ಉಚಿತ ಆರೋಗ್ಯ ತಪಾಸಣಾ ಶಿಬಿರ

0
74

ಕಲಬುರಗಿ: ನಗರದ ಸರ್ಕಾರಿ ಮಹಾವಿದ್ಯಾಲಯ ಸ್ವಾಯತ್ತ ರೆಡ್ ಕ್ರಾಸ್ ಘಟಕದ ವತಿಯಿಂದ ಕುಸನೂರ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಉದ್ಘಾಟಕರಾಗಿ ಸರ್ಕಾರಿ ಮಹಾ ವಿದ್ಯಾಲಯದ ಪ್ರಾಂಶುಪಾಲರಾದ ಡಾ. ಸವಿತಾ ತಿವಾರಿ , ಅದ್ಯಕ್ಷತೆಯನ್ನು ಕುಸುನೂರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕುಪೇಂದ್ರ ಬರಗಲಿ ವಹಿಸಿದ್ದರು.

Contact Your\'s Advertisement; 9902492681

ಕಾಲೇಜಿನ ಯುಜಿ ವಿಭಾಗದ ಡೀನರು, ಪ್ರಾಣಿಶಾಸ್ತ್ರ ವಿಭಾಗದ ಉಪನ್ಯಾಸಕರಾದ ಡಾ ಮೀನಾಕ್ಷಿ, ಡಾ. ಅಶೋಕ್, ಡಾ. ಶರಣು ಪಡಶೆಟ್ಟಿ , ಮಧು, ರೆಡ್ ಕ್ರಾಸ್ ಘಟಕದ ಸಂಚಾಲಕರಾದ ಪ್ರೊ.ದಿನೇಶ್ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರದ ಅತಿಥಿಗಳಾಗಿ ನೇತ್ರಾಧಿಕಾರಿಗಳಾದ ಸಿರಾಜ್ ದಸ್ತಗಿರ,ಜಹೀರ್ ಖಾನ್ ಗ್ರಾಮದ ನಿವಾಸಿಗಳಿಗೆ ,ಹಿರಿಯರಿಗೆ ,ವಿದ್ಯಾರ್ಥಿಗಳಿಗೆ ತಪಾಸಣೆ ಮಾಡಿ ಸಲಹೆ ನೀಡಿದರು .

ವೈದ್ಯಾಧಿಕಾರಿಗಳಾದ ಡಾ. ಶ್ವೇತಾ ರಾಜಗಿರಿ, ಡಾ. ದೀಪ ರಾಥೋಡ್ ,ಡಾ. ಆರಾಧನಾ ರಾಥೋಡ್, ಡಾ. ಸಂಧ್ಯಾ ಕಾನೇಕರ್ ಬಾಯಿ ಮತ್ತು ಹಲ್ಲಿನ ಆರೋಗ್ಯದ ತಪಾಸಣೆ ಮಾಡಿ ಮುನ್ನೆಚ್ಚರಿಕೆ ಕ್ರಮಗಳನ್ನು ಮತ್ತು ನಿರ್ವಹಣೆಯ ಕುರಿತು ಗ್ರಾಮಸ್ಥರಿಗೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರು, ಊರಿನ ಹಿರಿಯರು, ಯುವಕರು, ಪ್ರಾಣಿಶಾಸ್ತ್ರ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ. ಮೀನಾಕ್ಷಿ ನಿರೂಪಿಸಿ, ವಿದ್ಯಾರ್ಥಿಯಾದ ನಂದಕುಮಾರ್ ವಂದಿಸಿದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here