ಕಲಬುರಗಿ, ಕಳೆದ ಹತ್ತು ವರ್ಷಗಳ ನಂತರ ಕಲಬುರಗಿಯಲ್ಲಿ ಪ್ರಥಮ ಬಾರಿಗೆ ಇಂದು ಸೆಪ್ಟಂಬರ್ 17ರಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ ಎಂದು ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಡಾ. ಅಜಯಸಿಂಗ್ ಅವರು ಹೇಳಿದ್ದಾರೆ.
ಅವರು ಸೋಮವಾರ ತಮ್ಮ ಕೆಕೆಆರ್‌ಡಿಬಿ ಕಛೇರಿಯಲ್ಲಿ ಸುದ್ದೀಗೋಷ್ಠಯಲ್ಲಿ ಮಾತನಾಡುತ್ತ, ಈ ಹಿಂದೆ ಅಂದರೆ 2014ರಲ್ಲಿ ಸಿದ್ಧರಾಮಯ್ಯ ಅವರೇ ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಸಚಿವ ಸಂಪುಟ ನಡೆದಿತ್ತು, ಅಲ್ಲದೇ ಈ ಮಾಜಿ ಮುಖ್ಯಮಂತ್ರಿ ದಿ. ಧರ್ಮಸಿಂಗ್ ಅವರ ಕಮೀಟಿ ವರದಿಯ ನಂತರ ಕಲಬುರಗಿಯಲ್ಲಿ 1982ರಲ್ಲಿ ಸಚಿವ ಸಂಪುಟ ಸಭೆ ನಡೆದಿತ್ತು ಎಂದರು.
ಪ್ರಥಮ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಕೆಆರ್‌ಡಿಗೆ 5000 ಕೋಟಿ ರೂ. ಗಳ ಅನುದಾನ ಬಿಡುಗಡೆ ಮಾಡಿದ್ದು, ಇದರಲ್ಲಿ ಪ್ರಮಥ ಬಾರಿಗೆ ವಿವಿಧ ಇಲಾಖೆಯ ಹಲವಾರು ಕಾಮಗಾರಿಗಳಿಗಾಗಿ 3000 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದರು.
ಈ ಮೊದಲು ಕೆಕೆಆರ್‌ಡಿಬಿಯು 3000 ಕೋಟ ರೂ. ಖರ್ಚು ಮಾಡದಿರುವ ಬಗ್ಗೆ ಇದ್ದ ಅಪಸ್ವರವನ್ನು ನಮ್ಮ ಸರಕಾರದ ಹಾಗೂ ನನ್ನ ಅವಧಿಯಲ್ಲಿ ಅದನ್ನು ಅಳಿಸಿಹಾಕಲಾಗಿದೆ ಎಂದರು.
ರಾಜ್ಯದ ರಾಜ್ಯಪಾಲರು ಕೂಡ ಐದು ಸಾವಿರ ಕೋಟಿ ರೂ.ಗಳ ಅನುದಾನಕ್ಕೆ ಆಗಸ್ಟ 14ರಂದು ಅನುಮೋದನೆ ಕೂಡ ನೀಡಿದ್ದಾರೆ. ಈ ಸಂದರ್ಭದಲ್ಲಿ ಘಭವೆತ್ತ ರಾಜ್ಯಪಾಲರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಅಜಯಸಿಂಗ್ ಅವರು ಈಗಾಗಲೇ ಈ ಪ್ರದೇಶದ ಶಾಸಕರುಗಳು ತಮ್ಮ ಕ್ಷೇತ್ರದಲ್ಲಿನ ಅಭಿವೃದ್ಧಿಗಾಗಿ ಮಂಡಳಿಯಿAದ 3200 ಕೋಟಿ ರೂ. ಗಳ ಕ್ರಿಯಾ ಯೋಜನೆ ಸಲ್ಲಿಸಿದ್ದಾರೆ. ಅಲ್ಲದೇ ಇನ್ನುಳಿದ 1800 ಕೋಟಿ ರೂ.ಗಳನ್ನು ವಿವಿಧ ಅಭವೃದ್ಧಿ ಕಾಮಗಾರಿಗಳಿಗಾಗಿ ಕ್ರೀಯಾಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದರು.
ಎಸ್ಸಿಎಸ್ಟಿ, ಅಲ್ಪಸಂಖ್ಯಾತರ, ಹಿಂದುಳಿದವರ ಕಲ್ಯಾಣಕ್ಕಾಗಿ ಮಂಡಳಿ ಸುಮಾರು 150 ಕೋಟಿ ರೂ. ಖರ್ಚು ಮಾಡಲಿದ್ದು, ಜಿಲ್ಲೆಯಲ್ಲಿ ಜಲ ಸಂಪನ್ನೂಲ ಅಭಿವೃದ್ದಿ ಪಡಿಸಲು ಸಣ್ಣ ನೀರಾವತಿ ಇಲಾಖೆ ಸಹಯೋಗದೊಂದಿಗೆ ಕೆಕೆಆರ್‌ಡಿಬಿ ಚೆಕ್ ಡ್ಯಾಮ್ ನಿರ್ಮಿಸಲು ಕ್ರೀಯಾ ಯೋಜನೆ ಸಿದ್ದಪಡಿಸಲು ಈಗಾಗಲೇ ಜಲಸಂಪನ್ಮೂಲ ಸಚಿವರೊಂದಿಗೆ ಮಾತುಕತೆ ನಡೆಸಿರುವುದಾಗಿ ಅಜಯಸಿಂಗ್ ಹೇಳಿದರು.
ಕಲ್ಯಾಣ ಕರ್ನಾಟಕದ 16 ತಾಲೂಕುಗಳಲ್ಲಿ ಕಾರ್ಯನಿರ್ವಹಿಸಲು ಸುಸಜ್ಜಿತ ವಿಧಾನಸೌಧ ನಿರ್ಮಾಣಕ್ಕಾಗಿ ಅನುಮೋದನೆಯನ್ನು ನಾಳೆ ಮಂಗಳವಾರ ನಡೆಯಲಿರುವ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಲಿದೆ ಎಂದರು.
ನಾಳಿನ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸೇರಿದಂತೆ ಸಂಪುಟದ ಎಲ್ಲ ಸಚಿವರು ಆಗಮಿಸಲಿದ್ದಾರೆ ಎಂದರು.
ನಾಳೆ ಕೆಕೆಆರ್‌ಡಿಬಿಯ ಹಲವಾರು ಯೋಜನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಡಿಗಲ್ಲು ಹಾಕಲಿದ್ದಾರೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ಮಂಡಳಿಯ ಕಾರ್ಯದರ್ಶಿ ಉಪಸ್ಥಿತರಿದ್ದರು.