ಕೆಪಿಎಸ್ ಶಾಲೆ ನೂತನ ಕಟ್ಟಡದ ಕಿಟಕಿ ಗಾಜು ಹೊಡೆದ ಕಿಡಿಗೇಡಿಗಳು

0
78

ಸುರಪುರ: ನಗರದ ರಂಗಂಪೇಟೆಯ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಕಟ್ಟಡದ ಕಿಟಕಿಗಳ ಗಾಜುಗಳನ್ನು ಕಿಡಿಗೇಡಿಗಳು ಹೊಡೆದು ಹಾಕಿದ್ದು ಮಕ್ಕಳು ಹಾಗೂ ಪೋಷಕರಲ್ಲಿ ಭಯ ಮೂಡಿಸಿದೆ.ಹೊಸದಾದ ಶಾಲಾ ಕಟ್ಟಡದ ಕಿಟಕಿಗಳಿಗೆ ಗಾಜುಗಳನ್ನು ಅಳವಡಿಸಿದ್ದು ಎರಡು ದಿನಗಳ ಕಾಲ ಶಾಲೆ ರಜೆ ಇದ್ದಾಗ ಯಾರೋ ಕಿಡಿಗೇಡಿಗಳು ಇಂತಹ ಕೃತ್ಯ ಎಸಗಿರಬಹುದು ಎನ್ನಲಾಗಿದೆ.

ಸುಮಾರು 7 ಕಿಟಕಿಗಳ ಗಾಜುಗಳು ಧ್ವಂಸಗೊಳಿಸಲಾಗಿದೆ,ಸೋಮವಾರ ಬೆಳಿಗ್ಗೆ ಶಾಲಾ ಕೋಣೆಗಳನ್ನು ತೆಗೆದಾಗ ಒಳಗಡೆ ಗಾಜುಗಳು ಬಿದ್ದಿದ್ದರಿಂದ ಮಕ್ಕಳು ಭಯಗೊಂಡಿದ್ದಾರೆ.ಕಿಡಿಗೇಡಿಗಳು ಮತ್ತೆ ಕಲ್ಲು ಬೀಸಿದರೆ ಮಕ್ಕಳಿಗೆ ತಾಗಿದರೆ ಗತಿ ಏನು ಎನ್ನುವ ಆತಂಕವೂ ಪೋಷಕರಿಗೆ ಕಾಡಲಾರಂಭಿಸಿದೆ.

Contact Your\'s Advertisement; 9902492681

ಪೊಲೀಸ್ ಇಲಾಖೆ ಕೆಪಿಎಸ್ ಶಾಲೆ ಕಡೆಗೆ ಬೀಟ್ ಪೊಲೀಸರನ್ನು ನಿಯೋಜಿಸಿ ಮತ್ತೆ ಇಂತಹ ಘಟನೆ ನಡೆಯದಂತೆ ಕ್ರಮ ಕೈಗೊಳ್ಳುವ ಜೊತೆಗೆ ಈಗ ಗಾಜುಗಳನ್ನು ಧ್ವಂಸ ಮಾಡಿದವರನ್ನು ಪತ್ತೆ ಮಾಡಿ ಶಿಕ್ಷೆ ನೀಡಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here