ಕಲಬುರಗಿ: ಭಾರತೀಯ ಮಜ್ದೂರ್ ಸಂಘ ಜಿಲ್ಲಾ ಘಟಕದ ವತಿಯಿಂದ employees pension scheme (EPS) 1995 ಅನ್ವಯ ಕಾರ್ಮಿಕರಿಗೆ ನೀಡುತ್ತಿರುವ ಕನಿಷ್ಠ ಪಿಂಚಣಿ ಮೊತ್ತವನ್ನು ಒಂದು ಸಾವಿರದಿಂದ 5 ಸಾವಿರದ ವರೆಗೆ ಹೆಚ್ಚಳ ಮಾಡುವಂತೆ ಹಾಗೂ ಪಿಂಚಣಿಯಲ್ಲಿ ತುಟ್ಟಿಭತ್ಯ ಯನ್ನು ಸೇರಿಸಿ ನೀಡಲು ಮತ್ತು ಇದೆ ಪಿಂಚಣಿ ಸೌಲಭ್ಯ ದಲ್ಲಿ ಆಯುಷ್ ಮಾನ ಭಾರತ್ ಯೋಜನೆಯ ಆರೋಗ್ಯ ಸೌಲಭ್ಯವನ್ನು ನೀಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಇ. ಪಿ.ಎಫ್ ಕಚೇರಿಯ ಮುಂದೆ ಒಂದು ದಿನದ ಸಾಂಕೇತಿಕ ಪ್ರತಿಭಟನೆಯನ್ನು ಮಾಡಿ ಜಿಲ್ಲಾಧಿಕಾರಿಗಳು ಕಲಬುರಗಿ ಹಾಗೂ ವಲಯ ಆಯುಕ್ತರು ಇ. ಪಿ.ಎಫ್ ಮುಖಾಂತರ ಪ್ರಧಾನಿ ನರೇಂದ್ರ ಮೋದಿ ಇವರಿಗೆ ಮನವಿ ಸಲ್ಲಿಸಲಾಯಿತು.
ಇದೆ ಸಂಧರ್ಭದಲ್ಲಿ ಭಾರತೀಯ ಮಜ್ದೂರ ಸಂಘದ ಕಲಬುರಗಿ ಜಿಲ್ಲೆಯ ಜಿಲ್ಲಾಧ್ಯಕ್ಷ ಶ್ರೀಕಾಂತ್ ಸ್ವಾಮಿ, ನಿಕಟ ಪೂರ್ವ ರಾಜ್ಯಾಧ್ಯಕ್ಷ ಶಂಕರ ಸುಲೆಗಾವ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸೂವಣ್ಣ ಅವಂತಿ, ಮಳಖೇಡ್ ಅಲ್ಟ್ರಾಟೆಕ್ ಗುತ್ತಿಗೆ ನೌಕರರ ಸಂಘ ಅಧ್ಯಕ್ಷ ಮರೆಪ್ಪ ಪೂಜಾರಿ, ರೇಶ್ಮಾ ನಕ್ಕುಂಡಿ, ಶರಣಬಸಪ್ಪ ಸಜ್ಜನ್, ಪ್ರಭು ಮಾಗಿ,ಸುಧಾ, ಸಂಗಮ್ಮ , ಜಗನ್ನಾಥ್ ಇದ್ದರು.