ಕಲಬುರಗಿ: ಬಿಸಿಲನಗರಿ ಖ್ಯಾತಿಯ ಕಲಬುರಗಿ ಜಿಲ್ಲೆಯಲ್ಲಿ ಇಂದು 28 ಕೊರಾನಾ ಪಾಸಿಟವ್ ಪ್ರಕರಣ ಕಾಣಿಸಿಕೊಂಡ ಹಿನ್ನಲೆಯಲ್ಲಿ ಜಿಲ್ಲೆಯ ಜನ ಬೆಚ್ಚಿ ಬೀಳುವಂತಾಗಿದೆ. ಕಳೆದ 21ರಿಂದ 44ರಿಂದ 46 ಡಿಗ್ರಿ ಸೆಲ್ಸಿಯಸ್ ರವರೆಗೆ ತಾಪಮಾನ ಇರುವುದರಿಂದ ಹಿರಿಯರು ಮತ್ತು ಮಕ್ಕಳು ತೇಕುಸಿರು ಬಿಡುವಂತಾಗಿದೆ.
ಒಂದು ಕಡೆ ಕೊರೊನಾ ಕಾಟ, ಇನ್ನೊಂದೆಡೆ ಬಿಸಿಲ ಕಾಟದಿಂದಾಗಿ ಜಿಲ್ಲೆಯ ಜನ ಬಸವಳಿದು ಹೋಗಿದ್ದಾರೆ.
ತೀರಾ ಇತ್ತೀಚಿಗೆ ಒಂದು ದಿನದಲ್ಲಿ 16 ಪಾಸಿಟಿವ್ ಪ್ರಕರಣ ಕಂಡುಬಂದಿದ್ದರಿಂದ ಜನರಿಗೆ ಆತಂಕ ಉಂಟಾಗಿತ್ತು. ಆದರೆ ಇಂದು 28 ಪಾಸಿಟಿವ್ ಪ್ರಕರಣಗಳು ಬಂದಿರುವುದರಿಂದ ಜನತೆ ಬೆಚ್ಚಿ ಬಿದ್ದಿದ್ದಾರೆ.
ಬೆಳಗ್ಗೆ 7ಗಂಟೆಗೆ ಶುರುವಾಗುವ ರಣ ಬಿಸಿಲು 11ರಷ್ಟೊತ್ತಿಗಾಗಲೇ ನೆಲ ಕಾದ ಕೆಂಡದಂತಾಗಿರುತ್ತದೆ. ಹೊರಗಡೆ ಕಾಲಿಟ್ಟರೆ ಸಾಕು ಚರ್ಮ ಸುಡವ (ಸುಲಿಯುವ) ಬಿಸಿಲು. ಮಧ್ಯಾಹ್ನದಿಂದಲಂತೂ ನೆತ್ತಿ ಸುಡುವ ಚುರುಗುಡುವ ಬಿಸಿಲು. ಒಂದು ಕಡೆ ಕೊರೊನಾ ರಣಕೇಕೆ ಹಾಕುತ್ತಿದ್ದರೆ, ಇನ್ನೊಂದೆಡೆ ಬಿಸಿಲು ಕೂಡ ನಾನೇನು ಕಮ್ಮಿಯೇ? ಎಂದು ಅದು ಕೂಡ ಹೊಂಚು ಹಾಕುವಂತೆ ಕಾಣುತ್ತಿದೆ.
ಈ ಮೊದಲು ದುಬೈ ನಂಟಿನಿಂದ ಕೊರಾನ ಆಕಲಬುರಗಿಯಲ್ಲಿ ಕಾಲಿಟ್ಟಿತ್ತು. ಆದರೆ ಇಂದು ಮುಂಬೈ ನಂಟಿನಿಂದ ಎಲ್ಲೆಲ್ಲೂ ಕೊರೊನಾ ತನ್ನ ಅಟ್ಟಹಾಸ ತೋರುತ್ತಿದೆ. ಜೇವಗರ್ಿಯ ಕ್ವಾರೈಂಟೈನ್ನಲ್ಲಿದ್ದ ಕೆಲವರಿಗೆ ಪಾಸಿಟಿವ್ ಪ್ರಕರಣ ಬಂದಿದೆ ಎಂಬುದನ್ನು ಅರಿತ ಈವರೆಗೆ ಸೇಫಾಗಿದ್ದ ಅಲ್ಲಿನ ಜನತೆ ಆತಂಕದಲ್ಲಿ ಮುಳುಗುವಂತಾಗಿದೆ.