ಸಮನ್ವಯ ಸಾಧಿಸಿದ ಪ್ರತಿಭಾ ಕಾರಂಜಿ

0
25

ಕಲಬುರಗಿ; ಪ್ರತಿಭೆ ಮಕ್ಕಳ ಅಂತರಿಕವಾದ ಚಿಲುಮೆಅದು ಬೆಳಕಾಗಿ ಹೊರಬರಬೇಕು, ಅದು ಬದುಕಿನ ಸಾಂಸ್ಖøತಿಕ ಮೌಲ್ಯ. ಅದಕ್ಕೆ ಮೂಲ ಕಾರಣ ಶಿಕ್ಷಕರು. ಪಠ್ಯ ಭೋದನೆಯೊಂದಿಗೆ ಸುಪ್ತಮನಸಿನಾಳದಲ್ಲಿರುವ ಪ್ರತಿಭೆಯನ್ನು ಹೊರಹಾಕುವುದೇ ಶಿಕ್ಷಣ ಹಾಗೂ ಪ್ರತಿಭಾ ಕಾರಂಜಿ .ಸಾಮನ್ಯ ಮಕ್ಕಳೊಂದಿಗೆ ವಿಶೇಷ ಚೇೀತನ ಮಕ್ಕಳು ಭಾಗವಹಿಸಿರುವುದು ವಿಶೇಷ. ಇದು ಸಮನ್ವಯ ಸಾಧಿಸಿದ ಪ್ರತಿಭಾ ಕಾರಂಜಿ ಎಂದು ಕ್ಷೇತ್ರ ಸಮನ್ವಯಾಧಿಕಾರಿಗಳಾದ ಡಾ. ಪ್ರಕಾಶ ರಾಠೋಡ ಅಭಿಪ್ರಾಯ ವ್ಯಕ್ತಪಡಿಸಿದರು

ತಾಲೂಕಿನ ನಂದೂರ(ಕೆ) ವಲಯದ ವೇದಾÀ ಪಬ್ಲಿಕ್ ಶಾಲೆಯಲ್ಲಿ ನಡೆದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

Contact Your\'s Advertisement; 9902492681

ಕಾರ್ಯಕ್ರಮದ ಉದ್ಘಾಟನೆಯನ್ನು ಕುಪೇಂದ್ರ ಬರಗಾಲಿ ಅಧ್ಯಕ್ಷರು ಗ್ರಾಂ.ಪಂ.ಕುಸನೂರ ರವರು ನೇರವೇರಿಸಿದರು ಅಧ್ಯಕ್ಷತೆಯನ್ನು ವೇದಾÀ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಆರತಿ ಮಲಶೆಟ್ಟಿ ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ. ಗೀತಾ ಪಾಟೀಲ, ಬಾಬು ಮೌರ್ಯ ಜಿಲ್ಲಾ ಕಾರ್ಯದರ್ಶಿಗಳು ಕ,ರಾ,ಪ್ರಾ,ಶಾ,ಶಿ,ಸಂಘ ಈಶ್ವರಗೌಡ ಪಾಟೀಲ, ಅದ್ಯಕ್ಷರು ತಾಲುಕ ಕ,ರಾ,ಪ್ರಾ,ಶಾ,ಶಿ,ಸಂಘ ಕಲಬುರಗಿ, ರವಿ ಮಲಶೆಟ್ಟಿ ಕಾಂiÀರ್iದರ್ಶಿಗಳು ವೇದಾ ಪಬ್ಲಿಕಶಾಲೆ, ಸಂತೋಷ ಗಂಗೂ,ಸಹ ಕಾರ್ಯದರ್ಶಿತಾಲುಕ ಕ,ರಾ,ಪ್ರಾ,ಶಾ,ಶಿ,ಸಂಘ .ಶಿಕ್ಷಣ ಸಂಯೋಜಕರಾದ ಶರಣಬಸಪ್ಪಾ, ಸುಧಾಕರ, ಸಮನ್ವಯ ಶಿಕ್ಷಣ ಸಂಪನ್ಮೂಲ ವ್ಯೇಕ್ತಿಗಳಾದ ಸಿದ್ರಾಮ ರಾಜಮಾನೆ, ವಹಿಸಿದ್ದರು.

ಪ್ರಾಸ್ತಾವಿಕವಾಗಿ ಈರಮ್ಮಾ ಸುತಾರ ಸಿ,ಆರ,ಪಿ ರವರು ಮಾತನಾಡಿದರು. ಮುರಳೀಧರ ಟೋಣಪೆ ಕಾರ್ಯಕ್ರಮ ನಿರ್ವಹಿಸಿ,ಎಲ್ಲರನ್ನು ಸ್ವಾಗತಿಸಿದರು.

ಸೋಮಶೇಖರ ಮಠ ರವರು ವಂದನಾರ್ಪಣೆ ಮಾಡಿದರು.ನಂತರ ಪ್ರತಿಭಾ ಕಾರಂಜಿಯ ವಿವಿಧ ಸ್ಪರ್ದೆಯಲ್ಲಿ ವಲಯದಲ್ಲಿನ ಶಾಲಾ ಮಕ್ಕಳು,ಹಾಗೂ ವಿಶೇಷ ನ್ಯೂನತೆಯುಳ್ಳ ಮಕ್ಕಳು ಭಾಗವಹಿಸಿದ್ದು ವಿಶೇಷವಾಗಿತ್ತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here