಬಳಸಿ ಕಾಮಗಾರಿ ಮಾಡದೇ ಹಣ ಲಪಟಾಯಿಸಿ ಭ್ರಷ್ಟಾಚಾರ ಎಸಗಲಾಗಿದೆ. ಅನೇಕ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿ ಮಾಡದೇ ನಕಲಿ ಬಿಲ್‍ಗಳನ್ನು ಸೃಷ್ಟಿಸಿ ಕೋಟ್ಯಾಂತರ ರೂಪಾಯಿ ಕೊಳ್ಳೆ ಹೊಡೆಯಲಾಗಿದೆ ಎಂದು ಜಿ.ಪಂ ಮಾಜಿ ಉಪಾಧ್ಯಕ್ಷ ಹರ್ಷಾ ಗುತ್ತೇದಾರ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಮಗಾರಿ ನಡೆದಿವೆ ಎಂದು ತೋರಿಸಲಾದ ಸ್ಥಳಗಳಲ್ಲಿ ಯಾವುದೇ ರೀತಿಯ ಕಾಮಗಾರಿಗಳು ಮಾಡಿರುವುದಿಲ್ಲ. ಅಲ್ಲದೇ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯ ನಿಯಮಗಳಂತೆ ವೆಂಡರ್‍ನ್ನು ಗುತ್ತಿಗೆ ಆಧಾರದ ಮೇಲೆ ಗುರುತಿಸಿ.

Contact Your\'s Advertisement; 9902492681

ಪತ್ರಿಕಾ ಪ್ರಕಟಣೆ ನೀಡಬೇಕು ಎನ್ನುವುದು ಜಿ.ಪಂ ಕಚೇರಿಯ ಆದೇಶವಿದೆ ಆದರೆ  ಕಛೇರಿಯ ಆದೇಶವನ್ನು ಪಾಲಿಸದೇ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯ ನಿಯಮಗಳನ್ನು ಗಾಳಿಗೆ ತೂರಿ ಮನಸ್ಸೋ ಇಚ್ಚೇ ಕೆಲವು ಕಡೆ ಕಳಪೆ ಕಾಮಗಾರಿಗಳನ್ನು ಮಾಡಿ ಬಿಲ್ ಎತ್ತಲಾಗಿದೆ. ಅಲ್ಲದೇ ಕೆಲವು ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ ಪಂಚಾಯತ ಸದಸ್ಯರ ಗಮನಕ್ಕೆ ತರದೇ  ಕ್ರಿಯಾಯೋಜನೆ ತಯಾರಿಸದೇ ಹೆಚ್ಚುವರಿಯಾಗಿ ಸೇರಿಸಿ ಜಿ.ಪಂ.ನಿಂದ  ಅನುಮೋದನೆ ಪಡೆದು ಕಾಮಗಾರಿ ಮಾಡದೇ ಬಿಲ್ ಎತ್ತಲಾಗಿದೆ ಎಂದು ದೂರಿದ್ದಾರೆ.

ಆಳಂದ ತಾಲೂಕಿನ ವಿವಿಧ ಗ್ರಾಮಗಳಾದ ಬೆಳಮಗಿ, ದರ್ಗಾಶಿರೂರ, ಹಾಳ ತಡಕಲ, ಹೆಬಳಿ, ಹಿರೋಳಿ, ಹೊದಲೂರ, ಮಾದನಹಿಪ್ಪರಗಾ, ಮಟಕಿ, ಮೋಘಾ ಕೆ, ನಿಂಬರ್ಗಾ, ಪಡಸಾವಳಿ, ರುದ್ರವಾಡಿ, ಸರಸಂಬಾ, ಸಾವಳೇಶ್ವರ, ಪಂಚಾಯತಿಗಳಲ್ಲಿ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಸಂತೋಷ ಭೀಮಾಶಂಕರ ಪಾಟೀಲ ಎಂಬ ವ್ಯಕ್ತಿ ವೆಂಡರ್ ಬಳಸಿ ಕಾಮಗಾರಿ ಮಾಡದೇ 1,81,80,852 ರೂಪಾಯಿಗಳು ಬಿಲ್ ಮಾಡಿಕೊಂಡು ಸರ್ಕಾರದ ಬೊಕ್ಕಸಕ್ಕೆ ಹಾಗೂ ಸಾರ್ವಜನಿಕರ ತೆರಿಗೆಯ ಹಣಕ್ಕೆ ಮೋಸ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಆಳಂದ ತಾಲೂಕು ವ್ಯಾಪ್ತಿಯ ದರ್ಗಾ ಶಿರೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಯಾವುದೇ ಕಾಮಗಾರಿಗಳನ್ನು ಮಾಡದೇ ಸಂಪೂರ್ಣ ಹಣವನ್ನು ಲಪಟಾಯಿಸಿರುತ್ತಾರೆ ಆದ್ದರಿಂದ ಸದರಿ ಕಾಮಗಾರಿ ನಿರ್ವಹಿಸಿದ ಸ್ಥಳಗಳಲ್ಲಿ ಸ್ಥಳ ಪರಿಶೀಲನೆ ಮಾಡಿ, ವೆಂಡರ್ ಬಳಸಿ ಕಾಮಗಾರಿ ನಿರ್ವಹಿಸಿದ ವ್ಯಕ್ತಿಯ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಅಲ್ಲದೇ ಸರ್ಕಾರದ ಬೊಕ್ಕಸಕ್ಕೆ ಹಾಗೂ ಸಾರ್ವಜನಿಕರ ತೆರಿಗೆಯ ಹಣಕ್ಕೆ ಮೋಸ ಮಾಡಿರುವ ಹಣವನ್ನು ಮರಳಿ ವಾಪಸ್ ಪಡೆದು ಸರ್ಕಾರದ ಖಜಾನೆಗೆ ಮರಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಜಿಲ್ಲೆಯ ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆಯವರು ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆಯಡಿ,  ಸಕ್ಕರೆ ಕಾರ್ಖಾನೆ ಭೂಸನೂರಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಅಭಿವೃದ್ಧಿ ಮಾಡುವ ಸಲುವಾಗಿ ಆಳಂದ ಮತಕ್ಷೇತ್ರದ ವ್ಯಾಪ್ತಿಯ ದೇಗಾಂವ, ಹಾಳ ತಡಕಲ, ಸನಗುಂದಾ, ಬಸವನ ಸಂಗೋಳಗಿ, ವಳವಂಡವಾಡಿ, ಕಣಮಸ್, ಜಮಗಾ ಆರ್ ಹಾಗೂ ಧಂಗಾಪೂರ ಗ್ರಾಮಗಳಲ್ಲಿ 35 ರಸ್ತೆಗಳ ಸುಧಾರಣೆ ಕಾಮಗಾರಿಗಳನ್ನು ಅಂದಾಜು 1.69,58,500 ರೂ.ಗಳಲ್ಲಿ ಕೈಗೊಂಡಿರುತ್ತಾರೆ. ಒಂದೇ ಗ್ರಾಮದಲ್ಲಿ ಒಂದೇ ಕಾಮಗಾರಿಗೆ ಬೇರೆ ಬೇರೆ ಹೆಸರು ಕೊಟ್ಟು ಮತ್ತು ಒಂದೇ ಗ್ರಾಮದಲ್ಲಿ ಹಲವಾರು ಕಾಮಗಾರಿಗಳನ್ನು ಇಟ್ಟು ಕೆಲಸ ಮಾಡದೇ ಹಣ ಲಪಟಾಯಿಸಿರುತ್ತಾರೆ.

ಧಂಗಾಪೂರ ಗ್ರಾಮದಲ್ಲಿ ಧಂಗಾಪೂರ- ಭೂಸನೂರ ಹಾಗೂ ಧಂಗಾಪೂರ- ಧುತ್ತರಗಾಂವ ಸಂಪರ್ಕ ಕಲ್ಪಿಸುವ ಒಂದೇ ರಸ್ತೆಗೆ ಕಾಮಗಾರಿಗೆ 7-8 ಹೆಸರುಗಳನ್ನು ಕೊಟ್ಟು ಹಣ ಲಪಟಾಯಿಸಿರುತ್ತಾರೆ. ಕೆಲವು ಕಡೆ  ಕೈಗೊಂಡಿರುವ ರಸ್ತೆಗಳು ಗುಣಮಟ್ಟದಿಂದ ಕೂಡಿರುವುದಿಲ್ಲ ಅಲ್ಲದೇ ತೀರಾ ಕಳಪೆ ಮಟ್ಟದಿಂದ ರಸ್ತೆ ನಿರ್ಮಾಣ ಮಾಡಿ ಹಣ ಲೂಟಿ ಮಾಡಿರುವ ಸಾಧ್ಯತೆಯಿದೆ.

ಈ ಕಾಮಗಾರಿಗಳ ಸತ್ಯಾಸತ್ಯತೆ ಪರಿಶೀಲಿಸಲು ಒಂದು ತನಿಖಾ ತಂಡವನ್ನು ನೇಮಿಸಿ ಅದರ ಪರಿಶೀಲನೆ ಮಾಡಬೇಕು. ಸದರಿ ಕಾಮಗಾರಿಗಳನ್ನು ಮಂಜೂರಾತಿ ನೀಡಿ ಅನುಷ್ಠಾನ ಕೈಗೊಂಡಿರುವ ಪಂಚಾಯತ್ ರಾಜ್ ವಿಭಾಗ ಕಲಬುರಗಿ- ಉಪವಿಭಾಗ ಆಳಂದ ಇವರ ಮುಖಾಂತರ ಕಳಪೆ ರಸ್ತೆ ನಿರ್ಮಾಣ ಮಾಡಿರುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಈ ರೀತಿಯಾಗಿ ಎಲ್ಲ ಗ್ರಾಮ ಪಂಚಾಯತಗಳಲ್ಲಿ ನಿಯೋಜಿತವಾಗಿ ಬೃಹತ ಪ್ರಮಾಣದಲ್ಲಿ ಭೃಷ್ಟಾಚಾರ ಎಸೆಗಲಾಗಿದೆ. ಭೃಷ್ಟಾಚಾರ ಎಸಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೇಂದು ಆಗ್ರಹಿಸಿದ್ದಾರೆ ಒಂದು ವೇಳೆ ಕ್ರಮಕೈಗೊಳ್ಳದಿದ್ದರೆ ಜಿ.ಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here