ಕಲಬುರಗಿ: ಬುಧವಾರ ಕಲಬುರಗಿ ಜಿಲ್ಲೆಯಲ್ಲಿ ಇಬ್ಬರು 80 ವರ್ಷದ ಹಿರಿಯ ಜೀವಿಗಳು ಕೊರೋನಾ ಸೋಂಕಿನಿಂದ ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, 28 ಜನ ಮಹಾರಾಷ್ಟ್ರದಿಂದ ಬಂದಿರುವವರಿಗೆ ವೈರಸ್ ಪಾಸಿಟಿವ್ ಆಗಿದೆ. ಸೋಂಕಿತರ ಸಂಖ್ಯೆ 185ಕ್ಕೆ ಏರಿಕೆಯಾಗಿದೆ.
ಕಲಬುರಗಿ ನಗರದ ಸರಾಫ್ ಬಜಾರ್ (ಪುಟಾಣಿ ಗಲ್ಲಿ) ಪ್ರದೇಶದ 80 ವರ್ಷದ ವೃದ್ಧೆ (P-983) ಹಾಗೂ ಅಫಜಲಪೂರ ತಾಲೂಕಿನ ಅಳಗಿ (ಬಿ) ಗ್ರಾಮದ 80 ವರ್ಷದ ವೃದ್ಧ (P-1039) ಕೊರೋನಾ ವಿರುದ್ಧ ಹೋರಾಡಿ ಗುಣಮುಖರಾದವರು
ಇದರಿಂದ ಕೊರೋನಾ ಪೀಡಿತ 185 ಜನರಲ್ಲಿ 75 ಜನ ಗುಣಮುಖರಾಗಿದ್ದಾರೆ. 7 ಜನ ನಿಧನ ಹೊಂದಿದ್ದು, 103 ಜನರಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಡಿ.ಸಿ. ಶರತ್ ಬಿ. ವಿವರಿಸಿದರು.