ಅಂತರಾಷ್ಟ್ರೀಯ ಹೃದಯ ದಿನಾಚಾರಣೆ

0
37

ಕಲಬುರಗಿ: ಕೆಕೆಸಿಸಿಐ ಸಭಾಗಂಣದಲ್ಲಿ ರೋಟರಿ ಕ್ಲಬ್ ಆಫ್ ಗುಲಬರ್ಗಾ ಸಖಿ ಹಾಗೂ ಕೆಕೆಸಿಸಿಐ ಸಂಯುಕ್ತಾಶ್ರಯದಲ್ಲಿ ಅಂತರರಾಷ್ಟ್ರೀಯ ಹೃದಯ ದಿನಾಚಾರಣೆ ಆಚರಿಸಲಾಯಿತು.

ಡಾ. ಗೌತಮ್ ಯಳಸಂಗಿಕರ್ ಮಾತನಾಡಿ ಒಬ್ಬರಿಗೆ ಹೃದಯಾಘಾತ ಏಕೆ ಬರುತ್ತದೆ, ಆರೋಗ್ಯವಾಗಿರಲು ನಾವು ಯಾವ ಮುನ್ನೆಚ್ಚರಿಕೆ ವಹಿಸಬೇಕು, ಹೃದಯ ಸಮಸ್ಯೆ ಬಂದರೆ ಏನು ಮಾಡಬೇಕು ಇತ್ಯಾದಿ ವಿವರಗಳನ್ನು ತಿಳಿಸಿದರು. ನಂತರ ಸುಮಾರು 100 ಜನರಿಗೆ ಉತ್ತಮ ಶೈಕ್ಷಣಿಕ ಉಪನ್ಯಾಸವನ್ನು ನೀಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಕೆಕೆಸಿಸಿಐ ಅಧ್ಯಕ್ಷ ಶಶಿಕಾಂತ ಪಾಟೀಲ, ರೋಟರಿ ಸಖಿ ಕ್ಲಬ್ ಅಧ್ಯಕ್ಷೆ ರೋಹಿಣಿ ಯಳಸಂಗಿಕರ್, ಕೆಕೆಸಿಸಿಐ ಕಾರ್ಯದರ್ಶಿ ಮಂಜುನಾಥ ಜೇವರ್ಗಿ, ಕೆಕೆಸಿಸಿಐ ಮಾಜಿ ಅಧ್ಯಕ್ಷ ಪ್ರಶಾಂತ್ ಮಾನಕರ್, ಆರೋಗ್ಯ ಉಪ ಸಮಿತಿ ಅಧ್ಯಕ್ಷ ಸಯ್ಯದ್ ಮೊಜಾಮ್ ಅಲಿ, ರೋಟರಿ ಕ್ಲಬ್ ಆಫ್ ಗುಲಬರ್ಗಾ ಸಖಿ ಕಾರ್ಯದರ್ಶಿ ಲತಾ ದೇಶಪಾಂಡೆ, ಎಂಒಸಿ ಆರ್ಟಿಎನ್ ಶ್ವೇತಾ ಮಾನಕರ್, ಮೋಹಿನಿ ಜಿಡಗೇಕರ್, ರೇಣುಕಾ ರಾಠೋಡ, ಇಂದಿರಾ ರಾಠೋಡ, ಪದ್ಮಾ ಶ್ರೀನಿವಾಸ್ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here