ದಲಿತರ ಮನೆ ಹೊಕ್ಕು ಹೊಡಿತಿವಿ: ಜೇವರ್ಗಿ ಕಾಂಗ್ರೆಸ್ ತಾಪಂ ಸದಸ್ಶನ ವಿಡಿಯೋ ವೈರಲ್

2
35035
  • ಡಾ.ಅಶೋಕ ದೊಡ್ಮನಿˌ ಹಂಗರಗಾ(ಕೆ)

ಕಲಬುರಗಿ/ಜೇವರ್ಗಿ: ಬಸವಣ್ಣನವರ ಕಾಲಕ್ಕೆ ಹೇಗೆ ಕಲ್ಶಾಣ ಕ್ರಾಂತಿ ಮಾಡಿ ಮನೆಯಲ್ಲಿದ್ದವರಿಗೆ ಎಬ್ಬಿಸಿಕೊಂಡು ಬಂದು ಹೊಡೆದ್ರೋˌ ಹಾಗೆಯೇ ತಾಲೂಕಿನಲ್ಲಿರುವ ಪ್ರತಿಯೊಂದು ಹಳ್ಳಿಗಳ ದಲಿತರಿಗೆ ಮನೆ ಹೊಕ್ಕು ಹೊಡಿತೀವಿ ಎಂದು ಕುರಳಗೇರ ತಾಲೂಕ ಪಂಚಾಯತ ಕಾಂಗ್ರೆಸ್ ಸದಸ್ಶ ಹಾಗೂ ಶಾಸಕ ಡಾ.ಅಜಯಸಿಂಗ್ ಅವರ ಆಪ್ತ ಮಲ್ಲನಗೌಡ ಪಾಟೀಲ್ ಅವರು ಮಾತನ್ನಾಡಿದ ಭಾಷಣದ ವಿಡಿಯೋ ವೈರಲ್ ಆಗಿದೆ. ಜೇವರ್ಗಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಅವರು ಈ ರೀತಿಯ ಪ್ರಚೋದನಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ನಾನು ಯಾರಿಗೂ ಅಂಜಿ ಮಾತಾಡಲ್ಲ. ನಾವು ಅಲಗರ್ಜಿಯೂ ಇಲ್ಲ. ನಮ್ಮ ಜೊತೆ ಸಹಬಾಳ್ವೆ ನಡೆಸಿದರೆ ಸರಿˌ ಇಲ್ಲಾಂದ್ರೆ ತಾಲೂಕಿನ ಪ್ರತಿ ಹಳ್ಳಿಯಲ್ಲಿನ ದಲಿತರು ತಮ್ಮ ಒಲೆ ಉರಿಸಲು ನಾವು ಬಿಡಲ್ಲ. ಸಣ್ಣ ಜಾತಿಯ ಬಗ್ಗೆ ಮಾತಾಡಿ ಅವರನ್ನು ಬೆಳೆಸುವುದು ಅವಶ್ಯಕತೆ ನಮಗೆ ಇಲ್ಲ ಎಂದಿದ್ದಾರೆ.

Contact Your\'s Advertisement; 9902492681

ಇದು ತಾಲೂಕಿನ ದಲಿತ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ. ಕುರಳಗೇರಾ ಗ್ರಾಮದಲ್ಲಿ ದಲಿತರು ಮತ್ತು ಸವರ್ಣಿಯರಿಗೆ ಜಗಳವಾಗಿ ಗ್ರಾಮದಲ್ಲಿ ಬಿಗುವಿನ ವಾತಾವರಣವಿದೆ. ಪರಿಸ್ಥಿತಿ ಬೂದಿಮುಚ್ಚಿದ ಕೆಂಡಂದಂತಿದೆ. ಇಂತಹ ಸ್ಥಿತಿಯಲ್ಲಿ ಒಬ್ಬ ಜನಪ್ರತಿನಿಧಿಯಾಗಿ ಈ ರೀತಿ ಸಾರ್ವಜನಿಕವಾಗಿ ಮಾತನಾಡಿದ್ದುˌ ಪ್ರಕರಣಕ್ಕೆ ಇನ್ನಷ್ಟು ಪ್ರಚೋಧನೆ ನೀಡಿದಂತಾಗಿದೆ.


ದಲಿತರ ಖಂಡನೆ: ಒಬ್ಬ ಜನಪ್ರತಿನಿಧಿಯಾಗಿ ಈ ರೀತಿ ಹೇಳಿಕೆ ನೀಡಿದ ತಾಪಂ ಕಾಂಗ್ರೆಸ್ ಸದಸ್ಶ ಮಲ್ಲನಗೌಡ ಪಾಟೀಲ್ ಕುರಳಗೇರ ಅವರನ್ನು ಬಂಧಿಸಬೇಕು. ಅವರ ಮೇಲೆ ದಲಿತ ದೌರ್ಜನ್ಶ ಕೇಸ್ ದಾಖಲಿಸಬೇಕು. ತಕ್ಷಣ ದಲಿತರ ಕ್ಷೇಮೆ ಕೇಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು ಎಂದು ತಾಲೂಕಿನ ದಲಿತ ಸಂಘಟನೆಗಳ ಮುಖಂಡರು ಎಚ್ಚರಿಸಿದ್ದಾರೆ.

2 ಕಾಮೆಂಟ್ಗಳನ್ನು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here