ಮೂರು ಹ್ಯಾಂಡ್ ಬಾಲ್ ಕ್ರೀಡಾಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

0
35

ಕಲಬುರಗಿ: ತೆಲಂಗಣ ರಾಜ್ಯದ ಸಿಕಂದರಾಬಾದ್‍ನಲ್ಲಿ 38ನೇ ಹೆಚ್ ಎಫ್ ಐ ಸಬ್ ಜೂನಿಯರ್ ಬಾಯ್ಸ್ ಚಾಂಪಿಯನ ಶಿಫ್‍ಗೆ ಕರ್ನಾಟಕ ರಾಜ್ಯದ ತಂಡವನ್ನು ಪ್ರತಿನಿಧಿಸುತ್ತಿರುವ ಜಿಲ್ಲೆ ಮೂರು ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ರಾಜ್ಯ ತಂಡದ ಆಯ್ಕೆ ಟ್ರಯಾಲ್ಸ್‍ನಲ್ಲಿ ಮೂರು ಹ್ಯಾಂಡ್ ಬಾಲ್ ಕ್ರೀಡಾಪಟುಗಳು ಆಯ್ಕೆಯಾಗಿದ್ದು ಈ ಮೂರು ಕ್ರೀಡಾಪಟುಗಳು 3-10-2018 ರಿಂದ 7-10-2024 ರವರೆಗೂ ತೆಲಂಗಾಣ ರಾಜ್ಯದ ಸಿಕಂದ್ರಾಬಾದ್‍ನಲ್ಲಿ ನಡೆಯಲಿರುವ 38ನೇ ಹೆಚ್ ಎಫ್ ಐ ಸಬ್ ಜೂನಿಯರ್ ಬಾಯ್ಸ್ ನ್ಯಾಷನಲ್ ಚಾಂಪಿಯನ್ ಶಿಫ್ 2024 ಗೆ ಜಿಲ್ಲೆಯ ಮೂರು ಹ್ಯಾಂಡ್ ಬಾಲ್ ಕ್ರೀಡಾಪಟುಗಳು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ.

Contact Your\'s Advertisement; 9902492681

ಕ್ರೀಡಾಪಟುಗಳು ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದಲ್ಲಿ ತರಬೇತಿಯನ್ನು ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆ ಆಗಿರುವುದಕ್ಕೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಸುರೇಶಕುಮಾರ್, ಜಿಲ್ಲಾ ಹ್ಯಾಂಡ್ ಬಾಲ್ ಅಸೋಸಿಯೇಷನ್ ಅಧ್ಯಕ್ಷ ಈರಣ್ಣ ಪಾಟೀಲ್ ಝಳಕಿ, ಹಾಕಿ ತರಬೇತಿದಾರರಾದ ಸಂಜಯ್ ಬಾಣದ, ಪ್ರವೀಣ್ ಪುಣೆ, ಜಿಲ್ಲಾ ಹ್ಯಾಂಡ್ ಬಾಲ್ ಅಸೋಸಿಯೇಷನ್ ಕಾರ್ಯದರ್ಶಿಯಾದ ದತ್ತಾತ್ರೇಯ ಜೇವರ್ಗಿ ಇವರು ಮಕ್ಕಳ ಈ ಸಾಧನೆಗೆ ಶುಭ ಕೋರಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here