ದೇವತ್ಕಲ್ (ಕೋನಾಳ) ನೂತನ ವಿದ್ಯುತ್ ಉಪ ಕೇಂದ್ರದ ಉದ್ಘಾಟನೆ 

0
28

ಸುರಪುರ: ಇಲ್ಲಿಯ ಜನರ ವಿದ್ಯುತ್ ಸಮಸ್ಯೆಯನ್ನು ಅರಿತು ಸರಕಾರ 33/11 ಕೆ.ವಿ.ಯ ವಿದ್ಯುತ್ ಉಪ ಕೇಂದ್ರ ನಿರ್ಮಿಸಲಾಗಿದ್ದು,ಈ ಭಾಗದ ಜನರು ಇದರ ಸದುಯೋಗ ಮಾಡಿಕೊಳ್ಳ ಬೇಕು ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ತಿಳಿಸಿದರು.

ತಾಲೂಕಿನ ದೇವತ್ಕಲ್ (ಕೋನಾಳ) ಬಳಿಯಲ್ಲಿ ನೂತನವಾಗಿ ಜೆಸ್ಕಾಂ ಇಲಾಖೆ ನಿರ್ಮಿಸಿರುವ ನೂತನ ವಿದ್ಯುತ್ ಉಪ ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡಿ,ಮೂಲಭೂತ ಅಗತ್ಯಗಳಲ್ಲಿ ವಿದ್ಯುತ್ ಕೂಡ ಮುಖ್ಯವಾಗಿದ್ದು,ಇದರ ಅಡಿಯಲ್ಲಿನ ಸುಮಾರು 10 ಗ್ರಾಮಗಳ ಜನತೆಗೆ,ಮುಖ್ಯವಾಗಿ ರೈತರಿಗೆ ಆಗುತ್ತಿದ್ದ ವಿದ್ಯುತ್ ಸಮಸ್ಯೆ ನಿವಾರಿಸಲು ಸುಮಾರು 7 ಕೋಟಿ ರೂಪಾಯಿಗಳ ವೆಚ್ಚದಲ್ಲಿ ವಿದ್ಯುತ್ ಉಪ ಕೇಂದ್ರದ ನಿರ್ಮಿಸಲಾಗಿದ್ದು,ಜನರು ಅಧಿಕಾರಿಗಳಿಗೆ ಸಹಕಾರ ನೀಡುವ ಮೂಲಕ ಕೇಂದ್ರದ ಉಪಯೋಗ ಮಾಡಿಕೊಳ್ಳಿ ಹಾಗೂ ಅಧಿಕಾರಿಗಳಿಗಾಗಲಿ ಸಾರ್ವಜನಿಕರಿಗಾಗಲಿ ಏನೇ ಸಮಸ್ಯೆ ಇದ್ದಲ್ಲಿ ನಮ್ಮ ಗಮನಕ್ಕೆ ತನ್ನಿ,ಪರಿಹರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಜೆಸ್ಕಾಂ ಕಲಬುರ್ಗಿ ಅಧಿಕ್ಷಕ ಎಮ್.ಎಮ್.ಕಿತ್ತೂರ,ಕಲಬುರ್ಗಿ ಅಧಿಕ್ಷಕ ವೃತ್ತ ಅಭಿಯಂತರ ಖಂಡಪ್ಪ ಸೋನೆವಾಣೆ ಮಾತನಾಡಿ,ಸುಮಾರು 6.60 ಕೋಟಿ ರೂಪಾಯಿಗಳಲ್ಲಿ ವಿದ್ಯುತ್ ಉಪ ಕೇಂದ್ರವನ್ನು ಬೆಳಗಾವಿಯ ಸುಧಾ ಎಲೆಕ್ಟ್ರೀಕಲ್ ಅವರು ಆಧುನಿಕ ತಂತ್ರಜ್ಞಾನದ ಉಪ ಕರಣಗಳ ಅಳವಡಿಸಿ ನಿರ್ಮಾಣಗೊಳಿಸಿದ್ದಾರೆ.ಇದರ ನಿರ್ಮಾಣಕ್ಕೂ ಮುನ್ನ ಭೂಪಾಲ್‍ಗೆ ಹೋಗಿ ಅಲ್ಲಿಯೇ ಈ ಎಲ್ಲಾ ವಿದ್ಯುತ್ ಟ್ರಾನ್ಸ್‍ಫಾರ್ಮರ್ ಪರೀಕ್ಷಿಸಿ ತರಲಾಗಿದೆ ಎಂದರು.ಅಲ್ಲದೆ ವಿದ್ಯುತ್ ತುಂಬಾ ಮುಖ್ಯವಾದುದಾಗಿದೆ,ಆದ್ದರಿಂದ ಯಾರು ಕೂಡ ವಿದ್ಯುತ್ ವ್ಯರ್ಥ ಮಾಡಬೇಡಿ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಉಪ ಕೇಂದ್ರದ ನಿರ್ಮಾಣಕ್ಕೆ ಭೂ ದಾನಿಗಳಾದ ಶಾಂತಗೌಡ ಆರ್.ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ರಾಜಶೇಖರಗೌಡ ವಜ್ಜಲ್,ದೇವತ್ಕಲ್ ಗ್ರಾ.ಪಂ ಅಧ್ಯಕ್ಷೆ ದೇವಕ್ಕೆಮ್ಮ ಹಣಮಂತ್ರಾಯ ಡೊಣ್ಣಿಗೇರ,ಉಪಾಧ್ಯಕ್ಷ ತಿರುಪತಿಗೌಡ,ಸುರಪುರ ನಯೋಪ್ರಾ ಅಧ್ಯಕ್ಷ ಪ್ರಕಾಶ ಗುತ್ತೇದಾರ,ತಾ.ಪಂ ಇಒ ಬಸವರಾಜ ಸಜ್ಜನ್,ಹೋಯೆಂಡಮ್ ಅಧಿಕಾರಿ ಎ.ಹೆಚ್.ಮಮ್ತಾಜ್,ನಿವೃತ್ತ ತಾಂತ್ರಕ ನಿರ್ದೇಶಕ ಕಲಬುರ್ಗಿ ವೇದಿಕೆಯಲ್ಲಿದ್ದರು.ಸುರಪುರ ಜೆಸ್ಕಾಂ ಉಪ ವಿಭಾಗದ ಅಧಿಕಾರಿ ರಾಜಶೇಖರ ಬಿರಾಳ ಸ್ವಾಗತಿಸಿ ಮಾತನಾಡಿದರು.

ಎಇಇ ರಫಿಕ್,ಹುಣಸಗಿ ಎಇಇ ಕಳಕಪ್ಪ,ಎಇಇ ಅಂಬ್ರೇಶ ಸ್ವಾಗತಿಸಿದರು.ಶ್ರೀಶೈಲ್ ತಮದೊಡ್ಡಿ ವಂದಿಸಿದರು.ವೆಂಕೋಬ ಯಾದವ್,ಮಲ್ಲಣ್ಣ ಸಾಹುಕಾರ ಮುಧೋಳ,ಸೂಗುರೇಶ ವಾರದ್,ಭೀಮರಾಯ ಮೂಲಿಮನಿ,ಚಂದ್ರಶೇಖರ ದಂಡಿನ್ ಸೇರಿದಂತೆ ದೇವತ್ಕಲ್,ಕೋನಾಳ ಗ್ರಾಮಗಳ ನೂರಾರು ಜನರು ಭಾಗವಹಿಸಿದ್ದರು.

ನಮ್ಮ ತಂದೆ ರಾಜಾ ವೆಂಕಟಪ್ಪ ನಾಯಕ ಅವರ ಸ್ಮರಣೆಯಲ್ಲಿ ಅವರಿಗಿಂತ ಹೆಚ್ಚಿನ ಅಭಿವೃದ್ಧಿ ಮಾಡುವ ಕನಸು ಇದೆ ಎಲ್ಲರು ಅವರಿಗೆ ನೀಡಿದಂತೆ ನನಗೂ ಕೆಲಸ ಮಾಡಲು ಸಹಕಾರ ನೀಡುವಂತೆ ಮನವಿ ಮಾಡುವೆ- ರಾಜಾ ವೇಣುಗೋಪಾಲ ನಾಯಕ ಶಾಸಕ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here